ಸಾವಿಗೆ ಗೆಳತಿಯರ ದೂರುವವರಿಗೆ 'ಆ' ಪದ ಬಳಸಿ ಝಾಡಿಸಿದ ಸೋನಂ!

Published : Jun 15, 2020, 10:54 PM IST
ಸಾವಿಗೆ ಗೆಳತಿಯರ ದೂರುವವರಿಗೆ 'ಆ' ಪದ ಬಳಸಿ ಝಾಡಿಸಿದ ಸೋನಂ!

ಸಾರಾಂಶ

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ/ ಗೆಳತಿಯರ ದೂರುವವರ ವಿರುದ್ಧ ಸೋನಂ ಕಪೂರ್ ಕಿಡಿ/ ಇಂಥವುಗಳನ್ನು ಸಹಿಸಲು ಸಾಧ್ಯವಿಲ್ಲ/  ಸುಶಾಂತ್ ಸಾವಿಗೆ ಅವರ ಗೆಳತಿಯರಾಗಿದ್ದ ಅಂಕಿತಾ ಲೋಕಂಡೆ, ರಿಯಾ ಚಕ್ರವರ್ತಿ ಕಾರಣ  ಎಂಬ ಆರೋಪ ಕೇಳಿಬಂದಿತ್ತು

ಮುಂಬೈ(ಜೂ. 15) ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಅವರ ಗೆಳತಿಯನ್ನು ದೂರುತ್ತಿರುವವರ ವಿರುದ್ಧ ನಟಿ ಸೋನಂ ಕಪೂರ್ ಕೆಂಡವಾಗಿದ್ದಾರೆ.

ಯಾರದ್ದಾದರೂ ಸಾವಿಗೆ ಅವರ ಗೆಳತಿ, ಮಾಜಿ ಗೆಳತಿ, ಕುಟುಂಬ, ಸಹೋದ್ಯೋಗಿ ಅಥವಾ ಇನ್ನಾರನ್ನಾದರೂ ದೂರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳಿವು

ಸೋನಂ ಕಪೂರ್ ಅವರಿಗಿಂತಲೂ ಮುಂಚೆ ನಟಿ ಕೃತಿ ಸನೋನ್ ಸಹೋದರಿ ನುಪುರ್ ಕೆಂಡವಾಗಿದ್ದರು.  ಟ್ರೋಲರ್ ಗಳನ್ನು ಹೃದಯ ಇಲ್ಲದವರು ಎಂದು ಝಾಡಿಸಿದ್ದರು.

ಪ್ರತಿಯೊಬ್ಬರು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವಂತಹ ಸ್ಥಿತಿ ತಲುಪಿದ್ದಾರೆ. ಯಾರು ಆಘಾತದಲ್ಲಿ ಇದ್ದಾರೋ ಅವರ ಮೇಲೆಯೇ ದಾಳಿ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇಂಥವನ್ನೆಲ್ಲ ಸಹಿಸಿಕೊಂಡು ಕೂರಬೇಕಾ ಎಂದು ನುಪುರ್ ಪ್ರಶ್ನೆ ಮಾಡಿದ್ದರು.

ಬಾಲಿವುಡ್ ನ ಉದಯೋನ್ಮುಖ ನಟ  ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಮುಖೇನ ಮನೆಮಾತಾಗಿದ್ದ ಸುಶಾಂತ್ ಸಿಂಗ್ ಭಾನುವಾರ ಮುಂಬೈನ ತಮ್ಮ ನಿವಾಸದಲ್ಲಿಯೇ ನೇಣಿಗೆ ಶರಣಾಗಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!