Shyam Singha Roy: ನ್ಯಾಚುರಲ್ ಸ್ಟಾರ್ ನಾನಿ ಚಿತ್ರದ ಸಸ್ಪೆನ್ಸ್ ಟ್ರೇಲರ್ ರಿಲೀಸ್

By Suvarna News  |  First Published Dec 15, 2021, 3:07 PM IST

ಟಾಲಿವುಡ್ ನಟ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ಶ್ಯಾಮ್ ಸಿಂಗಾ ರಾಯ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾಕ್ಕೋಸ್ಕರ ನಾನಿ ಅವರು ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದು, ಎರಡು ಶೇಡ್​ಗಳಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  


ಟಾಲಿವುಡ್ (Tollywood) ನಟ ನ್ಯಾಚುರಲ್ ಸ್ಟಾರ್ ನಾನಿ (Nani) ಅಭಿನಯದ 'ಶ್ಯಾಮ್ ಸಿಂಗಾ ರಾಯ್' (Shyam Singha Roy) ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದೆ. ಈ ಸಿನಿಮಾಕ್ಕೋಸ್ಕರ ನಾನಿ ಅವರು ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದು, ಎರಡು ಶೇಡ್​ಗಳಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ಟ್ರೇಲರ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗ ಮಾಡುವ ವಾಸುಗೆ (ನಾನಿ)  ಸಿನಿಮಾ ಅಂದ್ರೆ ಇಷ್ಟ. ನಿರ್ದೇಶಕನಾಗಿ ಸಣ್ಣ ಬಜೆಟ್ ಚಿತ್ರಗಳನ್ನು ನಿರ್ಮಿಸಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾನೆ. ಆ ಸಮಯದಲ್ಲೇ ನಾಯಕಿ ಕೃತಿ ಶೆಟ್ಟಿಯ (Krithi Shetty) ಮೇಲೆ ಪ್ರೀತಿಯಾಗುತ್ತದೆ. ಅನಿರೀಕ್ಷಿತ ಘಟನೆಯಿಂದ ನಾನಿ ಜೈಲಿಗೆ ಹೋಗಬೇಕಾಗುತ್ತದೆ.

ಅನಂತರ 1970 ರ ದಶಕದ ಕಥೆಯ ಶ್ಯಾಮ್ ಸಿಂಗಾ ರಾಯ್ ಪಾತ್ರ ಟ್ರೇಲರ್‌ನಲ್ಲಿ ಹೊರಬರುತ್ತದೆ. ಶ್ಯಾಮ್ ಸಿಂಗಾ ರಾಯ್ ದೇವದಾಸಿಯಾಗಿರುವ ಸಾಯಿ ಪಲ್ಲವಿಯನ್ನು (Sai Pallavi) ಪ್ರೀತಿಸುತ್ತಾರೆ. ಹಾಗೂ ಅವಳನ್ನು ಆ ಪದ್ದತಿಯಿಂದ ಹೊರತರಲು ಪ್ರಯತ್ನಿಸುತ್ತಾರೆ. ಆ ಸಮಯದಲ್ಲಿ ದೇವರನ್ನು ವಿರೋಧಿಸಲು ಸಾಯಿ ಪಲ್ಲವಿಗೆ ಸೂಚಿಸುವುದು ಟ್ರೇಲರ್‌ನಲ್ಲಿರುವ ಹೈಲೈಟ್ಸ್. ಎರಡು ವಿಭಿನ್ನ ಪಾತ್ರಗಳಲ್ಲಿ ನಾನಿ ಅದ್ಭುತವಾಗಿ ನಟಿಸಿದ್ದು, ಇದರಲ್ಲಿ ವಾಸುಗೂ ಶ್ಯಾಮ್ ಸಿಂಗಾ ರಾಯ್‌ಗೂ ಏನು ಸಂಬಂಧ ಎಂಬುದನ್ನು ನಿರ್ದೇಶಕ ರಾಹುಲ್ ಸಂಕ್ರಿತ್ಯಾನ್ (Rahul Sankrithyan) ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. 

Tap to resize

Latest Videos

Shyam Singha Roy ಟೀಸರ್ ರಿಲೀಸ್: ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರದಲ್ಲಿ ನಾನಿ

ನಟಿ ಮಡೋನಾ ಸೆಬಾಸ್ಟಿಯನ್ (Madonna Sebastian) ಈ ಚಿತ್ರದಲ್ಲಿ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬೋಲ್ಡ್ ಲುಕ್‌ನಲ್ಲಿ ನಟಿ ಕೃತಿ ಶೆಟ್ಟಿ ಸಿನಿಮಂದಿಯ ಗಮನ ಸೆಳೆಯುತ್ತಾರೆ. ಟ್ರೇಲರ್‌ನಲ್ಲಿ ಸಾನು ಜಾನ್ ವರ್ಗೀಸ್ (Sanu John Varghese) ಅವರ ಕ್ಯಾಮರಾ ಕೈಚಳಕ ಅತ್ಯುತ್ತಮವಾಗಿ ಮೂಡಿಬಂದಿದ್ದು, ಮಿಕ್ಕಿ ಜೆ ಮೇಯರ್ (Mickey J Meyer) ಅವರ ಹಿನ್ನೆಲೆ ಸಂಗೀತ ಒಂದೊಂದು ದೃಶ್ಯಗಳಿಗೂ ಕನೆಕ್ಟ್ ಆಗಿದೆ. ನವೀನ್ ನೂಲಿ (Naveen Nooli) ಅವರ ಸಂಕಲನ ಚುರುಕಾಗಿದ್ದು, ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಈ ಚಿತ್ರದ ಟ್ರೇಲರ್ ನಂಬರ್ ಒನ್ ಸ್ಥಾನದಲ್ಲಿದೆ.



ಈಗಾಗಲೇ 'ಶ್ಯಾಮ್ ಸಿಂಗಾ ರಾಯ್' ಚಿತ್ರದ ಫಸ್ಟ್‌ಲುಕ್, ಟೀಸರ್ ಹಾಗೂ ಹಾಡುಗಳಿಂದ ಸಿನಿಮಂದಿಯ ಗಮನ ಸೆಳೆದಿದೆ. ಸಸ್ಪೆನ್ಸ್ ಥ್ರಿಲ್ಲರ್‌ನ ಈ ಚಿತ್ರಕ್ಕೆ ಸತ್ಯದೇವ್ ಜಂಗ (Satyadev Janga) ಕಥೆ ಬರೆದಿದ್ದು, ನಿಹಾರಿಕಾ ಎಂಟರ್ಟೈನ್‌ಮೆಂಟ್ (Niharika Entertainment) ಬ್ಯಾನರ್‌ನಡಿಯಲ್ಲಿ ಸಿನಿಮಾ ತಯಾರಾಗಿದೆ. ದೇವದಾಸಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸುವ ಪದ್ದತಿಯನ್ನು ತೊಡೆದು ಹಾಕುವ ಹಾಗೂ ಶ್ರೀಮಂತರ ವಿರುದ್ದ ಹೋರಾಡುವ ನಾಯಕನ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಬಂಗಾಳಿ ನೆಲದಲ್ಲಿ ನಡೆಯುವ ಈ ಕತೆಗೆ ನಾನಿ ಬಂಗಾಳಿಯಲ್ಲಿ ಡೈಲಾಗ್ ಹೇಳಿದ್ದಾರೆ.

Shyam Singha Roy: ಟ್ರೇಲರ್ ರಿಲೀಸ್ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಟ್ವೀಟ್!

ಈ ಹಿಂದೆ 'ದಿ ಎಂಡ್' ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಟ್ಯಾಕ್ಸಿವಾಲಾ' ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಹುಲ್ ಸಂಕ್ರಿತ್ಯಾನ್ 'ಶ್ಯಾಮ್ ಸಿಂಗಾ ರಾಯ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಟ್ ಬೋಯನಪಲ್ಲಿ (Venkat Boyanapalli) ಚಿತ್ರವನ್ನು ನಿರ್ಮಿಸಿದ್ದು, 2017ರಲ್ಲಿ ತೆರೆಕಂಡ 'ಮಿಡಲ್ ಕ್ಲಾಸ್ ಅಬ್ಬಾಯ್' ಚಿತ್ರದ ನಂತರ ಈ ಚಿತ್ರದಲ್ಲಿ ನಾನಿ ಜೊತೆಗೆ ಸಾಯಿ ಪಲ್ಲವಿ ನಟಿಸುತ್ತಿದ್ದು, ಜೊತೆಗೆ ಕೃತಿ ಶೆಟ್ಟಿ, ಮಡೋನ್ನಾ ಸೆಬಾಸ್ಟಿಯನ್, ಮುರಳಿ ಶರ್ಮಾ, ಅಭಿನವ್ ಗೋಮತಮ್, ರಾಹುಲ್ ರವೀಂದ್ರನ್ ಕೂಡ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 24ರಂದು 'ಶ್ಯಾಮ್ ಸಿಂಗಾ ರಾಯ್' ಚಿತ್ರ ಬಿಡುಗಡೆಯಾಗಲಿದೆ.
 

click me!