20ನೇ ವಿವಾಹ ವಾರ್ಷಿಕೋತ್ಸವ: ಪತಿ ಝುಬಿನ್‌ಗೆ ಸಚಿವೆ ಸ್ಮೃತಿಯ ಭಾವುಕ ಪತ್ರ

Suvarna News   | Asianet News
Published : Mar 27, 2021, 04:47 PM ISTUpdated : Mar 27, 2021, 04:56 PM IST
20ನೇ ವಿವಾಹ ವಾರ್ಷಿಕೋತ್ಸವ: ಪತಿ ಝುಬಿನ್‌ಗೆ ಸಚಿವೆ ಸ್ಮೃತಿಯ ಭಾವುಕ ಪತ್ರ

ಸಾರಾಂಶ

ಇನ್ಸ್ಟಾಗ್ರಾಮ್ನಲ್ಲಿ ಹೊಸ ಪೋಸ್ಟ್ನಲ್ಲಿ ಸ್ಮೃತಿ ಇರಾನಿ ತಮ್ಮ 20 ನೇ ವಿವಾಹ ವಾರ್ಷಿಕೋತ್ಸವದಂದು ಪತಿ ಝುಬಿನ್ ಇರಾನಿಗಾಗಿ ಹೃದಯಸ್ಪರ್ಶಿ ಪತ್ರದ ಜೊತೆ ವೀಡಿಯೊವನ್ನು ಶೇರ್ ಮಾಡಿದ್ದಾರೆ

ಕೇಂದ್ರ ಸಚಿವ ಸ್ಮೃತಿ ಇರಾನಿ ತಮ್ಮ ಪತಿ ಝುಬಿನ್ ಇರಾನಿ ಅವರ ಮಾರ್ಚ್ 20 ರಂದು ತಮ್ಮ 20 ನೇ ವಿವಾಹ ವಾರ್ಷಿಕೋತ್ಸವದ ನೆನಪಿಗಾಗಿ ಇನ್ಸ್ಟಾಗ್ರಾಮ್ನಲ್ಲಿ ಹೃದಯಸ್ಪರ್ಶಿ ಪೋಸ್ಟ್ ಶೇರ್ ಮಾಡಿದ್ದಾರೆ.

ತನ್ನ ಪೋಸ್ಟ್‌ನಲ್ಲಿ ಸ್ಮೃತಿ ಇರಾನಿ ಅವರು ತಮ್ಮ ಸ್ಮರಣೀಯ ಫೋಟೋಗಳನ್ನು ಒಳಗೊಂಡ ವೀಡಿಯೊವನ್ನು ಶೇರ್ ಮಾಡಿದ್ದಾರೆ. 20 ವರ್ಷಗಳಲ್ಲಿ ತಮ್ಮ ಲೈಫ್‌ ಜರ್ನಿಯ ಫೋಟೋಗಳನ್ನು ಸೆರೆಹಿಡಿದಿದ್ದಾರೆ.

ಫ್ರೆಂಡ್‌ ಪತಿಯನ್ನೇ ಮದುವೆಯಾಗಿರುವ ಸ್ಮೃತಿ ಇರಾನಿ ಲವ್‌ ಸ್ಟೋರಿ!

ಚಿಕ್ಕ ಕ್ಲಿಪ್‌ನಲ್ಲಿ ಝುಬಿನ್ ಇರಾನಿ ನೃತ್ಯದ ವೀಡಿಯೊಗಳು ಖುಷಿಯ ವಿಡಿಯೋಗಳು ಇದ್ದವು. ಕೆಲವು ಚಿತ್ರಗಳಲ್ಲಿ ಝುಬಿನ್ ಮತ್ತು ಸ್ಮೃತಿಯ ಮಕ್ಕಳು - ಜೊಹ್ರ್, ಜೊಯಿಶ್ ಮತ್ತು ಶಾನೆಲ್ ಕೂಡ ಇದ್ದರು.

20 ವರ್ಷಗಳ ಸ್ನೇಹ. ಸಾಹಸಗಳು.. ನನ್ನೊಂದಿಗೆ ಸುಲಭವಾಗಿ ಬದುಕುವುದು ಕಷ್ಟ. ನಾನು ಸಾಧಾರಣ ಗೃಹಿಣಿಯಲ್ಲ. ನನ್ಯಾವಾಗಲೂ ಕನಸಿನ ಹಿಂದೆ ಓಡುತ್ತಿದ್ದೆ, ನಾನು ಫಿಲ್ಮಿ ನೀವು ಕ್ಲಾಸಿ.. ಎಲ್ಲದರಲ್ಲೂ ತದ್ವಿರುದ್ಧವಾಗಿರುವ ನಾವು ಎರಡು ದಶಕಗಳಿಂದ ಪರಸ್ಪರ ಆಕರ್ಷಿತರಾಗುತ್ತಲೇ ಇದ್ದೇವೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?
ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!