ಬಹುಭಾಷಾ ನಟ, ರಿಯಲ್ ಹೀರೋ ಸೋನು ಸೂದ್ ಅವರಿಗೆ ಅಭಿಮಾನಿಯೊಬ್ಬ ಚಿಲ್ಡ್ ಬಿಯರ್ ದಾನ ಮಾಡಿ ಎಂದು ಕೇಳಿಕೊಂಡಿದ್ದಾರೆ. ಅಭಿಮಾನಿ ಪ್ರಶ್ನೆಗೆ ಸೋನು ಸೂದ್ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಹುಭಾಷಾ ನಟ, ರಿಯಲ್ ಹೀರೋ ಸೋನು ಸೂದ್(Sonu Sood) ತಮ್ಮ ಸಾಮಾಜಿಕ ಕೆಲಸಗಳನ್ನು ಮುಂದುವರೆಸಿದ್ದಾರೆ. ಕೊರೊನಾ ಭೀಕರ ಪರಿಸ್ಥಿತಿಯಿಂದ ಹೊರಬಂದ ಮೇಲು ಸೂನು ಸೂದ್ ತಮ್ಮ ಸಮಾಜಮುಖಿ ಕೆಲಸವನ್ನು ನಿಲ್ಲಿಸಿಲ್ಲ. ಕಷ್ಟ ಎಂದವರ ಪಾಲಿಗೆ ನೆರವಾಗುತ್ತಿರುವ ಸೋನು ಸೂದ್ ಸಾಕಷ್ಟು ಜನರ ಪಾಲಿಗೆ ದೇವರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸೋನು ಸೂದ್ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ. ಜನರ ಕಷ್ಟಕಗಳಿಗೆ ಸ್ಪಂದಿಸುತ್ತಿರುತ್ತಾರೆ. ಸೋನು ಸೂದ್ ಅವರಿಗೆ ಈಗಲೂ ಅನೇಕ ಮಂದಿ ಸಹಾಯಕೇಳಿ ಫೋನ್ ಮಾಡುತ್ತಿರುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಈ ನಡುವೆ ಕೆಲವೊಮ್ಮೆ ಅಭಿಮಾನಿಗಳು ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾರೆ.
ಲಾಕ್ ಡೌನ್ ಸಮಯದಲ್ಲೂ ಅನೇಕ ಅಭಿಮಾನಿಗಳು ಚಿತ್ರವಿಚಿತ್ರ ಬೇಡಿಕೆಗಳನ್ನು ಇಡುತ್ತಿದ್ದರು. ಇದೀಗ ಮತ್ತೊಬ್ಬ ಅಭಿಮಾನಿ ಸೋನು ಸೂದ್ ಬಳಿ ಬಿಯರ್ ದಾನ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿರುವ ಅಭಿಮಾನಿ ಬೇಸಿಗೆಯಲ್ಲಿ ಚಿಲ್ಡ್ ಬಿಯರ್ ದಾನ ಮಾಡಿ ಎಂದು ಕೇಳಿಕೊಂಡಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಸೋನು ಸೂದ್ ತಮಾಷೆಯ ಉತ್ತರ ನೀಡಿದ್ದಾರೆ. ಸೋನು ಸೂದ್ ಪ್ರತಿಕ್ರಿಯೆ ಅಭಿಮಾನಿಗಳ ಮನಗೆದ್ದಿದೆ. ಅಭಿಮಾನಿ ಮತ್ತು ಸೋನು ಸೂದ್ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಮೀಮ್ ಅನ್ನು ಅಭಿಮಾನಿ ಶೇರ್ ಮಾಡಿ ಸೋನು ಸೂದ್ ಬಳಿ ಕೇಳಿದ್ದಾರೆ. ಮೀಮ್ ನಲ್ಲಿ 'ಚಳಿಗಾಲದಲ್ಲಿ ಬೆಚ್ಚಗಿನ ಹೊದಿಕೆಗಳನ್ನು ವಿತರಿಸಿದ್ದೀರಿ. ಬೇಸಿಗೆಯಲ್ಲಿ ಚಿಲ್ಡ್ ಬಿಯರ್(chilled beer) ಅನ್ನು ನಮಗೆ ನೀಡುವುದಿಲ್ಲವೇ' ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, 'ಬಿಯರ್ ಜೊತೆಗೆ ಭುಜಿಯಾ ತಿಂಡಿ ಬೇಡವಾ' ಎಂದು ಕೇಳಿದ್ದಾರೆ. ಸೋನು ಸೂದ್ ಪ್ರತಿಕ್ರಿಯೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Punjab Accident: ಯುವಕನ ಪ್ರಾಣ ಕಾಪಾಡಿದ ಸೋನು ಸೂದ್, ಕಾರಿನ ಗಾಜು ಒಡೆದು ಆಸ್ಪತ್ರೆಗೆ ಕರೆದೊಯ್ದ ನಟ!
ಈ ರೀತಿಯ ವಿಚಿತ್ರಗಳು ಪ್ರಶ್ನೆಗಳು ಸೋನ್ ಸೂದ್ ಅವರಿಗೆ ಆಗಾಗ ಎದುರಾಗುತ್ತಲೇ ಇರುತ್ತೆ. ಇಂಥ ಪ್ರಶ್ನೆಗಳಿಗೂ ಪ್ರತಿಕ್ರಿಯೆ ನೀಡುವ ಸೋನು ಸೂದ್ ತಮಾಷೆಯ ಉತ್ತರ ನೀಡುತ್ತಾರೆ. ಸೋನು ಸೂದ್ ಸಮಾಜಿಕ ಕಾರ್ಯ, ಸಹಾಯದ ಮನೋಭಾವ ಜೊತೆಗೆ ಈ ಗುಣಗಳಿಂದ ಸಹ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಸೂನು ಸೂದ್ ಸದ್ಯ ಸಿನಿಮಾ ಮತ್ತು ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸೋನು ಸೂದ್, ರೋಡೀಸ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಎಂಟಿವಿಯಲ್ಲಿ ಪ್ರಸಾರವಾಗುತ್ತಿರುವ 18ನೇ ಸೀಸನ್ ಅನ್ನು ಸೋನು ಸೂದ್ ನಡೆಸಿಕೊಡುತ್ತಿದ್ದಾರೆ. ಈ ಸೀಸನ್ ದಕ್ಷಿಣ ಆಫ್ರಕದಲ್ಲಿ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್, ರೋಡೀಸ್ ನ ಭಾಗವಾಗಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ಈ ರಿಯಾಲಿಟಿ ಶೋ ಅನ್ನು ನಾನು ತುಂಬಾ ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಇದು ಅದ್ಭುತ ಪ್ರಯಾಣವಾಗಿರಲಿದೆ ಎಂದು ಸೋನು ಸೂದ್ ಹೇಳಿದ್ದಾರೆ. ಅಂದಹಾಗೆ ಈ ಹೊಸ ಸೀಸನ್ ಏಪ್ರಿಲ್ 8ರಿಂದ ಪ್ರಾರಂಭವಾಗುತ್ತಿದೆ.
बियर के साथ भुजिया चलेगा ? 🤣 https://t.co/SX3rEtoYgL
— sonu sood (@SonuSood)
Punjab Election ಸೋನು ಸೂದ್ ಮತಗಟ್ಟೆ ಪ್ರವೇಶ ನಿರಾಕರಿಸಿದ ಪಂಜಾಬ್ ಪೊಲೀಸ್, ಕಾರು ಸೀಝ್!
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸೋನು ಸೂದ್ ಈಗಾಗಲೇ ಮೆಗಾಸ್ಟಾರ್ ಚಿರಂಜೀವಿ ಅವರ ಆಚಾರ್ಯ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಮಾನುಷಿ ಚಿಲ್ಲರ್ ಕಾಣಿಸಿಕೊಂಡಿದ್ದಾರೆ. ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಪೃಥ್ವಿರಾಜ್ ಸಿನಿಮಾ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.