
ಬಾಲಿವುಡ್ ಸಿನಿಮಾ ಮಿಷನ್ ಮಜ್ನೂ ಶೂಟಿಂಗ್ ಆರಂಭವಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಮೊದಲ ಬಾಲಿವುಡ್ ಸಿನಿಮಾದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗುತ್ತಿದ್ದಾರೆ.
ಸಿನಿಮಾ ಶೂಟಿಂಗ್ ಶುರುವಾಗಿದ್ದು, ನಟ ಮೊದಲ ದಿನದ ಶೂಟ್ ಮೊದಲು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸ್ಪೆಷಲ್ ಟೀಂ ಜೊತೆ ಸ್ಪೆಷಲ್ ವ್ಯ೭ಕ್ತಿ ಎಂದು ಕ್ಯಾಪ್ಶನ್ ಕೊಟ್ಟು ರಶ್ಮಿಕಾ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.
ಆಗಸ್ಟ್‌ವರೆಗೂ ಕನ್ನಡ ಸಿನಿಮಾ ಮಾಡಲ್ವಂತೆ ರಶ್ಮಿಕಾ..! ಕಾರಣ..?
ಅಂತೂ ಕಿರಿಕ್ ಚೆಲುವೆ ಬಾಲಿವುಡ್ ಸಿನಿಮಾ ಶೂಟ್‌ನ ಮೊದಲ ದಿನವೇ ನಟನಿಂದ ಹೊಗಳಿಸಿಕೊಂಡಿದ್ದಾರೆ. ರಶ್ಮಿಕಾ ಅವರೂ ಮೊದಲ ದಿನದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ನನ್ನ ತಂಡದ ಜೊತೆ ಸೇರಲು ಇನ್ನೂ ಕಾಯಲಾರೆ, ಸೋ ಮಿಷನ್ ಸ್ಟಾರ್ಟ್ ಆಗಿದೆ ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ ರಶ್ಮಿಕಾ. ಪರ್ವೀಝ್ ಶೇಖ್, ಅಸೀಂ ಅರೋರಾ, ಸುಮಿತ್ ಬತೇಜಾ ಕಥೆ ಬರೆದಿರುವ ಈ ಸಿನಿಮಾ ನಿಜ ಘಟನೆ ಆಧರಿತ ಸಿನಿಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.