ರಜನಿಕಾಂತ್-ಚಿರಂಜೀವಿ ಮಧ್ಯೆ 'ನಾನಾ ನೀನಾ' ಮಹಾ ಫೈಟ್.. ದಸರಾ ವೇಳೆ 'ಬೆಳ್ಳಿತೆರೆ ಕಾಳಗ'ಕ್ಕೆ ಸಿದ್ಧತೆ!

Published : Jul 06, 2026, 11:08 PM IST
Rajinikanth Chiranjeevi

ಸಾರಾಂಶ

ನಟ ಚಿರಂಜೀವಿ ಹಾಗು ರಜಿನಿಕಾಂತ್ ಈ ಇಬ್ಬರ ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್ ಕ್ಲಾಶ್ ಆಗಿರೋ ಉದಾಹರಣೆಯೇ ಇಲ್ಲ. ಆದ್ರೆ ಈ ಭಾರಿ ಅಂತದ್ದೊಂದು ಕದನ ಕಣ ಏರ್ಪಡುತ್ತಿದೆ. ಚಿರಂಜೀವಿಯ ವಿಶ್ವಂಭರ ಹಾಗು ರಜನಿಕಾಂತ್​ರ ಜೈಲರ್​-2 ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿವೆ.

ರಜನಿಕಾಂತ್-ಚಿರಂಜೀವಿ ಫೈಟ್

ತಮಿಳು ಸಿನಿಪ್ರೇಕ್ಷಕರ ಆರಾಧ್ಯ ದೈವ ಸೂಪರ್​ಸ್ಟಾರ್ ರಜನಿಕಾಂತ್ (Rajinikanth) ಹಾಗು ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಮಧ್ಯೆ ಈಗ ದೊಡ್ಡ ಕಾಳಗವೊಂದು ನಡೆಯುತ್ತಿದೆ. ಈ ಭಾರಿ ಚಿರು ರಜನಿ ನಾನಾ ನೀನಾ ಅಂತ ತೊಡೆ ತಟ್ಟಿ ನಿಂತಿದ್ದಾರೆ. ಇವರಿಬ್ಬರ ಜಗಳಕ್ಕೆ ಇಬ್ಬರ ಫ್ಯಾನ್ಸ್ ಕೂಡ ಬೆಂಬಲ ಕೊಡೋದಕ್ಕೆ ಮುಂದಾಗಿದ್ದಾರೆ. ಹಾಗಾದ್ರೆ ರಜಿನಿ ಚಿರಂಜೀವಿ ಮಧ್ಯ ಅಂತದ್ದೇನಾಯ್ತು..? ನೋಡೋಣ ಬನ್ನಿ... ​

ಸೂಪರ್ ಸ್ಟಾರ್ ರಜಿನಿಕಾಂತ್ ಸ್ನೇಹ ಜೀವಿ.. ಕನ್ನಡ ನಾಡಿನ ಈ ಕಣ್ಮಣಿ ಶೈನ್ ಆಗಿದ್ದು ತಮಿಳು ನಾಡಿನಲ್ಲಿ. ಆದ್ರೆ ಇವರಿಗಿರೋ ಕೀರ್ತಿ ಜಗದಗಲ.. ಆ ಕಡೆ ಮೆಗಾ ಸ್ಟಾರ್​ ಚಿಂರಜೀವಿ ತೆಲುಗುನ ಸೂಪರ್ ಸ್ಟಾರ್.. ಇವರ ಕೀರ್ತಿಯೂ ದೊಡ್ಡದೇ.. ಈಗ ಈ ಮೆಗಾ ಸ್ಟಾರ್ ಹಾಗು ಸೂಪರ್ ಸ್ಟಾರ್​ಮಧ್ಯೆ ಕದನ ಕಣ ಏರ್ಪಟ್ಟಿದೆ. ಅದು ಬೆಳ್ಳಿತೆರೆ ಕಾಳಗ..

ಬಿಗ್​ಸ್ಕ್ರೀನ್​ನಲ್ಲಿ ಮೆಗಸ್ಟಾರ್ V/S ಸೂಪರ್​ಸ್ಟಾರ್..!

ಬೃಹತ್​ಬಾಕ್ಸ್ ಆಫೀಸ್ ಕ್ಲಾಷ್​ಗೆ ಪ್ರೇಕ್ಷಕ ರೆಡಿನಾ..?

ನಟ ಚಿರಂಜೀವಿ ಹಾಗು ರಜಿನಿಕಾಂತ್ ಈ ಇಬ್ಬರ ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್ ಕ್ಲಾಶ್ ಆಗಿರೋ ಉದಾಹರಣೆಯೇ ಇಲ್ಲ. ಆದ್ರೆ ಈ ಭಾರಿ ಅಂತದ್ದೊಂದು ಕದನ ಕಣ ಏರ್ಪಡುತ್ತಿದೆ. ಚಿರಂಜೀವಿಯ ವಿಶ್ವಂಭರ ಹಾಗು ರಜನಿಕಾಂತ್​ರ ಜೈಲರ್​-2 ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿವೆ.

ದಸರಾ ಹಬ್ಬಕ್ಕೆ ಧಮಾಕ.. ಬರುತ್ತಿದೆ ರಜನಿಯ ಜೈಲರ್​​2

ಜೈಲರ್​2 (Jailer 2). ಈ ಸಿನಿಮಾ ರಜನಿಕಾಂತ್ ಅಭಿಮಾನಿ ಬಳಗ ಮಾತ್ರವಲ್ಲ. ಜೈಲರ್​ ಪಾರ್ಟ್ 1 ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಕಾಯುತ್ತಿರೋ ಸಿನಿಮಾ. ನೆಲ್ಸನ್​ ದಿಲೀಪ್​ಕುಮಾರ್​ನಿರ್ದೇಶನದ 'ಜೈಲರ್ 2' ಚಿತ್ರದಲ್ಲಿ ತಲೈವಾ ರಜನಿಕಾಂತ್, ಶಿವರಾಜ್ ಕುಮಾರ್, ಮೋಹಲ್ ಲಾಲ್, ಜಾಕಿ ಶ್ರಾಫ್, ಹೃತಿಕ್ ರೋಷನ್, ವಿಜಯ್ ಸೇತುಪತಿ ಕೂಡ ನಟಿಸಿದ್ದಾರೆ. ಈ ಆಕ್ಷನ್-ಪ್ಯಾಕ್ಡ್ ಜೈಲರ್​ಅಕ್ಟೋಬರ್ 15, 2026 ರಂದು ಬಿಡುಗಡೆಯಾಗಲಿದೆ ಅಂತ ಅಧಿಕೃತವಾಗಿ ಘೋಷಣೆ ಆಗಿದೆ.

ಜೈಲರ್​2 ಜೊತೆ ಕದನಕ್ಕಿಳಿದ ಮೆಗಾ ಸ್ಟಾರ್ ಚಿರಂಜೀವಿ..!

ಆ ಕಡೆ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ಫ್ಯಾಂಟಸಿ ಮಹಾಕಾವ್ಯ 'ವಿಶ್ವಂಭರ' (Vishwambara) ಸಿನಿಮಾ ನೋಡೋದಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಮಲ್ಲಿಡಿ ವಸಿಷ್ಠ ನಿರ್ದೇಶನದ ಈ ದೊಡ್ಡ ಬಜೆಟ್ ಚಿತ್ರ ಚಿರಂಜೀವಿ ವೃತ್ತಿ ಬದುಕಿನ ಅತ್ಯಂತ ಪ್ರತಿಷ್ಠಿತ ಯೋಜನೆ. ಬಹಳ ಸಮಯದಿಂದ ನಿರ್ಮಾಣವಾಗುತ್ತಿರುವ ಈ ಸಿನಿಮಾ ಈ ವರ್ಷದ ದಸರಾ ಹಬ್ಬದಲ್ಲಿ ರಿಲೀಸ್ ಆಗಲಿದೆ. ಅಂದ್ರೆ ಅಕ್ಟೋಬರ್​16ಕ್ಕೆ ತೆರೆ ಕಾಣಲಿದೆಯಂತೆ..

ಚಿರಂಜೀವಿಯ 'ವಿಶ್ವಂಭರ' ಮತ್ತು 'ಜೈಲರ್ 2' ಸಿನಿಮಾಗಳು ಒಂದೇ ಸಮಯದಲ್ಲಿ ಬಿಡುಗಡೆಯಾದ್ರೆ, ಅದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಬಹು ದೊಡ್ಡ ಬಾಕ್ಸ್ ಆಫೀಸ್ ಕ್ಲಾಶ್ ಗೆ ಸಾಕ್ಷಿಯಾಗುತ್ತೆ. ಚಿರಂಜೀವಿ ಮತ್ತು ರಜನಿಕಾಂತ್ ಅವರಂತಹ ಇಬ್ಬರು ದಂತಕಥೆಯ ನಟರ ಸಿನಿಮಾಗಳು ಒಟ್ಟಿಗೆ ಬಂದ್ರೆ ಫ್ಯಾನ್ಸ್ ವಾರ್​ಕೂಡ ಕಟ್ಟಿಟ್ಟ ಬುತ್ತಿ.

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಥ್ಯಾಂಕ್ಯೂ ಟೈಗರ್.. ನೀವು ಕೊಟ್ಟ ಗರ್ಜನೆಗೆ ಧನ್ಯವಾದಗಳು': ಅಖಿಲ್ ಭಾವುಕ ಪೋಸ್ಟ್
Saumya Tandon: ಸ್ಕರ್ಟ್-ಟಾಪ್‌ನಲ್ಲಿ ರೆಹಮಾನ್ ಡಕಾಯಿತ್ ಪತ್ನಿ: ಫೋಟೋಸ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್