ದೇಶವೇ ಮೆಚ್ಚಿದ ಗಾಯಕಿ ಕಲ್ಪನಾ ಆತ್ಮಹತ್ಯೆ ಯತ್ನ ವದಂತಿ; ಆಸ್ಪತ್ರೆಯಿಂದಲೇ ನಿಜಾಂಶ ಹೇಳಿದ ಸಿಂಗರ್!

Published : Mar 05, 2025, 09:14 PM ISTUpdated : Mar 05, 2025, 09:31 PM IST
ದೇಶವೇ ಮೆಚ್ಚಿದ ಗಾಯಕಿ ಕಲ್ಪನಾ ಆತ್ಮಹತ್ಯೆ ಯತ್ನ ವದಂತಿ; ಆಸ್ಪತ್ರೆಯಿಂದಲೇ ನಿಜಾಂಶ ಹೇಳಿದ ಸಿಂಗರ್!

ಸಾರಾಂಶ

ಖ್ಯಾತ ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ ವದಂತಿಯನ್ನು ನಿರಾಕರಿಸಿದ್ದಾರೆ. ನಿದ್ದೆ ಬರದ ಕಾರಣ ಔಷಧಿಯ ಓವರ್‌ಡೋಸ್ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಮಗಳ ವಿದ್ಯಾಭ್ಯಾಸದ ಟೆನ್ಷನ್‌ನಿಂದ ಹೀಗಾಯಿತೆಂದು ಹೇಳಿದ್ದಾರೆ.

ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಕಲ್ಪನಾ ರಾಘವೇಂದ್ರ ಅವರು ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ವದಂತಿಯನ್ನು ನಿರಾಕರಿಸಿದ್ದಾರೆ. ನಿದ್ದೆ ಬರದ ಕಾರಣ ಪೊಲೀಸರಿಗೆ ಔಷಧಿಯ ಓವರ್‌ಡೋಸ್ ತೆಗೆದುಕೊಂಡಿರುವುದಾಗಿ ಗಾಯಕಿ ತಿಳಿಸಿದ್ದಾರೆ. ಕಳೆದ ದಿನಗಳಿಂದ ಮಗಳ ವಿದ್ಯಾಭ್ಯಾಸದ ಬಗ್ಗೆ ಇದ್ದ ಟೆನ್ಷನ್‌ನಿಂದ ಹೊರಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.ಕಲ್ಪನಾ ರಾಘವೇಂದ್ರ ಪೊಲೀಸರ ಮುಂದೆ ದಾಖಲಿಸಿದ ಹೇಳಿಕೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಸ್ಥಳೀಯ ಪೊಲೀಸರ ಪ್ರಕಾರ, ಕಲ್ಪನಾ ರಾಘವೇಂದ್ರ ಮತ್ತು ಅವರ ಪತಿ ಕಳೆದ ಐದು ವರ್ಷಗಳಿಂದ ಕೆಪಿಎಚ್‌ಬಿಯ ನಿಜಾಂಪೇಟ್‌ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್ 3 ರಂದು ಮಗಳು ಮತ್ತು ಆಕೆಯ ನಡುವೆ ವಿದ್ಯಾಭ್ಯಾಸದ ಬಗ್ಗೆ ಜಗಳವಾಗಿತ್ತು. ತನ್ನ ಮಗಳು ಹೈದರಾಬಾದ್‌ನಲ್ಲಿ ಓದಬೇಕೆಂದು ಅವರು ಬಯಸಿದ್ದರು, ಆದರೆ ಆಕೆ ಅದಕ್ಕೆ ಒಪ್ಪಲಿಲ್ಲ. ಈ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಕಲ್ಪನಾ ಪೊಲೀಸರಿಗೆ ತಿಳಿಸಿದ್ದಾರೆ.

ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ: ಪೊಲೀಸರು ತನಿಖೆಯನ್ನು ಮಾಡುವುದಕ್ಕಾಗಿ ಮಂಗಳವಾರ (ಮಾರ್ಚ್ 4) ಎರ್ನಾಕುಲಂನಿಂದ ಬಂದಿದ್ದರು. ಬಹಳ ಪ್ರಯತ್ನ ಪಟ್ಟರೂ ನಿದ್ರೆ ಬರಲಿಲ್ಲ. ಕಲ್ಪನಾ ರಾಘವೇಂದ್ರ, ನಾನು ಆಗ 8 ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡೆ, ಆದರೂ ನಿದ್ದೆ ಬರಲಿಲ್ಲ. ಇದಾದ ನಂತರ ನಾನು 10 ಮಾತ್ರೆಗಳನ್ನು ತೆಗೆದುಕೊಂಡೆ. ಆಗ ನಾನು ನಿದ್ದೆ ಬಂದು ಪ್ರಜ್ಞಾಹೀನಳಾದೆ. ಅದರ ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಾನ್ವಿ ಸುದೀಪ್‌ಗೆ ಗಂಡ ಆಗೋ ವ್ಯಕ್ತಿ ಈ ರೀತಿ ಇರಬೇಕಂತೆ!

ಬಾಗಿಲು ಮುರಿದು ಒಳಗೆ ಹೋದ ಪೊಲೀಸರು: ಪೊಲೀಸರ ಹೇಳುವ ಪ್ರಕಾರ, ಕಲ್ಪನಾ ಅವರ ಪತಿ ಪ್ರಸಾದ್ ಕಾಲೋನಿಯ ಕಲ್ಯಾಣ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಅದಕ್ಕೂ ಮೊದಲು ತಮ್ಮ ಹೆಂಡತಿ ಕಲ್ಪನಾ ಅವರಿಗೆ ಕರೆ ಮಾಡಿದಾಗ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಏನೋ ಕೆಟ್ಟದು ಸಂಭವಿಸುವ ಭಯದಿಂದ ಪ್ರಸಾದ್ ನೆರೆಹೊರೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆಗ ಕೆಲವರು ಪೊಲೀಸರಿಗೂ ಕರೆ ಮಾಡಿದರು. ಆಗ ಪೊಲೀಸರು ಬಂದು ಮನೆಯ ಬಾಗಿಲು ಮುರಿದು ಗಾಯಕಿ ಇದ್ದ ರೂಮಿನ ಬಳಿ ಹೋಗಿ ಪರಿಶೀಲನೆ ಮಾಡಿದ್ದಾರೆ. ನಂತರ ಅವರು ಮಲಗುವ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದು ಗೊತ್ತಾಗಿದೆ. ಕಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗ ಗಾಯಕಿಗೆ ಪ್ರಜ್ಞೆ ಬಂದಿದೆ ಮತ್ತು ತಾನು ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ ಎಂದು ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 'ನಮ್ಮ ತಲೆ ತಗ್ಗಿಸುವ ಕೆಲಸ ಮಾಡಿದ್ದಾಳೆ..' ರನ್ಯಾ ರಾವ್‌ ಕೇಸ್‌ನಿಂದ ಅಂತರ ಕಾಯ್ದುಕೊಂಡ ಕರ್ನಾಟಕ ಡಿಜಿಪಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!