ಸೋಮಿ ಜೊತೆ ಸಿಕ್ಕಿಬಿದ್ದ ಸಲ್ಮಾನ್ ಖಾನ್: ಸಂಗೀತಾ ಜೊತೆ ಬ್ರೇಕಪ್‌ಗೆ ಆಯ್ತು ಕಾರಣ!

By Roopa Hegde  |  First Published Sep 19, 2024, 11:36 AM IST

ಸಂಗೀತಾ ಬಿಜ್ಲಾನಿ ಹಾಗೂ ಸಲ್ಮಾನ್ ಖಾನ್ ಮದುವೆಗೆ ಅಡ್ಡಿಯಾಗಿದ್ದು ಸೋಮಿ ಅಲಿ. ಮದುವೆಗೆ ಒಂದು ತಿಂಗಳಿರುವಾಗ ಸಲ್ಮಾನ್ ದ್ರೋಹ ಸಂಗೀತಾಗೆ ಗೊತ್ತಾಗಿತ್ತು. ಎಲ್ಲ ಮುಗಿದ್ಮೇಲೆ ಸೋಮಿ, ಸಂಗೀತಾ ಬಳಿ ಕ್ಷಮೆ ಕೇಳಿದ್ರು. 
 


ಬಾಲಿವುಡ್‌ನ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಸಲ್ಮಾನ್ ಖಾನ್ (Bollywood most wanted bachelor Salman Khan), ಪರ್ಸನಲ್ ವಿಷ್ಯಕ್ಕೆ ಅನೇಕ ಬಾರಿ ಸುದ್ದಿಯಲ್ಲಿರ್ತಾರೆ. ಸಲ್ಮಾನ್ ಮದುವೆ ಚರ್ಚೆ ಇಂದು ನಿನ್ನೆಯದಲ್ಲ. ಅನೇಕ ಬಾಲಿವುಡ್ ಸ್ಟಾರ್ಸ್ ಹೆಸರು ಅವರ ಜೊತೆ ಥಳುಕು ಹಾಕಿಕೊಂಡಿದೆ. ಸೋಮಿ ಅಲಿ (Somi Ali), ಸಂಗೀತಾ ಬಿಜ್ಲಾನಿ (Sangeeta Bijlani), ಕತ್ರಿನಾ ಕೈಫ್ (Katrina Kaif) ಮತ್ತು ಐಶ್ವರ್ಯಾ ರೈ (Aishwarya Rai) ಸೇರಿದಂತೆ ಅನೇಕ ಬಾಲಿವುಡ್ ನಟಿಯರೊಂದಿಗೆ ಸೂಪರ್‌ಸ್ಟಾರ್ ಹೆಸರು ಲಿಂಕ್ ಆಗಿತ್ತು. ಆದ್ರೆ ಸಲ್ಮಾನ್ ಖಾನ್ ಗೆ ಮದುವೆ ಭಾಗ್ಯ ಕೂಡಿ ಬಂದಿಲ್ಲ. ಈಗ್ಲೂ ಅವರು ಬ್ಯಾಚುಲರ್.  

ಒಂದು ಟೈಂನಲ್ಲಿ ಸಂಗೀತಾ ಜೊತೆ ಸಲ್ಮಾನ್ ಮದುವೆ ಫಿಕ್ಸ್ ಆಗಿತ್ತು. ಮದುವೆ ಕಾರ್ಡ್ ಕೂಡ ಹಂಚಲಾಗಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಅಲಿ ಜೊತೆ ಸಲ್ಮಾನ್ ಖಾನ್ ರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸಂಗೀತಾ, ಮದುವೆ  ಮುರಿದುಕೊಂಡಿದ್ರು. ಸಂದರ್ಶನವೊಂದರಲ್ಲಿ ಸೋಮಿ ಅಲಿ ಈ ವಿಷ್ಯವನ್ನು ಹೇಳಿದ್ದಾರೆ. ಸಂಗೀತಾ ಹಾಗೂ ಸಲ್ಮಾನ್ ಖಾನ್ ಮದುವೆ ಮುರಿದುಬಿದ್ದಿದ್ದಕ್ಕೆ ನಾನು ಸಂಗೀತಾ ಕ್ಷಮೆ ಕೇಳಿದ್ದೆ ಎಂದಿದ್ದಾರೆ.  

Tap to resize

Latest Videos

ಕಮೆಂಟ್ ನೋಡಿ ಬೇಜಾರಾದ ಬ್ಲಾಗರ್ ಗೆ ಧೈರ್ಯ ತುಂಬಿದ ಡಾ. ಬ್ರೋ

ಸಂಗೀತಾಗೆ ಸಾರಿ ಕೇಳಿದ್ದ ಸೋಮಿ : ಜೂಮ್ ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದ ಸೋಮಿ, ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸಂಗೀತಾ ಹಾಗೂ ಸಲ್ಮಾನ್ ಮದುವೆ ಮುರಿದು ಬಿದ್ದ ವರ್ಷಗಳ ನಂತ್ರ ನಾನು ಸಂಗೀತಾ ಮುಂದೆ ಕ್ಷಮೆ ಯಾಚಿಸಿದ್ದೆ. ಅಜರುದ್ದೀನ್ ಅವರನ್ನು ಮದುವೆಯಾಗಿ ಖುಷಿಯಾಗಿದ್ದೇನೆ ಎಂದು ಸಂಗೀತಾ ಹೇಳಿದ್ರು. ಆದ್ರೆ ಇದಾದ ತಿಂಗಳ ನಂತ್ರ ಸಂಗೀತಾ, ಅಜರುದ್ದೀನ್ ಜೊತೆಗಿನ ಸಂಬಂಧ ಕಡಿದುಕೊಂಡಿದ್ದರು ಎಂದು ಸೋಮಿ ಹೇಳಿದ್ದಾರೆ. 

ನನ್ನಿಂದ ನಿಮಗೆ ತುಂಬಾ ನೋವಾಗಿದೆ. ಆ ಸಂದರ್ಭದಲ್ಲಿ ನಾನು ಚಿಕ್ಕವಳು. ನಾನೇನು ಮಾಡ್ತಿದ್ದೇನೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಸೋಮಿ, ಸಂಗೀತಾ ಮುಂದೆ ಕ್ಷಮೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಂಗೀತಾ, ನನಗೆ ಬೇಸರವಿಲ್ಲ. ನಾನು ಅಜರುದ್ದೀನ್ ಮದುವೆಯಾಗಿ ಖುಷಿಯಾಗಿದ್ದೇನೆ ಎಂದಿದ್ದರು. ಆದ್ರೆ ಇದಾಗಿ ಒಂದು ತಿಂಗಳಿಗೆ, ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನನಗೆ ಆಗ ಬರೀ 16 ವರ್ಷ. ಆದ್ರೆ ಆ ವಯಸ್ಸಿನಲ್ಲಿ ನಾನು ಏನು ತಪ್ಪು ಮಾಡಿದ್ದೇನೆ ಎಂಬುದು ನನಗೆ ಗೊತ್ತಾಗಿತ್ತು. ಪ್ರಾಮಾಣಿಕವಾಗಿ ನಾನು ಸಂಗೀತಾ ಕ್ಷಮೆಯಾಚಿಸಲು ಬಯಸಿದ್ದೆ ಎಂದು ಸೋಮಿ ಹೇಳಿದ್ದಾರೆ. 

ಈ ಡೇಟ್ ಗೆ ನಡೆಯಬೇಕಿತ್ತು ಸಂಗೀತಾ – ಸಲ್ಮಾನ್ ಮದುವೆ : ಸಲ್ಮಾನ್ ಖಾನ್ ಮತ್ತು ಸಂಗೀತಾ ಪ್ರೀತಿಸುತ್ತಿದ್ದರು. 1986ರಲ್ಲಿ ಇಬ್ಬರ ಡೇಟಿಂಗ್ ಸುದ್ದಿ ಎಲ್ಲ ಕಡೆ ಹರಿದಾಡ್ತಾ ಇತ್ತು. ಇಬ್ಬರು ಮದುವೆಗೆ ಸಿದ್ಧತೆ ಕೂಡ ನಡೆಸಿದ್ದರು. ಅಂದುಕೊಂಡಂತೆ ಆಗಿದ್ರೆ ಮೇ. 27, 1994ರಲ್ಲಿ ಸಲ್ಮಾನ್ ಖಾನ್ ಮದುವೆ ಅದ್ಧೂರಿಯಾಗಿ ನಡೆಯಬೇಕಿತ್ತು. ಕಾರ್ಡ್ ತಯಾರಾಗಿತ್ತು. ಆದ್ರೆ ಮದುವೆಗೆ ಇನ್ನೇನು ಒಂದು ತಿಂಗಳಿದೆ ಎನ್ನುವಾಗ ಸಲ್ಮಾನ್ ಖಾನ್ ದಾರಿ ಬದಲಿಸಿದ್ರು. ಸಲ್ಮಾನ್ ಖಾನ್ ಹಾಗೂ ಸೋಮಿಯನ್ನು ಒಟ್ಟಿಗೆ ನೋಡಿದ್ರು ಸಂಗೀತಾ. 

ಪೈಪ್ ಲೈನ್ ಹತ್ತಿ ಸೋಮಿ ಭೇಟಿಯಾಗ್ತಿದ್ದ ಸಲ್ಮಾನ್ ಖಾನ್ : ಸೋಮಿ ಮನೆ ವಿಂಧ್ಯಾಚಲದಲ್ಲಿತ್ತು. ಅಲ್ಲಿಗೆ ಬರ್ತಿದ್ದ ಸಲ್ಮಾನ್ ಖಾನ್, ಪೈಪ್ ಲೈನ್ ಹತ್ತಿ ಅವರ ಕೋಣೆಗೆ ಹೋಗ್ತಿದ್ದರು. ಒಂದು ದಿನ ಸಲ್ಮಾನ್ ಖಾನ್, ಸೋಮಿ ರೂಮಿನಲ್ಲಿರುವಾಗ ಸಂಗೀತಾ ಅಲ್ಲಿಗೆ ಬಂದಿದ್ರು. ಸೋಮಿ ಬಳಿ 10 ನಿಮಿಷ ಕೇಳಿದ್ದ ಸಲ್ಮಾನ್, ಸಂಗೀತಾ ಜೊತೆ ಮಾತುಕತೆ ನಡೆಸಿದ್ದರು. ಸಲ್ಮಾನ್ ಹಾಗೂ ನನ್ನ ಸಂಬಂಧ ಮುರಿದುಕೊಳ್ಳುವ ಸಲ್ಮಾನ್, ಸಂಗೀತಾ ಮದುವೆ ಆಗ್ತಾರೆ ಅಂತ ಸೋಮಿ ಭಾವಿಸಿದ್ರು. ಆದ್ರೆ ಆಗಿದ್ದು ಉಲ್ಟಾ. ಸಂಗೀತಾ ಹಾಗೂ ಸಲ್ಮಾನ್ ಬ್ರೇಕ್ ಅಪ್ ಆಗಿತ್ತು.  

ಬಿಗ್ ಬಾಸ್ ಪ್ರೊಮೋ ಶೂಟಿಂಗ್ ನಲ್ಲಿ ಸುದೀಪ್ ಝಲಕ್, ವಿಡಿಯೋ ನೋಡಿ ಉಘೇ ಎಂದ ಫ್ಯಾನ್ಸ್

ಈಗ್ಲೂ ಬೆಸ್ಟ್ ಫ್ರೆಂಡ್ಸ್ ಸಂಗೀತಾ - ಸಲ್ಮಾನ್  : ಮದುವೆ ಮುರಿದುಬಿದ್ದಿದ್ರೂ ಸಂಗೀತಾ ಹಾಗೂ ಸಲ್ಮಾನ್ ಫ್ರೆಂಡ್ಶಿಪ್ ಹಾಗೆ ಇದೆ. ಸಲ್ಮಾನ್ ಖಾನ್ ಮನೆ ಕಾರ್ಯಕ್ರಮಗಳಲ್ಲಿ ಸಂಗೀತಾ ಆಗಾಗ ಕಾಣಿಸಿಕೊಳ್ತಿರುತ್ತಾರೆ. 

click me!