ಶಿವಣ್ಣನ ಕಾಲಿಗೆರಗಿದ ಐಶ್ವರ್ಯಾ ರೈ ಮಗಳು! ಐಶ್ ಬೇಬಿ ಕಲಿಸಿಕೊಟ್ಟ ಸಂಸ್ಕಾರಕ್ಕೆ ಶಬ್ಬಾಸ್ ಅಂತಿದ್ದಾರೆ ನೆಟ್ಟಿಗರು!

By Bhavani Bhat  |  First Published Sep 19, 2024, 11:12 AM IST

ಸೈಮಾ ಅವಾರ್ಡ್‌ ಫಂಕ್ಷನ್‌ನಲ್ಲಿ ಐಶ್ವರ್ಯಾ ರೈ ಹಾಗೂ ಶಿವಣ್ಣ ಮುಖಾಮುಖಿಯಾಗಿದೆ. ಈ ವೇಳೆ ಐಶ್ವರ್ಯಾ ರೈ ಮಗಳು ಶಿವಣ್ಣ ಕಾಲಿಗೆ ನಮಸ್ಕರಿಸಿದ್ದಾಳೆ. ಈ ವೀಡಿಯೋ ಈಗ ಎಲ್ಲೆಲ್ಲೂ ವೈರಲ್ ಆಗ್ತಿದೆ.


ಐಶ್ವರ್ಯಾ ರೈ ಬಚ್ಚನ್ ವಿಶ್ವಸುಂದರಿಯಾಗಿ ಜಗತ್ತಿನಾದ್ಯಂತ ಭಲೇ ಜನಪ್ರಿಯ ನಟಿ. ಬಾಲಿವುಡ್‌ನ ಈ ಅನಭಿಷಿಕ್ತ ರಾಣಿ ಹಾಲಿವುಡ್ ಇಂಡಸ್ಟ್ರಿಯಲ್ಲಿಯಲ್ಲೂ ಚಿರಪರಿಚಿತ. ಇದೀಗ ದುಬೈನಲ್ಲಿ ನಡೆಯುತ್ತಿರುವ ಸೈಮಾ ಅವಾರ್ಡ್‌ನಲ್ಲಿ ಈಕೆಯ ಸಂಸ್ಕಾರದ ಬಗ್ಗೆಯೇ ಚರ್ಚೆ ನಡೀತಿದೆ. ಐಶ್ ಮಗಳು ಆರಾಧ್ಯಾ ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣ ಅವರ ಕಾಲಿಗೆ ಎರಗಿದ್ದಾಳೆ. ಈ ವೀಡಿಯೋ ಈಗ ಎಲ್ಲರ ಮನಗೆದ್ದಿದೆ. ಐಶ್ವರ್ಯಾ ರೈ ಬೆಸ್ಟ್ ನಟಿ ಮಾತ್ರ ಅಲ್ಲ, ಮಾದರಿ ಅಮ್ಮ ಸಹ ಅಂತ ಎಲ್ಲರೂ ಕೊಂಡಾಡುತ್ತಿದ್ದಾರೆ.

ದುಬೈನಲ್ಲಿ ನಡೆದ SIIMA ಪ್ರಶಸ್ತಿ ಸಮಾರಂಭದಲ್ಲಿ ಐಶ್ವರ್ಯಾ ರೈ ಮತ್ತು ಆರಾಧ್ಯ ಬಚ್ಚನ್ ಸಖತ್‌‌ ಮಿಂಚಿದ್ದಾರೆ. ಎಲ್ಲಿ ನೋಡಿದರೂ ಅಮ್ಮ ಮಗಳದ್ದೇ ಸುದ್ದಿ. ಐಶ್ವರ್ಯಾ ರೈ ಅವರು ಈ ಹಿಂದೆಯೇ ಕನ್ನಡಿಗರ ಹೃದಯ ಗೆದ್ದ ನಟಿ. ಅದರಲ್ಲಿ ಎರಡು ಮಾತಿಲ್ಲ. ಆದರೆ ಇದೀಗ ಅಮ್ಮ ಮಾತ್ರವಲ್ಲ ಮಗಳ ವಿನಯ, ಸಂಸ್ಕಾರವನ್ನು ಇಡಿ ಕನ್ನಡಿಗರು ಕೊಂಡಾಡುವಂತಾಗಿದೆ. ಈ ಮೂಲಕ ತಾನು ಪ್ರತಿಭಾವಂತೆ ಮಾತ್ರ ಅಲ್ಲ, ಸಮಾಜಕ್ಕೆ ಒಂದೊಳ್ಳೆಯ ಸಂಸ್ಕಾರವಂತ ಮಗಳನ್ನೂ ನೀಡುತ್ತಿದ್ದೇನೆ ಎಂಬುದನ್ನು ಐಶ್ ಬೇಬಿ ಸಾರುತ್ತಿದ್ದಾರೆ.

Tap to resize

Latest Videos

undefined

 ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಆರಾಧ್ಯ-ಐಶ್ವರ್ಯಾ ಜೊತೆ ಕೂತ ಈ ನಟ ಯಾರು?

ಅಷ್ಟಕ್ಕೂ ಇದಾದದ್ದು ಹೀಗೆ. ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ಫಂಕ್ಷನ್‌ಗೆ ಐಶ್ ಬೇಬಿ ಬಂದಿದ್ದಾರೆ. ಆಕೆಗೂ ಮೊದಲೇ ಅವರ ಮಗಳು ಆರಾಧ್ಯಾ ಬಚ್ಚನ್ ಅಲ್ಲಿಗೆ ಆಗಮಿಸಿದ್ದಾರೆ. ಅಮ್ಮ ಬಂದಿದ್ದನ್ನು ಕಂಡ ಕೂಡಲೇ ಮಗಳು ಓಡಿ ಹೋಗಿ ಅಮ್ಮನನ್ನು ತಬ್ಬಿಕೊಂಡಿದ್ದಾಳೆ. ಅಮ್ಮ ಐಶ್ವರ್ಯಾ ಅಕ್ಕರೆಯಿಂದ ಮಗಳ ಮೈದಡವಿದ್ದಾರೆ. ಅಮ್ಮ ಮಗಳು ಇಬ್ಬರೂ ವಿವಿಐಪಿ ಗ್ಯಾಲರಿ ಕಡೆ ಹೊರಟಿದ್ದಾರೆ. ಇದೇ ಟೈಮಲ್ಲಿ ಐಶ್‌ ಅವರಿಗೆ ಶಿವಣ್ಣ ಅವರು ಬೇರೆಯವರ ಜೊತೆ ಮಾತನಾಡುತ್ತಾ ನಿಂತಿರುವುದು ಕಂಡಿದೆ. ಶಿವಣ್ಣ ಅವರು ಆ ಹೊತ್ತಿಗೆ ನಟ ಚಿಯಾನ್ ವಿಕ್ರಂ ಹಾಗೂ ಇತರರ ಜೊತೆ ಮಾತನಾಡುತ್ತಿದ್ದರು. ಮಾತಿನಲ್ಲೇ ಮುಳುಗಿ ಹೋಗಿದ್ದ ಶಿವಣ್ಣಂಗೆ ಐಶ್ ಬೇಬಿ ಪಾಸಾಗಿದ್ದೂ ಗೊತ್ತಾಗಿಲ್ಲ. ಆದರೆ ಐಶ್ವರ್ಯಾ ಅವರು ಶಿವಣ್ಣ ಅವರನ್ನು ಮುಂದೆ ಹೋದ ಮೇಲೆ ಗಮನಿಸಿ ವಾಪಾಸ್ ಹಿಂದೆ ಬಂದಿದ್ದಾರೆ. ಶಿವಣ್ಣ ಅವರನ್ನು ತಾನೇ ಮುಂದಾಗಿ ಮಾತಾಡಿಸಿದ್ದಾರೆ. ಮಗಳ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ.

ಶಿವಣ್ಣ ಕಿಡ್ಸ್ ಫ್ರೆಂಡ್ಲಿ. ಐಶ್ ಮಗಳನ್ನು ನೋಡಿದ ಕೂಡಲೇ ಹಾಯ್ ಅಂದು ಶೇಕ್ ಹ್ಯಾಂಡ್ ನೀಡಲು ಮುಂದಾಗಿದ್ದಾರೆ. ಆದರೆ ಐಶ್ವರ್ಯಾ ರೈ ಮಗಳು ಅಷ್ಟೊತ್ತಿಗೆ ಕೆಳಗೆ ಬಾಗಿ ಶಿವಣ್ಣ ಅವರ ಪಾದಕ್ಕೆ ನಮಸ್ಕರಿಸಿದ್ದಾಳೆ. ಅಂಥಾ ಜಗತ್ಪ್ರಸಿದ್ಧ ನಟಿಯ ಮಗಳ ವರ್ತನೆ ಕಂಡು ಶಿವಣ್ಣನಿಗೆ ಆಶ್ಚರ್ಯ ಆದಂತಿದೆ. ಅವರು ಈ ಪುಟ್ಟ ಹುಡುಗಿಯ ತಲೆ ಸವರಿ ವಿಶ್ ಮಾಡಿದ್ದಾರೆ. ಈ ವೀಡಿಯೋ ಸದ್ಯ ಎಲ್ಲೆಲ್ಲೂ ಹರಿದಾಡ್ತಿದೆ. ಎಲ್ಲರೂ ಐಶ್ ಬೇಬಿ ಮಗಳ ಒಳ್ಳತನಕ್ಕೆ ಶಹಭಾಸ್ ಅಂತಿದ್ದಾರೆ. ಮಾತ್ರ ಅಲ್ಲ, ಮಗಳಲ್ಲಿ ಇಂಥಾ ಸಂಸ್ಕಾರ ಬೆಳೆಸಿದ ಐಶ್ವರ್ಯಾಗೂ ಭರ್ಜರಿ ಮೆಚ್ಚುಗೆ ಸಿಗುತ್ತಿದೆ.

ಸಲ್ಲೂ ಭಾಯ್ ಮಾಜಿ ಗರ್ಲ್’ಫ್ರೆಂಡ್, ಸ್ಟಾರ್ ಕ್ರಿಕೆಟಿಗನ ಮಾಜಿ ಪತ್ನಿಯಾಗಿದ್ದ ಈ ನಟಿ ವಯಸ್ಸು 64 ಆದ್ರೂ ಹೇಗಿದ್ದಾರೆ ನೋಡಿ

ಐಶ್ವರ್ಯಾ ರೈ ಅವರ ಗುಣಗಳ ಬಗ್ಗೆ ಜಯಾ ಬಚ್ಚನ್ ಬಹಳ ಹಿಂದೆ ಭರ್ಜರಿ ಹೊಗಳಿದ್ದರು. 'ಆಕೆ ಅಂಥಾ ಜಗತ್ಪ್ರಸಿದ್ಧ ಕಲಾವಿದೆಯಾದರೂ ಮಗಳನ್ನು ಬಹಳ ಚೆನ್ನಾಗಿ ಬೆಳೆಸುತ್ತಿದ್ದಾಳೆ. ಆಕೆಯ ವೃತ್ತಿ ಮಗಳ ಪೋಷಣೆಗೆ ತಡೆಯಾಗದ ಹಾಗೆ ನೋಡಿಕೊಂಡಿದ್ದಾಳೆ' ಎಂಬ ಮಾತನ್ನು ಹೇಳಿದ್ದರು. ಅದಕ್ಕೆ ಸರಿಯಾಗಿ ಐಶ್ವರ್ಯಾ ಸಹ ಮಗಳ ಬಗ್ಗೆ ಬಹಳ ಕಾಳಜಿ, ಅಕ್ಕರೆ ತೋರುವ ಜೊತೆಗೆ ಯಾರ ಜೊತೆಗೆ ಹೇಗೆ ನಡೆದುಕೊಳ್ಳಬೇಕು, ಯಾರಿಗೆ ಹೇಗೆ ರೆಸ್ಪೆಕ್ಟ್ ಕೊಡಬೇಕು ಅನ್ನೋದನ್ನೂ ಕಲಿಸಿಕೊಟ್ಟಿದ್ದಾರೆ. ಸದ್ಯ ಇದೀಗ ಎಲ್ಲೆಲ್ಲೂ ಅಮ್ಮ ಮಗಳ ಈ ಸಂಸ್ಕಾರ, ಒಳ್ಳೆತನದ ಬಗ್ಗೆಯೇ ಮಾತು ಕೇಳಿಬರುತ್ತಿದೆ. ಶಿವಣ್ಣ ಸೇರಿದಂತೆ ಹಲವು ಇವರ ಸಂಸ್ಕಾರಕ್ಕೆ ಅಚ್ಚರಿ ಸೂಚಿಸಿದ್ದಾರೆ.

 

click me!