
Director Sundar C Cinema: ಕೆಲವೊಮ್ಮೆ ಸಿನಿಮಾಗಳು ಸಿದ್ಧವಾಗಿದ್ರೂ ಕಾರಣಾಂತರಗಳಿಂದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುತ್ತಿರುತ್ತದೆ. ಇದಕ್ಕೆ ಥಿಯೇಟರ್ ಸಮಸ್ಯೆ, ಸ್ಟಾರ್ ಹೀರೋಗಳು ಸಿನಿಮಾ ಸಹ ಕಾರಣವಾಗಿರಬಹುದು. ಇಂದು ನಾವು ಹೇಳುತ್ತಿರುವ ಸಿನಿಮಾ ಥಿಯೇಟರ್‌ಗಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 12 ವರ್ಷ ಕಾದಿದೆ. ಸಿನಿಮಾ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಮೂರು ಪಟ್ಟು ಗಳಿಕೆ ಮಾಡಿದೆ. ಕಾಲಿವುಡ್ ಅಂಗಳದ 2025ರ ಮೊದಲ ಸೂಪರ್ ಹಿಟ್ ಸಿನಿಮಾ ಆಗಿದೆ.
ತಮಿಳು ಸಿನಿಮಾ ಅಂಗಳದ ಸ್ಟಾರ್ ನಟ ವಿಶಾಲ್ ನಟನೆಯ 'ಮಧ ಗಜ ರಾಜಾ' ಸಿನಿಮಾ ಬಾಕ್ಸ್ ಆಫಿಸ್ ಧೂಳಿಪಟ ಮಾಡುತ್ತಿದೆ. ಚಿತ್ರಕ್ಕೆ ಹಾಕಿದ ಬಂಡವಾಳ ಬಂದು ನಾಲ್ಕು ದಿನಗಳಲ್ಲಿಯೇ ಮೂರು ಪಟ್ಟಕ್ಕೂ ಅಧಿಕ ಹಣ ಸಂಪಾದನೆ ಮಾಡಿದೆ ಎಂದು ವರದಿಯಾಗಿದೆ. ಆಕ್ಷನ್-ಕಾಮಿಡಿ ಕಥಾಹಂದರವುಳ್ಳ 'ಮಧ ಗಜ ರಾಜಾ' ಸಿನಿಮಾ ಜನವರಿ 12ರಂದು ಬಿಡುಗಡೆಯಾಗಿತ್ತು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 'ಮಧ ಗಜ ರಾಜಾ' ಸದ್ಯ ಲಾಭದಲ್ಲಿದೆ.
ಟ್ರೇಡ್ ವೆಬ್‌ಸೈಟ್ ಸ್ಯಾಕ್‌ನಿಲ್ಕ್ ಪ್ರಕಾರ, ಮಧ ಗಜ ರಾಜಾ ಸಿನಿಮಾ ಮೊದಲ ದಿನ 3 ಕೋಟಿ ರೂಪಾಯಿ ಗಳಿಕೆಯೊಂದಿಗೆ ಬಾಕ್ಸ್ ಆಫಿಸ್‌ನಲ್ಲಿ ತನ್ನ ಖಾತೆಯನ್ನು ತೆರೆದಿತ್ತು. ನಾಲ್ಕು ದಿನಗಳಲ್ಲಿ 18.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶಾಲ್ ನಟನೆಯ ಈ ಸಿನಿಮಾ ಕೇವಲ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಹಂತ ಹಂತವಾಗಿ ಸಿನಿಮಾ ಕೇವಲ ನಾಲ್ಕು ದಿನಕ್ಕೆ ಲಾಭದ ಗುರಿಯನ್ನು ತಲುಪಿದೆ. ಇದುವರೆಗೆ ಮಧ ಗಜ ರಾಜ 25.2 ಕೋಟಿ ರೂಪಾಯಿ ಹಣವನ್ನು ತನ್ನ ಬೊಕ್ಕಸಕ್ಕೆ ತುಂಬಿಸಿಕೊಂಡಿದೆ.
ಚಿತ್ರ ಬಿಡುಗಡೆಯಾದ ಎರಡನೇ ವಾರ 15.9 ಕೋಟಿ ರೂ., ಮೂರನೇ ವಾರ 4.78 ಕೋಟಿ ರೂ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾದ 24ನೇ ದಿನವೂ ಚಿತ್ರಮಂದಿರಗಳಲ್ಲಿ ಮಧ ಗಜ ರಾಜ ಪ್ರದರ್ಶನವಾಗುತ್ತಿದೆ. ಇದುವರೆಗೂ ಭಾರತದಾದ್ಯಂತ 48.32 ಕೋಟಿ ರೂ. ಹಣವನ್ನು ಸಂಪಾದನೆ ಮಾಡಿದೆ ಎಂದು ಸ್ಯಾಕ್‌ನಿಲ್ಕ್ ವರದಿ ಮಾಡಿದೆ.
ಕೆಲ ಮಾಧ್ಯಮಗಳ ವರದಿ ಪ್ರಕಾರ, ವಿಶಾಲ್ ನಟಿಸಿರುವ ಮಧ ಗಜ ರಾಜ ಸಿನಿಮಾ 2013ರ ಜನವರಿಯಲ್ಲಿಯೇ ಬಿಡುಗಡೆಯಾಗಬೇಕಿತ್ತು. ಕಾನೂನು ತೊಡಕು, ಹಣಕಾಸಿನ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುತ್ತಲೇ ಬಂದಿತ್ತು. ಎಲ್ಲಾ ಅಡೆತಡೆಗಳನ್ನು ಎದುರಿಸಿ 12 ವರ್ಷಗಳ ಬಳಿಕ ಅಂದ್ರೆ 2025ರ ಜನವರಿ 12ರಂದು ರಿಲೀಸ್ ಆಗಿದೆ.
ಇದನ್ನೂ ಓದಿ: ಸದ್ದಿಲ್ಲದೇ ಬಿಡುಗಡೆಯಾಗಿ 500 ಕೋಟಿ ಸಿನ್ಮಾದ ಬುಡ ಅಲ್ಲಾಡಿಸಿದ ಚಿತ್ರ; 4 ಪಟ್ಟು ಕಲೆಕ್ಷನ್, 2025ರ ಹಿಟ್ ಮೂವಿ
ಸುಂದರ್ ಸಿ. ಅವರ ನಿರ್ದೇಶನದಲ್ಲಿ ಮಧ ಗಜ ರಾಜ ಮೂಡಿ ಬಂದಿದೆ. ಇದಕ್ಕೂ ಮೊದಲು ಅರಮನೆ-4 ಅವರ ಸಿನಿಮಾ ಚಿತ್ರಮಂದಿರದಲ್ಲಿ ಸಂಚಲವನ್ನು ಸೃಷ್ಟಿಸಿತ್ತು. ವಿಶಾಲ್ ಹೊರತಾಗಿ ಸೋನು ಸೂದ್, ಅಂಜಲಿ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಸಂತಾನಂ ಮುಂತಾದ ತಾರೆಯರು ‘ಮದಗಜರಾಜ’ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು 2025 ರ ಮೊದಲ ತಮಿಳು ಹಿಟ್ ಚಿತ್ರ ಎಂದು ಸಾಬೀತಾಗಿದೆ.
ಇದನ್ನೂ ಓದಿ:44 ಪ್ರಶಸ್ತಿ ಗೆದ್ದ ಸಿನಿಮಾ ಗಳಿಸಿದ್ದು 500 ಕೋಟಿ; ಥಿಯೇಟರ್‌ನಿಂದ ಭಾವುಕರಾಗಿ ಹೊರಬಂದ ವೀಕ್ಷಕರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.