ಪ್ರಭಾಸ್ ಗೆ ಜೋಡಿಯಾಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಂ ಡ್ಯಾನ್ಸರ್ ಇಮಾನ್ವಿ ಈ ಚಿತ್ರದಲ್ಲಿ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. 1940ರ ದಶಕದ ಕಥೆಯನ್ನು ಹನು ರಾಘವಪುಡಿ ಪ್ರೇಕ್ಷಕರ ಎದುರು ಪ್ರಸ್ತುತಪಡಿಸಲಿದ್ದಾರೆ. ಬಾಲಿವುಡ್ ದಿಗ್ಗಜ ..
ಡಾರ್ಲಿಂಗ್ ಪ್ರಭಾಸ್ (Darling Prabhas) ಯಾರಿಗೆ ಗೊತ್ತಿಲ್ಲ? ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ಬಳಿಕ ನಟ ಪ್ರಭಾಸ್ ಎಂದರೆ ಇಡೀ ಜಗತ್ತಿಗೇ ಗೊತ್ತು. ಬಾಹುಬಲಿ ನಂತರ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಸಿನಿಮಾಗಳು ಎಲ್ಲವೂ ಹೈ ಬಜೆಟ್ ಸಿನಿಮಾಗಳೇ ಆಗಿವೆ. ಆದರೆ, ರಾಧೆ ಶ್ಯಾಮ್, ಆದಿ ಪುರುಷ್ ಮುಂತಾದ ಸಿನಿಮಾಗಳು ಸೋತಿವೆ, ಸಲಾರ್, ಕಲ್ಕಿ ಸಿನಿಮಾಗಳು ಗೆದ್ದಿವೆ.
ಇತ್ತೀಚೆಗಷ್ಟೇ ಬಿಡುಗಡೆ ಕಂಡು ಕಲ್ಕಿ ಸಿನಿಮಾ ಸೂಪರ್ ಹಿಟ್ ದಾಖಲಿಸಿದೆ. ಪ್ರಭಾಸ್ ನಟನೆಯಲ್ಲಿ ಅದಕ್ಕೂ ಮೊದಲು ಮೂಡಿ ಬಂದಿದ್ದ, ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. ಈ ಮೂಲಕ ಸದ್ಯ ನಟ ಪ್ರಭಾಸ್ ಅವರು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಭಾರತದ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಇದೀಗ, ಸೀತಾರಾಮಂ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ್ದ ಹನು ರಾಘವಪುಡಿ ಜೊತೆ ಹೊಸ ಸಿನಿಮಾಗೆ ಜೈ ಎಂದಿದ್ದಾರೆ.
ಮೇರು ಕಲಾವಿದ ನರಸಿಂಹರಾಜು ಕೊರಗುತ್ತ ಕುಗ್ಗಿಹೋಗಿ ಇಹಲೋಕ ತ್ಯಜಿಸಿದ್ದು ಈ ಕಾರಣಕ್ಕೆ..!
ಸಲಾರ್ ಹಾಗೂ ಕಲ್ಕಿ 2898AD ಸೂಪರ್ ಸಕ್ಸಸ್ ಬೆನ್ನಲ್ಲೇ ಡಾರ್ಲಿಂಗ್ ಪ್ರಭಾಸ್ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿಂದು ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.
'ಸೀತಾರಾಮಂ' ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿರುವ ಹನು ರಾಘವಪುಡಿ ಪ್ರಭಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ '#ಪ್ರಭಾಸ್ ಹನು' ಎಂದು ತಾತ್ಕಾಲಿಕವಾಗಿ ಟೈಟಲ್ ಇಡಲಾಗಿದೆ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ನಡಿ ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಪ್ರಭಾಸ್ ಗೆ ಜೋಡಿಯಾಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಂ ಡ್ಯಾನ್ಸರ್ ಇಮಾನ್ವಿ ಈ ಚಿತ್ರದಲ್ಲಿ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. 1940ರ ದಶಕದ ಕಥೆಯನ್ನು ಹನು ರಾಘವಪುಡಿ ಪ್ರೇಕ್ಷಕರ ಎದುರು ಪ್ರಸ್ತುತಪಡಿಸಲಿದ್ದಾರೆ. ಬಾಲಿವುಡ್ ದಿಗ್ಗಜ ಮಿಥುನ್ ಚಕ್ರವರ್ತಿ ಮತ್ತು ಜಯಪ್ರದಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
ಶಂಕರ್ ನಾಗ್-ಅರುಂಧತಿ ನಾಗ್ ಒಮ್ಮೆ ಮದುವೆ ಆಗದಿರಲು ನಿರ್ಧರಿಸಿದ್ದು ಯಾಕೆ? ಕಾರಣ ಏನಾಗಿತ್ತು..?
ಸುದೀಪ್ ಚಟರ್ಜಿ ಐಎಸ್‌ಸಿ ಛಾಯಾಗ್ರಹಣ, ವಿಶಾಲ್ ಚಂದ್ರಶೇಖರ್ ಸಂಗೀತ, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ. ಶೀಘ್ರದಲ್ಲಿಯೇ ಪ್ರಭಾಸ್ ಹಾಗೂ ಹನು ರಾಘವಪುಡಿ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.