
ಬಾಲಿವುಡ್ ಜರ್ನಿಯಲ್ಲಿ ವಿಲನ್ ಆಗಿಯೇ ಹಿಟ್ ಆದ ನಟ ಸೋನು ಸೂದ್ ಈಗ ನ್ಯಾಷನಲ್ ಹೀರೋ ಎಂದೇ ಕರೆಯಲ್ಪಡುತ್ತಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭ ವಲಸಿಗರಿಗೆ ನೆರವಾದ ರೀತಿಯೇ ಅವರಿಗೆ ಜನರಿಂದ ಅಂತಹದೊಂದು ಬಿರುದು ತಂದುಕೊಟ್ಟಿದೆ.
ಸ್ವಾತಂತ್ರ್ಯೋತ್ಸವ ಸಂದರ್ಭ ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸೋನು ಸೂದ್, ನಾನು ನ್ಯಾಷನಲ್ ಹೀರೋ ಅಲ್ಲ, ನನ್ನ ಕೈಲಾಗಿದ್ದನ್ನು ಮಾಡಿದ್ದೇನೆ, ನೀವೂ ಮಾಡಬಹುದು ಎಂದಿದ್ದಾರೆ.
ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯುತ್ತಿಲ್ಲ. ನಾನು ನ್ಯಾಷನಲ್ ಹೀರೋ ಅಲ್ಲ. ಮನೆಗೆ ಹೋಗಲು ಕಷ್ಟಪಡುತ್ತಿದ್ದ ಕಾರ್ಮಿಕರ ನೋವಿನಿಂದ ಇದೆಲ್ಲ ಆರಂಭವಾಯಿತು. ನನಗೆ ನೀವು ನೀಡುತ್ತಿರುವ ಪ್ರೀತಿ ಹಾಗೂ ಆಶಿರ್ವಾದದಿಂದ ಹೃದಯ ತುಂಬಿ ಬಂದಿದೆ. ನಾನು ನನ್ನ ಕೈಯಲಾಗಿದ್ದನ್ನು ಮಾಡುತ್ತಿದ್ದೇನೆ. ನೀವೂ ಮಾಡಬೇಕು. ನಾನು ಮಾಡಿದ ಕೆಲಸವನ್ನು ನೀವು ಅಭಿನಂದಿಸುವುದು ಸುಲಭ. ನೀವೂ ಇದೇ ರೀತಿ ಜನರಿಗೆ ನೆರವಾಗಬೇಕಿದೆ ಎಂದು ಕೇಳಿಕೊಂಡಿದ್ದಾರೆ.
ಹಲವು ಸವಾಲುಗಳನ್ನೆದುರಿಸಿ ಮೇಲೆ ಬಂದ ನಟ ಸೋನು, ಜನರ ನಿರೀಕ್ಷೆಗಳನ್ನು ಪೂರೈಸುವುದೇ ಸವಾಲು ಎಂದು ಹೇಳಿದ್ದಾರೆ. ಪ್ರತಿದಿನ ಸುಮಾರು 100ಕ್ಕೂ ಹೆಚ್ಚು ಮೇಲ್‌ಗಳು ಬರುತ್ತವೆ. ಸಾವಿರಾರು ಮೆಸೇಜ್‌ಗಳು ಬರುತ್ತವೆ. ಅವರೆಲ್ಲರಿಗೂ ನೆರವಾಗಲು ಸಾಧ್ಯವಿಲ್ಲ ಎಂಬುದು ನನಗೂ ಗೊತ್ತು. ಸಮಾನ್ಯವಾಗಿ ದಿನಕ್ಕೆ 30-40 ಸಮಸ್ಯೆ ಪರಿಹಾರಕ್ಕೆ ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಸ್ವಾತಂತ್ರ್ಯೋತ್ಸವ: ನೀವು ನೋಡಲೇಬೇಕಾದ 5 ವೆಬ್‌ಸಿರೀಸ್‌ಗಳಿವು..!
ಯಾರಿಂದ ಸಾಧ್ಯವೋ ಅವರೆಲ್ಲ ಜನರ ಕಷ್ಟಗಳಿಗೆ ಸ್ಪಂದಿಸಿ ನೆರವಾಗಿ, ಇದು ದೇಶಭಕ್ತಿ ತೋರಿಸುವ ನಿಜವಾದ ರೀತಿ ಎಂದು ಅವರು ತಿಳಿಸಿದ್ದಾರೆ. ಕೊರೋನಾದಿಂದಾಗಿ ಜನರು ಈ ಬಾರಿ ಸ್ವಾತಂತ್ರ್ಯದ ಮಹತ್ವವನ್ನು ಸರಿಯಾಗಿ ತಿಳಿದುಕೊಂಡಿದ್ದಾರೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.