
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅಗಲಿಕೆಯ ನೋವು ಶಾಶ್ವತ. ಅಪ್ಪು ನೆನಪಲ್ಲೇ ಕಾಲಕಳೆಯುತ್ತಿದೆ ರಾಜ್ ಕುಟುಂಬ(Raj Family). ಇಂದು(ಮಾರ್ಚ್ 17) ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ(Puneeth Rajkumar Birthday). ಅಪ್ಪು ಇಲ್ಲದೆ ಮೊದಲ ಹುಟ್ಟುಹಬ್ಬ ಆಚರಿಸುತ್ತಿದೆ ದೊಡ್ಮನೆ. ರಾಘವೇಂದ್ರ ರಾಜ್ ಕುಮಾರ್ ನಿನ್ನೆ (ಮಾರ್ಚ್ 16) ರಾತ್ರಿಯೇ ಸಮಾಧಿ ಬಳಿ ತೆರಳಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಶಿವರಾಜ್ ಕುಮಾರ್ ಇಂದು ಪುನೀತ್ ಅವರ ಶಕ್ತಿಧಾಮದ(Shaktidhama mysore) ಮಕ್ಕಳ ಜೊತೆ ಸಮಯ ಕಳೆದಿದ್ದಾರೆ.
ಪುನೀತ್ ಹುಟ್ಟುಹಬ್ಬದ ದಿನ ಅಭಿಮಾನಿಗಳು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಪುನೀತ್ ಹೆಸರಿನಲ್ಲಿ ಅನೇಕ ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಈ ನಡುವೆ ಶಿವರಾಜ್ ಕುಮಾರ್ 4 ದಿನಗಳ ಹಸುಗೂಸಿಗೆ(4 days baby) ಪುನೀತ್ ಎಂದು ನಾಮಕರಣ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಡಾನ್ಸಿಂಗ್ ಚಾಂಪಿಯನ್(Dancing Championship) ಶಿಪ್ ಪ್ರಸಾರವಾಗುತ್ತಿದೆ. ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಶೋನಲ್ಲಿ ವಿಜಯ್ ರಾಘವೇಂದ್ರ(Vijay Raghavendra), ಮೇಘನಾ ರಾಜ್(Meghana Raj) ಮತ್ತು ಮಯೂರಿ(Mayuri) ಜಡ್ಜ ಆಗಿದ್ದಾರೆ. ಈ ಶೋಗೆ ಶಿವಣ್ಣ ಎಂಟ್ರಿ ಕೊಟ್ಟಿದ್ದಾರೆ.
ಪುನೀತ್ ಹುಟ್ಟುಹಬ್ಬದ ವಿಶೇಷವಾಗಿ ಡಾನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಪುನೀತ್ ಗಾಗಿ ವಿಶೇಷ ಶೋ ಆಯೋಜಿಸಲಾಗಿದೆ. ಈ ಶೋಗೆ ಮುಖ್ಯ ಅತಿಥಿಯಾಗಿ ಶಿವಣ್ಣ ಬಂದಿದ್ದಾರೆ. ಈ ಶೋಗೆ ಪುನೀತ್ ಅಭಿಮಾನಿಯೊಬ್ಬರು ತಮ್ಮ 4 ದಿನಗಳ ಹಸುಗೂಸನ್ನು ಕರೆದುಕೊಂಡು ಬದಿದ್ದರು. ಪುಟ್ಟ ಕಂದನಿಗೆ ಶಿವಣ್ಣ, ಪುನೀತ್ ಎಂದು ನಾಮಕರಣ ಮಾಡಿದ್ದಾರೆ.
ಅಪ್ಪುನಂತಹ ತಮ್ಮನನ್ನು ಪಡೆಯಲು ಪುಣ್ಯ ಮಾಡಿದ್ವಿ, ಜೇಮ್ಸ್ ಪ್ರೀ ರಿಲೀಸ್‌ನಲ್ಲಿ ಶಿವಣ್ಣ ಭಾವುಕ
ವೇದಿಕೆ ಮೇಲೆ ಮಗುವನ್ನು ಕರೆದುಕೊಂಡು ಬಂದ ಹೆತ್ತವರು ತನ್ನ ಮಗುವಿನಲ್ಲಿ ಪುನೀತ್ ಸರ್ ಕಾಣುತ್ತೀನಿ ಎಂದು ಹೇಳಿದರು. ಬಳಿಕ ಶಿವಣ್ಣ ಮಗುವನ್ನು ಎತ್ತಿಕೊಂಡು ಗಂಡು ಮಗುವಿದು ಇದನ್ನೆ ಅಪ್ಪು ಅಂತ ಅಂದ್ಕೋಳೋಣ ಎಂದು ಪುನೀತ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶಿವಣ್ಣ ಪುನೀತ್ ಎಂದು ನಾಮಕರಣ ಮಾಡುತ್ತಿರುವ ಪ್ರೋಮೋ ಪ್ರಸಾರವಾಗುತ್ತಿದೆ. ಶಿವಣ್ಣ ಎಂಟ್ರಿ ಕೊಟ್ಟಿರುವ ಈ ಶೋ ಇದೇ ವೀಕೆಂಡ್ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಪ್ರಸಾರವಾಗುತ್ತಿದೆ. ಈ ಶೋ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪುನೀತ್ ಹುಟ್ಟುಹಬ್ಬದ ವಿಶೇಷವಾಗಿ ಮಾರ್ಚ್ 16ರಂದು ಕಾಕ್ಸ್ ಟೌನ್ ಹೆರಿಗೆ ಆಸ್ಪತ್ರೆಯಲ್ಲಿ ಹುಟ್ಟಿದ 5 ಮಕ್ಕಳಿಗೆ ನಟಿ ತಾರಾ, ಪುನೀತ್ ಎಂದು ನಾಮಕರಣ ಮಾಡಿದ್ದಾರೆ. ಪುನೀತ್ ಎಂದು ಹೆಸರಿಡುವುದು ಪೋಷಕರ ಆಸೆಯಾಗಿತ್ತು ಅದರಂತೆ ನಟಿ ತಾರಾ ಮತ್ತು ಪುನೀತ್ ಸಹೋದರಿ ಪೂರ್ಣಿಮಾ ಅವರು ಮಕ್ಕಳಿಗೆ ಪುನೀತ್ ಹೆಸರಿಡುವ ಮೂಲಕ ಹೆತ್ತವರ ಆಸೆ ನೆರವೇರಿಸಿದ್ದಾರೆ.
ಡಬ್ಬಿಂಗ್ ಮಾಡುವಾಗ ಅಪ್ಪು ಇಲ್ಲೇ ಇದ್ದಾನೆ ಅನಿಸುತ್ತಿತ್ತು: ಶಿವರಾಜ್‌ಕುಮಾರ್
ಇನ್ನು ಇಂದು ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಜೇಮ್ಸ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಜೇಮ್ಸ್ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತ ಮಾಡುವ ಮೂಲಕ ಅಪ್ಪು ಕೊನೆಯ ಸಿನಿಮಾವನ್ನು ನೋಡಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಜೊತೆ ರಾಜ್ ಕುಟುಂಬ ಸಹ ಸಿನಿಮಾ ನೋಡಿ ಸಂತಸ ಪಟ್ಟಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯ ಶೋ ವೀಕ್ಷಿಸಿದ ರಾಘಣ್ಣ ಪತ್ನಿ ಮಂಗಳ ಮತ್ತು ಮಕ್ಕಳು ಅಪ್ಪುನನ್ನು ತೆರೆಮೇಲೆ ನೋಡಿ ಕಣ್ತುಂಬಿಕೊಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.