ಫ್ಯಾನ್ಸ್ ತಬ್ಬಿ ಮುತ್ತಿಟ್ಟ ವಿಜಯ್ ಸೇತುಪತಿ; ಗರಂ ಆದ್ರು ಶ್ರುತಿ ಹಾಸನ್?

Suvarna News   | Asianet News
Published : Nov 22, 2020, 03:17 PM IST
ಫ್ಯಾನ್ಸ್ ತಬ್ಬಿ ಮುತ್ತಿಟ್ಟ ವಿಜಯ್ ಸೇತುಪತಿ; ಗರಂ ಆದ್ರು  ಶ್ರುತಿ ಹಾಸನ್?

ಸಾರಾಂಶ

ಸೇತುಪತಿ ನಡೆಗೆ ಟ್ವಿಟರ್‌ ಮೂಲಕ ಬೇಸರ ವ್ಯಕ್ತ ಪಡಿಸಿದ ನಟಿ ಶ್ರುತಿ ಹಾಸನ್. ನೇರವಾಗಿ ಖ್ಯಾತ ನಟನ ಹೆಸರು ಹೇಳಿಲ್ಲವಾದರೂ ಬಾಣ ತಿರುಗಿರುವುದು ವಿಜಯ್ ಸೇತುಪತಿ ಕಡೆಗೆ ಎನ್ನಲಾಗಿದೆ.

ಟಾಲಿವುಡ್‌ನಲ್ಲಿ 'ಕ್ರಾಕ್' ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ತಮ್ಮ ಮುಂದಿನ ತಮಿಳು 'ಲಾಭಂ' ಸಿನಿಮಾ ಚಿತ್ರೀಕರಣಕ್ಕೆಂದು ಚೆನ್ನೈಗೆ ಬಂದ ಶ್ರುತಿ ಹಾಸನ್ ಟ್ವೀಟ್ ಒಂದು  ಸದ್ದು ಮಾಡುತ್ತಿದೆ. ಈ ಮೈಕ್ರೋ ಬ್ಲಾಗಿಂಗ್ ಮೂಲಕ ನಟಿ ತಮ್ಮ ಬೇಸರ ವ್ಯಕ್ತ ಪಡಿಸಿರುವುದು ಇದೀಗ ವೈರಲ್ ಆಗುತ್ತಿದೆ. 

ಪಾರ್ಟಿಗಳಿಗೆ ಹೋಗದ್ದಕ್ಕೆ ದೊಡ್ಡ ಬೆಲೆ ತೆತ್ತಿದ್ದೇನೆ ಎಂದ ಶ್ರುತಿ ಹಾಸನ್ 

ಕಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಬೇಸ್‌ ಹೊಂದಿರುವ ನಟ ವಿಜಯ್ ಸೇತುಪತಿಗೆ ಜೋಡಿಯಾಗಿ ಮಿಂಚುತ್ತಿರುವ ಶ್ರುತಿ ಮಾಡಿರುವ ಬ್ಯಾಕ್ ಟು ಬ್ಯಾಕ್ ಟ್ಟೀಟ್‌ಗಳು ಚರ್ಚೆ ಮಾಡುವ ವಿಚಾರವೂ ಹೌದು! ಲಾಕ್‌ಡೌನ್‌ನಿಂದಾಗಿ ಅರ್ಧಕ್ಕೇ ನಿಂತಿದ್ದ  ಲಾಭಂ ಸಿನಿಮಾ ಕೆಲಸಗಳು ಈಗ ಮತ್ತೆ ಪ್ರಾರಂಭವಾಗಿವೆ. ಇಂಥ ಸಮಯದಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಖ್ಯಾತ ನಟ ಹೀಗೆ ಮಾಡಿರುವುದು ಸರಿ ಅಲ್ಲ ಎಂದು ವಾದಿಸಿದ್ದಾರೆ.

 

ಚಿತ್ರೀಕರಣ ನಡೆಯುತ್ತಿದ್ದ ಸ್ಥಳದಲ್ಲಿ ವಿಜಯ್‌ ಅವರನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಅವರನ್ನು ತಬ್ಬಿಕೊಂಡು ಮುತ್ತಿಟ್ಟಿದ್ದಾರೆ. ಆನಂತರ ತಮ್ಮ ಸಹ ಕಲಾವಿದರ ಸಂಪರ್ಕಕ್ಕೆ ಬರುತ್ತಾರೆ. ಹೀಗೆಲ್ಲಾ ಮಾಡುವುದು ಎಷ್ಟು ಸರಿ? ಎಂದು ಶ್ರುತಿ ಪ್ರಶ್ನಿಸಿದ್ದಾರೆ. 'ಕೋವಿಡ್ ಪ್ರಾಣವನ್ನೇ ತೆಗೆಯುವಂಥ ವೈರಸ್. ಈ ಪೆಂಡಮಿಕ್ ಕಾಟ ಇನ್ನೂ ಮುಗಿದಿಲ್ಲ. ನಾನು ಒಬ್ಬ ವ್ಯಕ್ತಿಯಾಗಿ, ಒಬ್ಬ ನಟಿಯಾಗಿ ಮುಂಜಾಗೃತ ಕ್ರಮಗಳಿಂದ ನನ್ನ ಆರೋಗ್ಯ ನಾನು ಕಾಪಾಡಿಕೊಳ್ಳಬೇಕು. ಅದನ್ನೇ ಎಲ್ಲರೂ ಪಾಲಿಸಬೇಕಾಗುತ್ತದೆ. ಸುಮ್ಮನೆ ಹೇಳುತ್ತಿರುವೆ' ಎಂದು ಟ್ಟೀಟ್ ಮಾಡಿದ್ದಾರೆ. 

ಶೃತಿ ಹಾಸನ್ ಕ್ರಿಕೆಟಿಗ ಸುರೇಶ್ ರೈನಾ ಲಿಂಕ್? ಏನೀದರ ಅಸಲಿಯತ್ತು? 

ಈ ವಿಚಾರದ ಬಗ್ಗೆ ಕಾಮೆಂಟ್‌ನಲ್ಲಿ ಚರ್ಚೆ ಶುರುವಾಗಿದೆ. ಎಲ್ಲಿ ಹೀಗೆ ಆಗಿದ್ದು? ಯಾರಿಂದ ಆಗಿದ್ದು ಎಂದು ನೇರವಾಗಿ ಹೇಳದೇ ಹೋದರೂ ನೆಟ್ಟಿಗರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಶ್ರುತಿ ಎಲ್ಲಿಯೂ ಯಾರ ಹೆಸರನ್ನು ರಿವೀಲ್ ಮಾಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?