ಮಗಳಿಗೆ ಹೆಚ್ಚಿಗೆ ಹೊಡೆದಿರುವುದಾಗಿ ಒಪ್ಪಿಕೊಂಡ ಜಯಾ ಬಚ್ಚನ್; ಅಭಿಷೇಕ್ ಶಾಕಿಂಗ್ ಹೇಳಿಕೆ....

By Vaishnavi Chandrashekar  |  First Published Nov 29, 2022, 4:26 PM IST

ಮಕ್ಕಳಿಬ್ಬರ ನಡುವೆ ಭೇದಭಾವ? ಜಯಾ ಬಚ್ಚನ್ ಉತ್ತರಕ್ಕೆ ನಕ್ಕಿದ ಶ್ವೇತಾ- ಅಭಿಷೇಕ್....


ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ 2003ರಲ್ಲಿ ನಿರೂಪಕಿ ಸಿಮ್ಮಿ ಜೊತೆ ನಡೆಸಿದ ಸಂದರ್ಶನದಲ್ಲಿ ಮಕ್ಕಳನ್ನು ಬೆಳೆಸಿರುವ ರೀತಿ ಬಗ್ಗೆ ಚರ್ಚಿಸಿದ್ದಾರೆ. ಮಗಳು ದೊಡ್ಡವಳಾಗಿದ್ದ ಕಾರಣ ಹೆಚ್ಚಿಗೆ ಪೆಟ್ಟು ತಿಂದಿದ್ದಾಳೆ ಆದರೆ ಅಭಿಷೇಕ್‌ ಪಾಪದವನು ಎಂದಿದ್ದಾರೆ. ಈ ವಿಚಾರದ ಬಗ್ಗೆ 2003ಕ್ಕೂ ಮುಂಚೆ ಪ್ರಶ್ನೆ ಮಾಡಿದಾಗ ಜಯಾ ಕೊಟ್ಟ ಉತ್ತರ ಹಾಗೂ 2003ರಂದು ನಡೆದ ಸಂದರ್ಶನದಲ್ಲಿ ಕೊಟ್ಟ ಉತ್ತರ ನೋಡಿ ಮಕ್ಕಳು ನಕ್ಕಿದ್ದಾರೆ. 

2003ರಲ್ಲಿ ನಡೆದ ಸಂದರ್ಶನ: 

Tap to resize

Latest Videos

'ನಿಮ್ಮ ತಂದೆ-ತಾಯಿ ಹೆಚ್ಚಿನ ಅಭಿಷೇಕ್ ಪರ ಇರುತ್ತಿದ್ದರು ಅಂತ ಅನಿಸಿದ್ಯಾ?' ಎಂದು ಸಿಮ್ಮಿ ಶ್ವೇತಾಗೆ ಪ್ರಶ್ನೆ ಮಾಡುತ್ತಾರೆ. 'ಹೌದು ಅಭಿಷೇಕ್‌ ಪರ ನಿಲ್ಲುತ್ತಾರೆ' ಎಂದು ಶ್ವೇತಾ ಹೇಳಿದಕ್ಕೆ 'ಹೌದು ಶ್ವೇತಾ ಇದನ್ನು ಪದೇ ಪದೇ ಮನೆಯಲ್ಲೂ ಹೇಳುತ್ತಾಳೆ' ಎಂದಿದ್ದಾರೆ. ತಕ್ಷಣವೇ ಸಿಮ್ಮಿ ಹಾಗಿದ್ರೆ ನಾವು ಹಳೆ ವಿಡಿಯೋವೊಂದನ್ನು ಮತ್ತೆ ನೋಡೋಣ ಎಂದು ಹೇಳುತ್ತಾರೆ. 

ಆ ವಿಡಿಯೋದಲ್ಲಿ 'ಮಕ್ಕಳ ಜೊತೆ ನೀವು ತುಂಬಾನೇ ಸ್ಟ್ರಿಕ್ಟ್‌ ಆಗಿರುವುದು ನಿಜವೇ?' ಎಂದು ಸಿಮ್ಮಿ ಪ್ರಶ್ನೆ ಮಾಡಿದ್ದಾಗ 'ನಾನು ಈವರೆಗೂ ಮಕ್ಕಳ ಮೇಲೆ ಕೈ ಮಾಡಿಲ್ಲ' ಎಂದು ಅಭಿಷೇಕ್ ಹೇಳುತ್ತಾರೆ ಪಕ್ಕದಲ್ಲಿದ್ದ ಜಯಾ 'ನಾನು ಮಕ್ಕಳಿಗೆ ಹೊಡೆದಿರುವು....ಹೆಚ್ಚಿಗೆ ಶ್ವೇತಾಗೆ ಹೊಡೆದಿರುವ ಪಾಪದ ಹುಡುಗಿ...ಅಭಿಷೇಕ್ ಕಡಿಮೆ' ಎಂದು ಹೇಳಿದ್ದಾರೆ. 

ವಿಡಿಯೋ ನೋಡಿದ ತಕ್ಷಣವೇ ಹೌದು ನೋಡಿ ನಾನು ಸತ್ಯ ಹೇಳಿರುವೆ ಎನ್ನುತ್ತಾರೆ. 'ಅಭಿಷೇಕ್‌ ತುಂಟಾ ಅಂತೀರಾ ಆಮೇಲೆ ಶ್ವೇತಾ ಲೇಡಿ ಅಂತೀರಾ ಯಾಕೆ ಹೊಡೆಯುವುದು?' ಎಂದು ಸಿಮ್ಮಿ ಪ್ರಶ್ನೆ ಮಾಡಿದ್ದಕ್ಕೆ..ಇರಿ ಇರಿ ನಾನು ಉತ್ತರ ಕೊಡುತ್ತೀನಿ ಎಂದ ಶ್ವೇತಾ 'ನಾನು ದೊಡ್ಡ ಮಗಳಾಗಿದ್ದ ಕಾರಣ ಅಭಿಷೇಕ್ ನಡೆಯುವುದಕ್ಕೆ ನನ್ನ ದಾರಿ ಸರಿಯಾಗಿರಬೇಕು ನನ್ನ ನೋಡಿ ಕಲಿಯುತ್ತಿದ್ದ' ಹೇಳಿದ್ದಾರೆ. 'ನಮ್ಮ ಫ್ಯಾಮಿಲಿಯ ಬೇಬಿ ನಾನು. ನನ್ನ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸುತ್ತಿದ್ದಳು' ಎಂದಿದ್ದಾರೆ ಅಭಿಷೇಕ್.

3 ಸಾವಿರಕ್ಕೆ ಕೆಲಸ ಮಾಡಿದ್ದೆ; ಅಮಿತಾಭ್ ಪುತ್ರಿ ಶ್ವೇತಾ ಬಚ್ಚನ್ ಹೇಳಿಕೆ ಹಿಗ್ಗಾಮುಗ್ಗಾ ಟ್ರೋಲ್

ಮಕ್ಕಳಿಬ್ಬರ ಮಾತುಗಳನ್ನು ಕೇಳಿದ ಜಯಾ 'ಅಭಿಷೇಕ್ ತುಂಟ ಇರಬಹುದು ಆದರೆ ತೊಂದರೆ ಕೊಟ್ಟಿರಲಿಲ್ಲ. ಆದರೆ ಶ್ವೇತಾಳನ್ನು ಸಂಭಾಳಿಸುವುದು ಕೊಂಚ ಕಷ್ಟವಾಗಿತ್ತು. ತಂದೆ ಜೊತೆ ಚೆನ್ನಾಗಿದ್ದಳು. ಯಾಕೆ ಈ ರೀತಿ ಮಾಡುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾಗ ನಾನು ಇರುವುದೇ ಹೀಗೆ ಎನ್ನುತ್ತಿದ್ದಳು. ಈ ರೀತಿ ತಾಯಿ ಜೊತೆ ಮಾತನಾಡುವುದು ಓಕೆ ಅಂದುಕೊಂಡಿದ್ದಳು.ಕೆಲವೊಮ್ಮೆ ಮಕ್ಕಳನ್ನು ಇದನ್ನು ವೀಕ್‌ನೆಸ್‌ ಕಾರ್ಡ್‌ ಆಗಿ ಬಳಸುತ್ತಾರೆ' ಎಂದು ಜಯಾ ಹೇಳಿದ್ದಾರೆ.

ಚರ್ಚೆ ನಡೆದ ನಂತರ ಶ್ವೇತಾ 'ನನ್ನ ತಾಯಿಗೆ ವಿದ್ಯಾಭ್ಯಾಸಕ್ಕಿಂತ  ಕೋ-ಕೆರಿಕ್ಯೂಲರ್ ಕೆಲಸಗಳ ಮೇಲೆ ಹೆಚ್ಚಿಗೆ ಗಮನ ಕೊಡಬೇಕಿತ್ತು. ನಾನು ಭರತನಾಟ್ಯ, ಹಿಂದು ಕ್ಲಾಸಿಕಲ್ ಮ್ಯೂಸಿಕ್, ಸ್ವಿಮ್ಮಿಂಗ್, ಸಿತಾರ್ ಮತ್ತು ಪಿಯಾನೋ ಕಲಿಯಬೇಕಿತ್ತು. ಆದರೆ ಚಪ್ಪಾಳೆ ಹೊಡೆಯುವುದರಲ್ಲಿ ಎಕ್ಸಪರ್ಟ್‌ ಆಗಿದ್ದರು ತುಂಬಾ ಫ್ರೀ ಆಗಿ ಕಪ್ಪಾಳಕ್ಕೆ ಹೊಡೆಸಿಕೊಂಡಿರುವೆ. ಒಂದು ಸಲ ಅವರ ಬಳಸುತ್ತಿದ್ದ ಸ್ಕೇಲ್‌ ಮುರಿದು ಹೋಗಿತ್ತು' ಎಂದಿದ್ದಾರೆ ಸ್ವೇತಾ. 

click me!