ಅನಾವಶ್ಯಕ ಸ್ಪರ್ಧಿಗಳನ್ನು ಹೊಗಳಲು ನನ್ನಿಂದಾಗಲ್ಲ; ರಿಯಾಲಿಟಿ ಶೋ ಬಗ್ಗೆ ಸೋನು ನಿಗಂ ಬೇಸರ

Suvarna News   | Asianet News
Published : Mar 17, 2022, 05:40 PM ISTUpdated : Mar 17, 2022, 05:57 PM IST
ಅನಾವಶ್ಯಕ ಸ್ಪರ್ಧಿಗಳನ್ನು ಹೊಗಳಲು ನನ್ನಿಂದಾಗಲ್ಲ; ರಿಯಾಲಿಟಿ ಶೋ ಬಗ್ಗೆ ಸೋನು ನಿಗಂ ಬೇಸರ

ಸಾರಾಂಶ

ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಚೆನ್ನಾಗಿ ಹಾಡದಿದ್ದರೂ ಅನಾವಶ್ಯಕವಾಗಿ ಅವರನ್ನು ಹೊಗಳುತ್ತಾರೆ. ಅವರನ್ನು ಹೊಗಳುವಂತೆ ಒತ್ತಾಯ ಮಾಡಲಾಗುತ್ತೆ ಇದು ತನ್ನಿಂದ ಸಾಧ್ಯವಿಲ್ಲ ಎಂದು ಸೋನು ನಿಗಂ ಹೇಳಿದ್ದಾರೆ.

ಭಾರತೀಯ ಸಂಗೀತ ಲೋಕದ ಜನಪ್ರಿಯ ಗಾಯಕರಲ್ಲಿ ಸೋನು ನಿಗಂ(Sonu Nigam) ಕೂಡ ಒಬ್ಬರು. ತನ್ನ ಅದ್ಭುತ ಧ್ವನಿಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೋನು ನಿಗಂ ಹಿಂದಿ ಮಾತ್ರವಲ್ಲದೆ ಭಾರತದ ಅನೇಕ ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲೂ ಸೋನು ಗಾನಸುಧೆ ಹರಿಸಿದ್ದಾರೆ. ಸೋನು ನಿಗಂಗೆ ಕನ್ನಡದಲ್ಲೂ ಅಪಾರವಾದ ಅಭಿಮಾನಿ ಬಳಗವಿದೆ. ಅವರ ಸುಮಧುರ ಕಂಠಕ್ಕೆ ಮಾರುಹೋಗದ ಕನ್ನಡಿಗರಿಲ್ಲ.

ಜನಪ್ರಿಯ ಗಾಯಕ ಸೋನು ನಿಗಂ ಅನೇಕ ಸಂಗೀತ ಆಧಾರಿತ ಟಿವಿ ಶೋಗಳಲ್ಲಿ(Singing Reality Show) ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ಟಿವಿವಾಹಿನಿಗಳಲ್ಲಿ ಸಂಗೀತ ಆಧಾರಿತ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದೆ. ಹಿಂದಿ ಸೇರಿದಂತೆ ದೇಶದ ಬೇರೆ ಬೇರೆ ಭಾಷೆಗಳಲ್ಲಿ ಸಂಗೀತ ಕಾರ್ಯಕ್ರಗಳು ಬಿತ್ತರವಾಗುತ್ತಿವೆ. ಅನೇಕ ಪ್ರಸಿದ್ಧ ಗಾಯಕರು ಇಂತ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋನು ನಿಗಂ ಕೂಡ ಹಿಂದಿ ರಿಯಾಲಿಟಿ ಶೋಗಳಲ್ಲಿ(Hindi reality show) ಭಾಗಿಯಾಗಿದ್ದರು. ಆದರೆ ರಿಯಾಲಿಟಿ ಶೋಗಳ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮ ಇಷ್ಟವಾಗದ ಕಾರಣ ಸೋನು ನಿಗಂ ಶೋ ತ್ಯಜಿಸಿದ್ದರು. ಈ ಬಗ್ಗೆ ಸೋನು ನಿಗಂ ಈಗ ಪ್ರತಿಕ್ರಿಯೆ ನೀಡಿದ್ದಾರೆ.

ಈ 7 ಕಾಮೆಂಟ್‌ಗಳಿಂದ ವೈರಲ್ ಆಗಿದ್ದ ಗಾಯಕ ಸೋನು ನಿಗಮ್!

ಸ್ಪರ್ಧಿಗಳು ಚೆನ್ನಾಗಿ ಹಾಡದಿದ್ದರೂ ಅನಾವಶ್ಯಕವಾಗಿ ಅವರನ್ನು ಹೊಗಳುತ್ತಾರೆ. ಅವರನ್ನು ಹೊಗಳುವಂತೆ ಒತ್ತಾಯ ಮಾಡಲಾಗುತ್ತೆ ಇದು ತನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ. ಸೋನು ನಿಗಂ ಸದ್ಯ ಬೆಂಗಾಲಿ ಭಾಷೆಯಲ್ಲಿ ಪ್ರಸಾರವಾಗುತ್ತಿರುವ 'ಸಿಂಗರ್ ಸೀಸನ್ 3'ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಶೋನಲ್ಲಿ ಸೋನು ಜೊತೆಗೆ ಕುಮಾರ್ ಸಾನು ಮತ್ತು ಕೌಶಿಕ್ ಚಕ್ರವರ್ತಿ ಸಹ ಇದ್ದಾರೆ. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸೋನು ನಿಗಂ ಹಿಂದಿ ರಿಯಾಲಿಟಿ ಶೋಗಳ ಬಗ್ಗೆ ಚರ್ಚೆವೇಳೆ ಈ ಮಾತನ್ನು ಹೇಳಿದ್ದಾರೆ.

ಸೋನು ನಿಗಂ ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸಿಂಗಿಂಗ್ ಶೋಗಳಾದ ಇಂಡಿಯನ್ ಐಡಲ್, ಸ ರಿ ಗ ಮ ಪ ನಂತಹ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸ್ಪರ್ಧಿಗಳ ಪ್ರದರ್ಶನ ಇಷ್ಟವಾಗದಿದ್ದರೂ ಹೊಗಳುವಂತೆ ಹೇಳುತ್ತಾರೆ ಎನ್ನುವ ಕಾರಣಕ್ಕೆ ಶೋನಿಂದ ದೂರ ಸರಿದಿದ್ದರು. ಇದೀಗ ಮತ್ತದೆ ಮಾತನ್ನು ಹೇಳಿರುವ ಸೋನು 'ನಾನು ಈ ಬಂಗಾಳಿ ಕಾರ್ಯಕ್ರಮದ (ಸೂಪರ್ ಸಿಂಗರ್ ಸೀಸನ್ 3) ಭಾಗವಾಗಲು ಒಪ್ಪಿಕೊಂಡ ಕಾರಣ ನಾನು ಹೆಚ್ಚಿನ ನಿರೀಕ್ಷೆ ಹೊಂದಿದ್ದೆ. ನಾನು ಬಹಳ ಹಿಂದಿ ರಿಯಾಲಿಟಿ ಶೋಗಳನ್ನು ತಿರಸ್ಕರಿಸಿದೆ. ಹಾಡು ಚೆನ್ನಾಗಿ ಹಾಡದಿದ್ದರೂ ಸ್ಪರ್ಧಿಗಳನ್ನು ಹೊಗಳಬೇಕು. ಅದು ನನ್ನಿಂದ ಸಾಧ್ಯವಿಲ್ಲ. ಹಣ ಸಂಪಾದನೆ ಮಾಡುವ ಸಲುವಾಗಿ ಅಂಥ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲ್ಲ. ಹಾಗಾಗಿ ಅಂಥ ರಿಯಾಲಿಟಿ ಶೋಗೆ ನಾನು ಒಪ್ಪಿಗೆ ಕೊಡುವುದಿಲ್ಲ' ಎಂದಿದ್ದಾರೆ.

'ನನ್ನ ಮಗ ಗಾಯಕನಾಗುವುದು ಬೇಡ, ಅದರಲ್ಲೂ ಭಾರತದಲ್ಲಂತೂ ಬೇಡವೇ ಬೇಡ': ಸೋನು ನಿಗಮ್

ಅನೇಕ ಹಿಂದಿ ಶೋಗಳನ್ನು ತಿರಸ್ಕರಿಸಿದ ಬಗ್ಗೆಯೂ ಸೋನು ನಿಗಂ ಉಲ್ಲೇಖ ಮಾಡಿದ್ದಾರೆ. 'ನಾನು ಸಂಗೀತ ರಿಯಾಲಿಟಿ ಶೋಗಳ ಗ್ರ್ಯಾಂಡ್ ಡ್ಯಾಡಿ. 22 ವರ್ಷಗಳ ಹಿಂದೆ ಇಂಥ ಯಾವುದೇ ಕಾರ್ಯಕ್ರಮಗಳು ಇಲ್ಲದಿದ್ದಾಗ ನಾನು ಕಾರ್ಯಕ್ರಮ ಆಯೋಜಿಸಿದ್ದೆ. ಈಗಲೂ ನಾನು ಅನೇಕ ಶೋಗಳನ್ನು ನಡೆಸಿಕೊಟ್ಟಿದ್ದೀನಿ ಮತ್ತು ಜಡ್ಜ್ ಆಗಿ ಭಾಗವಹಿಸಿದ್ದೀನಿ. ಈಗಲೂ ಹೊಸ ಹಿಂದಿ ರಿಯಾಲಿಟಿ ಶೋ ಬಂದಾಗಲೆಲ್ಲ ನನ್ನನ್ನು ಸಂಪರ್ಕ ಮಾಡಲಾಗುತ್ತೆ. ಆದರೆ ನಾನು ಒಪ್ಪಿಕೊಳ್ಳುವುದಿಲ್ಲ' ಎಂದಿದ್ದಾರೆ.

ಮತ್ತೋರ್ವ ಗಾಯಕ ಅಮಿತ್ ಕುಮಾರ್ ಕೂಡ ಕಳೆ ವರ್ಷ ಇದೇ ಆರೋಪ ಮಾಡಿದ್ದರು. ಇಂಡಿಯನ್ ಐಡಲ್ 12ನಲ್ಲಿ ಸ್ಪರ್ಧಿಗಳು ಚೆನ್ನಾಗಿ ಹಾಡದಿದ್ದರೂ ಅವರನ್ನು ಹೊಗಳಬೇಕಾಯಿತು ಎಂದು ಹೇಳಿಕೊಂಡಿದ್ದರು. ಸೋನು ನಿಗಂ ಕೂಡ ಇದೇ ಆರೋಪ ಮಾಡಿದ್ದರು. ಇದೀಗ ಮತ್ತದೆ ಮಾತನ್ನು ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!