ಮನೆಯಲ್ಲಿ ದುಬಾರಿ ಕಾರಿದ್ದರೂ ಸೈಫ್‌‌ನನ್ನು ಪುತ್ರ ಆಟೋ ರಿಕ್ಷಾ ಮೂಲಕ ಆಸ್ಪತ್ರೆ ಕರೆದೊಯ್ದಿದ್ದೇಕೆ?

By Chethan Kumar  |  First Published Jan 16, 2025, 4:49 PM IST

ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಸೈಫ್ ಆಲಿ ಖಾನ್‌ಗೆ 2 ಸರ್ಜರಿ ಮಾಡಲಾಗಿದೆ. ಆದರೆ ಗಾಯಗೊಂಡ ಸೈಫ್ ಆಲಿ ಖಾನ್‌ನನ್ನು ಪುತ್ರ ಇಬ್ರಾಹಿಂ ಆಲಿ ಖಾನ್ ಆಟೋ ರಿಕ್ಷಾ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದೇಕೆ ಅನ್ನೋ ಪ್ರಶ್ನೆ ಎದುರಾಗಿದೆ. ಇದಕ್ಕೆ ಪೊಲೀಸರು ನೀಡಿದ ಉತ್ತರವೇನು?


ಮುಂಬೈ(ಜ.16) ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಿನ ದಾಳಿ ಬಾಲಿವುಡ್ ಸೆಲೆಬ್ರೆಟಿಗಳನ್ನು ಬೆಚ್ಚಿ ಬೀಳಿಸಿದೆ. ಮುಂಬೈನಲ್ಲಿ ಸೆಲೆಬ್ರೆಟಿಗಳ ಮೇಲೆ ಸತತ ದಾಳಿ ಪ್ರಯತ್ನಗಳು ನಡಯುತ್ತಿರುವುದು ಆತಂಕ ಹೆಚ್ಚಿಸಿದೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈಫ್ ಆಲಿ ಖಾನ್‌ಗೆ 2 ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಸೈಫ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಬಾಂದ್ರಾ ಮನೆಯಲ್ಲಿ ಮುಂಜಾನೆ ಸೈಫ್ ಮೇಲೆ ಅನಾಮಿಕನಿಂದ ದಾಳಿಯಾಗಿದೆ. ಗಾಯಗೊಂಡ ಸೈಫ್ ಆಲಿ ಖಾನ್‌ನನ್ನು ಹಿರಿಯ ಪುತ್ರ ಇಬ್ರಾಹಿಂ ಆಲಿ ಖಾನ್ ಬೆಳಗ್ಗೆ 3.30ರ ವೇಳೆಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೈಫ್ ಮನೆಯಲ್ಲಿ ಹಲವು ದುಬಾರಿ ಕಾರುಗಳಿವೆ. ಆದರೆ ಸೈಫ್ ಆಲಿ ಖಾನ್‌ನನ್ನು ಆಟೋ ರಿಕ್ಷಾ ಮೂಲಕ ಪುತ್ರ ಆಸ್ಪತ್ರೆ ದಾಖಲಿಸಿದ್ದಾರೆ. ಬಗೆ ಬಗೆಯ ಕಾರುಗಳಿದ್ದರೂ ಪುತ್ರ ಇಬ್ರಾಹಿಂ ಆಲಿ ಖಾನ್ ಆಟೋ ರಿಕ್ಷಾ ಮೂಲಕ ಆಸ್ಪತ್ರೆ ಸಾಗಿಸಿದ್ದೇಕೆ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಪೊಲೀಸರು ಉತ್ತರಿಸಿದ್ದಾರೆ.

ಸೈಫ್ ಆಲಿ ಖಾನ್ ಬಳಿ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್, ಫೋರ್ಡ್ ಮಸ್ತಾಂಗ್, ಲ್ಯಾಂಡ್ ರೋವರ್ ಡಿಫೆಂಡರ್, ಆ್ಯಡಿ ಕ್ಯೂ7, ಜೀಪ್ ವ್ರಾಂಗ್ಲರ್ ಸೇರಿದಂತೆ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಆದರೆ ಸೈಫ್ ತುರ್ತು ಸಂದರ್ಭದಲ್ಲಿ ಈ ಕಾರುಗಳನ್ನು ಬಳಸಲು ಸಾಧ್ಯವಾಗಿಲ್ಲ. ಬೆಳಗಿನ ಜಾವ ಅನಾಮಿಕನೊಬ್ಬ ಬಾಂದ್ರಾದಲ್ಲಿರುವ ಸೈಫ್ ಆಲಿ ಖಾನ್ ಮನೆ ನುಗ್ಗಿ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ಸೈಫ್ ಆಲಿ ಖಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಪತ್ನಿ ಕರೀನಾ ಕಪೂರ್ ಖಾನ್, ಸೈಫ್ ಹಿರಿಯ ಪುತ್ರ ಇಬ್ರಾಹಿಂ ಆಲಿ ಖಾನ್‌ಗೆ ಮಾಹಿತಿ ನೀಡಿದ್ದಾರೆ.

Tap to resize

Latest Videos

ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ, ಆಸ್ಪತ್ರೆಗೆ ದಾಖಲು

ಸೈಫ್ ಮೊದಲ ಪತ್ನಿ ಅಮೃತಾ ಸಿಂಗ್ ಪುತ್ರ ಇಬ್ರಾಹಿಂ ಆಲಿ ಖಾನ್ ದೌಡಾಯಿಸಿದ್ದಾರೆ. ಬೆಳಗಿನ ಜಾವ ಸೈಫ್ ಮನೆಯಲ್ಲಿ ಕಾರು ಚಲಾಕರು ಇರಲಿಲ್ಲ. ಒಂದಿಬ್ಬರು ತಾರು ಚಾಲಕರು ಪ್ರತಿ ದಿನ ಬೆಳಗ್ಗೆ ಆಗಮಿಸುತ್ತಾರೆ. ಹೀಗಾಗಿ ಯಾವುದೇ ಚಾಲಕರು ಇರಲಿಲ್ಲ. ಇತ್ತ ಇಬ್ರಾಹಿಂ ಆಲಿ ಖಾನ್ ದುಬಾರಿ ಮೌಲ್ಯದ ಕಾರು ಚಲಾಯಿಸಿ ಸೈಫ್ ಆಲಿ ಖಾನ್‌ನನ್ನು ಆಸ್ಪತ್ರೆ ಸಾಗಿಸುವ ಪರಿಸ್ಥಿತಿಯಲ್ಲೂ ಇರಲಿಲ್ಲ. ಹೀಗಾಗಿ ಮನೆಯ ಹೊರಭಾಗದಲ್ಲಿ ಆಟೋ ಲಭ್ಯವಿತ್ತು. ಹೆಚ್ಚು ಯೋಚಿಸದೆ ತಕ್ಷಣವೇ ಆಟೋ ಮೂಲಕ ಸೈಫ್ ಆಲಿ ಖಾನ್‌ನನ್ನು ಆಟೋ ರಿಕ್ಷಾ ಮೂಲಕ ಇಬ್ರಾಹಿಂ ಆಲಿ ಖಾನ್ ಆಸ್ಪತ್ರೆ ಸಾಗಿಸಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಅನಾಮಿಕ ಸೈಫ್ ಆಲಿ ಖಾನ್ ಮನೆಗೆ ನುಗ್ಗಿ ದಾಳಿಗೆ ಮುಂದಾಗಿದ್ದಾನೆ. ಆದರೆ ಸೈಫ್ ಆಲಿ ಖಾನ್ ಮನೆ ಸಿಬ್ಬಂದಿ ಈ ಅನಾಮಿಕನ ದಾಳಿ ತಡೆಯುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಸದ್ದು ಕೇಳಿ ಓಡೋಡಿ ಬಂದ ಸೈಫ್ ಆಲಿ ಖಾನ್ ಮೇಲೂ ಅನಾಮಿಕ ದಾಳಿ ಮಾಡಿದ್ದಾನೆ. ಸೈಫ್ ಜೊತೆ ಬಾಂದ್ರಾ ಮನೆಯಲ್ಲಿ ಕರೀನಾ ಕಪೂರ್, ಸೈಫ್ ಹಾಗೂ ಇಬ್ಬರು ಮಕ್ಕಳು ಮಾತ್ರ ಇದ್ದರು. ಇನ್ನು ಮನೆ ಸಿಬ್ಬಂದಿ ಕೂಡ ಇದ್ದರು. 

ಬಹುಕೋಟಿ ಒಡೆಯ ಸೈಫ್ ಅಲಿ ಖಾನ್, ನಟನ ಆಸ್ತಿ ಎಷ್ಟು ಗೊತ್ತಾ?
 

click me!