
ಮೊದಲ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ ಎನ್ನುವ ಮಾತಿದೆ. ಆ ಮಾತಿಗೆ ಅನ್ವಯ ಆಗುವಂಥ ಘಟನೆಗೆ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮತ್ತು ರಾಜಕಾರಣಿ ರಾಜ್ ಠಾಕ್ರೆ ಇಬ್ಬರೂ ಸಾಕ್ಷಿಯಾದರು. ಅಷ್ಟಕ್ಕೂ ಇವರಿಬ್ಬರೂ ಭೇಟಿಯಾದದ್ದು 30 ವರ್ಷಗಳ ಬಳಿಕ! ಅಂದಹಾಗೆ ಇವರಿಬ್ಬರೂ ಮಾಜಿ ಪ್ರೇಮಿಗಳು ಎನ್ನುವ ವಿಷಯ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಈಚೆಗೆ ಮಹಾರಾಷ್ಟ್ರದಲ್ಲಿ ನಡೆದ ಮರಾಠಿ ಭಾಷಾ ದಿನಾಚರಣೆಯಂದು ಇವರಿಬ್ಬರು ಪರಸ್ಪರ ಭೇಟಿಯಾಗಿದ್ದು ಕುತೂಹಲದ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ, ಸೋನಾಲಿ ಬೇಂದ್ರೆ ಅವರು ರಾಜ್ ಠಾಕ್ರೆ ಅವರನ್ನು ತಮ್ಮ ಕಣ್ಣುಗಳ ಮೂಲಕ ತಮ್ಮ ಜೊತೆ ಬರುವಂತೆ ಹೇಳಿದ್ದಾರೆ.
ಅಂದಹಾಗೆ, ಇದಕ್ಕೂ ಒಂದು ಸ್ಟೋರಿ ಇದೆ. ಅದೇನೆಂದರೆ, ಮದುವೆಯಾಗಿದ್ದರೂ ರಾಜ್, ಸೋನಾಲಿಯನ್ನು ಪ್ರೀತಿಸುತ್ತಿದ್ದ ಕಾಲವೊಂದಿತ್ತು. ಸೋನಾಲಿ ಕೂಡ ರಾಜ್ ಅವರನ್ನು ಪ್ರೀತಿಸುತ್ತಿದ್ದರು. ಆದರೆ, ಅವರಿಬ್ಬರಿಗೂ ಒಂದಾಗುವ ಅದೃಷ್ಟ ಸಿಗಲಿಲ್ಲ, ಆದ್ದರಿಂದ ಅವರು ಬೇರ್ಪಟ್ಟರು. ಅನೇಕ ಮಾಧ್ಯಮ ವರದಿಗಳ ಪ್ರಕಾರ, ಸೋನಾಲಿ ಬೇಂದ್ರೆ ಮತ್ತು ರಾಜ್ ಠಾಕ್ರೆ ಪರಸ್ಪರ ಹುಚ್ಚುಚ್ಚಾಗಿ ಪ್ರೀತಿಸುತ್ತಿದ್ದರು. ಬಾಲಿವುಡ್‌ನಲ್ಲಿ ಸೋನಾಲಿಯ ವೃತ್ತಿಜೀವನವನ್ನು ಮುಂದಕ್ಕೆ ಕೊಂಡೊಯ್ದವರು ರಾಜ್. ಆದರೆ, ಅವರ ಚಿಕ್ಕಪ್ಪ ಬಾಳ್ ಠಾಕ್ರೆಗೆ ಅವರಿಬ್ಬರ ಪ್ರೇಮ ಸಂಬಂಧದ ಬಗ್ಗೆ ತಿಳಿದಾಗ, ಅವರು ಈ ಸಂಬಂಧವನ್ನು ವಿರೋಧಿಸಿದರು. ಬಾಳ್ ಠಾಕ್ರೆ ಅವರು ಸೋನಾಲಿಯಿಂದ ದೂರವಿರಲು ಕೇಳಿಕೊಂಡಿದ್ದರು.
ರಾಜ್ ಠಾಕ್ರೆ ಸೋನಾಲಿಯನ್ನು ಮದುವೆಯಾಗಲು ಬಯಸಿದಾಗ, ಬಾಳ್ ಠಾಕ್ರೆ ಅವರಿಗೆ ಹಾಗೆ ಮಾಡದಂತೆ ಸಲಹೆ ನೀಡಿದರು. ಏಕೆಂದರೆ ಅದು ಅವರ ರಾಜಕೀಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಲ್ಲದೆ, ರಾಜ್ ಈಗಾಗಲೇ ಶರ್ಮಿಳಾ ಠಾಕ್ರೆ ಅವರನ್ನು ಮದುವೆಯಾಗಿದ್ದರು. ರಾಜ್ ತಮ್ಮ ರಾಜಕೀಯ ಜೀವನದ ಕಾರಣದಿಂದಾಗಿ ಈ ಸಂಬಂಧವನ್ನು ಕೊನೆಗೊಳಿಸಿದರು. ಏತನ್ಮಧ್ಯೆ, ಸೋನಾಲಿ ಬೇಂದ್ರೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಮರಾಠಿ ಭಾಷೆಯ ಸಮಾರಂಭದ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಚಿತ್ರಗಳ ಜೊತೆಗೆ, ಅವರು "ಮರಾಠಿ ಜಗತ್ತಿನ ಮಹಾನ್ ವ್ಯಕ್ತಿಗಳೊಂದಿಗೆ ಈ ವಿಶೇಷ ಕ್ಷಣವನ್ನು ಹಂಚಿಕೊಳ್ಳಲು ನನಗೆ ಅವಕಾಶ ನೀಡಿದಕ್ಕಾಗಿ ರಾಜ್ ಠಾಕ್ರೆ ಅವರಿಗೆ ಧನ್ಯವಾದಗಳು" ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ, ಮರಾಠಿ ಸಾಹಿತ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಮರಾಠಿ ಪುಸ್ತಕ ಪ್ರದರ್ಶನಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಭಾಷೆಯ ಶ್ರೀಮಂತಿಕೆಯನ್ನು ಅನುಭವಿಸಿ ಎಂದಿದ್ದಾರೆ.
Sonali Bendre and Raj Thackeray love story: ಮದುವೆಯಾದ್ರೂ ಸೋನಾಲಿ ಬೇಂದ್ರೆಯನ್ನು ಪ್ರೀತಿಸ್ತಿದ್ದ ರಾಜ್ ಠಾಕ್ರೆ: 30 ವರ್ಷಗಳ ಬಳಿಕ ಅಪೂರ್ವ ಸಮ್ಮಿಲನ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.