'ಜೆಂಟಲ್ ಬರ್ತ್ ಮೆಥಡ್'ನಿಂದ ನ್ಯಾಚುರಲ್ ಡೆಲಿವರಿ ಆಯಿತು; ಸಹಜ ಹೆರಿಗೆ ಸೀಕ್ರೆಟ್ ರಿವೀಲ್ ಮಾಡಿದ ಸೋನಮ್

By Shruthi KrishnaFirst Published Nov 15, 2022, 12:20 PM IST
Highlights

ಬಾಲಿವುಡ್ ಸ್ಟಾರ್ ನಟಿ ಸೋನಮ್ ಕಪೂರ್ ಸಹಜ ಹೆರಿಗೆ ಹೇಗಾಯಿತು ಎಂದು ರಿವೀಲ್ ಮಾಡಿದ್ದಾರೆ. 

ಬಾಲಿವುಡ್ ನಟಿ ಸೋನಮ್ ಕಪೂರ್ ಸದ್ಯ ತಾಯ್ತನ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸೋನಮ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಈ ಬಗ್ಗೆ ಸೋನಮ್ ಮತ್ತು ಆನಂದ್ ಅಹುಜಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು. ಅಂದಹಾಗೆ ಮುದ್ದಾಗ ಮಗನಿಗೆ ವಾಯು ಎಂದು ಹೆಸರಿಟ್ಟಿದ್ದಾರೆ. ಮದುವೆ ಬಳಿಕ ವಿದೇಶದಲ್ಲಿದ್ದ ನೆಲೆಸಿದ್ದ ಸೋನಮ್ ಕಪೂರ್ ಸದ್ಯ ತಂದೆ ಮನೆ ಮುಂಬೈನಲ್ಲಿದ್ದಾರೆ. ಸೋನಮ್ ದಂಪತಿ ಇದುವಾರೆಗೂ ಮಗನ ಫೋಟೋ ರಿವೀಲ್ ಮಾಡಿಲ್ಲ. ಆದರೆ ಆಗಾಗ ಮಗನ ಜೊತೆ ಇರುವ ಫೋಟೋ ಶೇರ್ ಮಾಡುತ್ತಿರುತ್ತಾರೆ. ಇದೀಗ ಮೊದಲ ಬಾರಿಗೆ ಸೋನಮ್ ಕಪೂರ್ ತನ್ನ ಹೆರಿಗೆ ಬಗ್ಗೆ ಮಾತನಾಡಿದ್ದಾರೆ. ನ್ಯಾಚುರಲ್ ಡೆಲಿವರಿ ಆದ ಬಗ್ಗೆ ಸೋನಮ್ ಕಪೂರ್ ಮೊದಲ ಬಾರಿಗೆ ವಿವರಿಸಿದ್ದಾರೆ. 

ಅನೇಕರು ತನಗೆ ಡೆಲಿವರಿ ಬಗ್ಗೆ ಮತ್ತು ಗರ್ಭಧಾರಣೆ ಸಮಯದಲ್ಲಿ ಅನುಸರಿಸಿದ ನಿಯಮದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದಿರುವ ಸೋನಮ್ ಕಪೂರ್ ಈ ಬಗ್ಗೆ ವಿವರಿಸಿದ್ದಾರೆ. ತನ್ನ ಕೈಲಾದಷ್ಟು ಪ್ರಶ್ನೆಗಳಿಗೆ ಉತ್ತರ ನೀಡುತ್ತೀನಿ ಎಂದು ಹೇಳಿದ್ದಾರೆ. ಹೆರಿಗೆಗೆ ಜೆಂಟಲ್ ಬರ್ತ್ ಮೆಥಡ್ ಅನ್ನು ಅನುಸರಿಸಿರುವುದಾಗಿ ಹೇಳಿದ್ದಾರೆ. ಜೆಂಟಲ್ ಬರ್ತ್ ಮೆಥಡ್ ಎಂದರೇನು ಎನ್ನುವುದನ್ನು ಸಹ ವಿವರಿಸಿದ್ದಾರೆ. 

ಗರ್ಭಾಧಾರಣೆ ಪಯಣ ತುಂಬಾ ವಿಭಿನ್ನವಾಗಿದೆ ಎಂದಿರುವ ಸೋನಮ್ ಕಪೂರ್, ನಾನು ಸಾಧ್ಯವಾದಷ್ಟು ನೈಸರ್ಗಿಕ ಪಯಣ ಇಷ್ಟಪಡುತ್ತೀನಿ. ಅದು ಸಾಧ್ಯವಾದಷ್ಟು ಕಡಿಮೆ ವದ್ಯಕೀಯ ವ್ಯವಸ್ಥೆಯೊಂದಿಗೆ ಸ್ವಾಭಾವಿಕ ಹೆರಿಗೆಗೆ ಕಾರಣವಾಗುತ್ತದೆ.  ನಾನು ಡಾ ಗೌರಿ ಮೋತಾ ಅವರ ಬಳಿ ಜೆಂಟಲ್ ಬರ್ತ್ ಮೆಥಡ್‌ನ ಸಹಾಯವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಗರ್ಭಧಾರಣೆ 
ಪಯಣವನ್ನು ಹೇಗೆ ಎದುರಿಸಬೇಕೆಂದು ವಿವರಿಸುವ ಜೆಂಟಲ್ ಬರ್ತ್ ಮೆಥಡ್ ಎಂಬ ಸುಂದರವಾದ ಪುಸ್ತಕವನ್ನು ಸಹ ಅವರು ಬರೆದಿದ್ದಾರೆ' ಎಂದು ಹೇಳಿದರು. 

ಡಾ. ಮೋತಾ ಅವರು ಸಾಕಷ್ಟು ಆಯುರ್ವೇದ ಅಭ್ಯಾಸಗಳು, ಸೃಜನಾತ್ಮಕ ಚಿಕಿತ್ಸೆ ಮತ್ತು ಹೋಮಿಯೋಪತಿಯನ್ನು ಬಳಸುತ್ತಾರೆ. ನಾನು ಅವರು ಹೇಳಿದ್ದನ್ನು ಬ್ಲೈಂಡ್ ಆಗಿ ಅನುಸರಿಸಿದೆ. ಅವರು ಹೇಳಿದ ಎಲ್ಲಾ ವಿಧಾನವನ್ನು ಅನುಸರಿಸಿದೆ. ಸ್ವಾಭಾವಿಕ ಹೆರಿಗೆ ಆಯಿತು. ಎದೆಹಾಲುಣಿಸುವುದು ತುಂಬಾ ಸುಲಭವಾಗುತ್ತಿದೆ' ಎಂದು ಹೇಳಿದ್ದಾರೆ.  

ಮಗನಿಗೆ ಎದೆ ಹಾಲುಣಿಸುತ್ತ ಕರ್ವ ಚೌತ್‌ಗೆ ಮೇಕಪ್ ಮಾಡಿಕೊಂಡ ನಟಿ ಸೋನಮ್: ಫೋಟೋ ವೈರಲ್

ಜೆಂಟಲ್ ಬರ್ತ್ ಮೆಥಡ್  ಎಂದರೇನು?

ಜೆಂಟಲ್ ಬರ್ತ್ ಮೆಥಡ್ ಎಂದರೆ, ಎಲ್ಸಾ ತಾಯಂದಿರು ಹೆಚ್ಚು ಆರಾಮದಾಯಕ, ಆತ್ಮವಿಶ್ವಾದಿಂದ ಮತ್ತು ಸಹಜವಾದ ಜನನ ಪ್ರಕ್ರಿಯೆಯನ್ನು ಹೊಂದಲು ಡಾ.ಮೋತಾ ವಿನ್ಯಾಸಗೊಳಿಸಿದ ವಿಧಾನವಾಗಿದೆ. 

ಸೋನಮ್‌ರಿಂದ ಬಿಪಾಶಾರವರೆಗೆ ಬೋಲ್ಡ್ ಬೇಬಿ ಬಂಪ್‌ ಮೂಲಕ ನ್ಯೂಸ್‌ ಮಾಡಿದ ನಟಿಯರು

ಇದು ಮನಸ್ಸು ಮತ್ತು ದೇಹದಲ್ಲಿ ಧನಾತ್ಮಕವಾಗಿರುವಂತೆ ನೋಡಿಕೊಳ್ಳುತ್ತದೆ. ಈ ವಿಧಾನದಲ್ಲಿ 18 ವಾರಗಳು ಸಕ್ಕರೆ ಮುಕ್ತ ಆಹಾರವನ್ನು ಸೋವಿಸಬೇಕು. ಗರ್ಭಾವಸ್ಥೆಯಲ್ಲಿ ಯೋಗ ಮಾಡಬೇಕು. ಇದರಿಂದ ಜನನದ ಸಮಯದಲ್ಲಿ ತಾಯಿ ಹೆಚ್ಚು ಆತ್ಮವಿಶ್ವಾಸ, ಆರಾಮದಾಯಕ ಮತ್ತು ಶಾಂತವಾಗಿರುತ್ತಾರೆ. ಇದನ್ನು UKಯಲ್ಲಿ ಅಭ್ಯಾಸ ಮಾಡಲಾಗುತ್ತಿತ್ತು ಇತ್ತೀಚೆಗೆ ಭಾರತದಲ್ಲಿಯೂ ಸಹ ತಾಯಂದಿರಿಗೆ ಪರಿಚಯಿಸಲಾಗಿದೆ. ಇದು ಮೂಲಭೂತವಾಗಿ ಆರೋಗ್ಯಕರವಾದ ವಿಧಾನವಾಗಿದೆ ಎಂದು ದೆಹಲಿಯ ಎಲಾಂಟಿಸ್ ಹೆಲ್ತ್‌ಕೇರ್‌ನ ಸ್ತ್ರೀರೋಗ ತಜ್ಞ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ ಮನ್ನನ್ ಗುಪ್ತಾ ಹೇಳಿದ್ದಾರೆ.

click me!