
ಮಾಸ್ಟರ್ ಡ್ಯಾನ್ಸರ್ ಕಂ ಆಕ್ಟರ್ ಪ್ರಭುದೇವ ಮದುವೆಯಾಗಲಿದ್ದಾರೆ ಎಂಬ ವಿಚಾರ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಅರೇ! ಮೊದಲನೇ ಪತ್ನಿ ಜೊತೆ ವಿಚ್ಛೇದನ ಪಡೆದ ನಂತರ ನಟಿ ನಯನತಾರ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು ಈಗ ಟಿಪಿಕಲ್ ಗಂಡನಾಗಲು ಹೊರಟಿದ್ದಾರೆ.
"
ನಯನ್‌ತಾರಾ ಕೈಯಲ್ಲಿದ್ದ ಪ್ರಭುದೇವ್ ಟ್ಯಾಟೂ ಮಾಯ, ಹೊಸದಾಗಿ ಏನಿದೆ ನೋಡಿ
ಹೌದು! ಪ್ರಭುದೇವ ಮದುವೆ ವಿಚಾರವನ್ನು ಅವರ ಸಹೋದರ ರಾಜು ಸುಂದರಂ ಖಚಿತಪಡಿಸಿದ್ದಾರೆ. ಹುಡುಗಿ ಹೆಸರು ಡಾ. ಹಿಮಾನಿ . ನೃತ್ಯ ಮಾಡುವಾಗ ಪ್ರಭುದೇವಗೆ ಆಗಾಗ ಬೆನ್ನು ನೋವು ಹಾಗೂ ಕಾಲು ನೋವು ಕಾಣಿಸಿಕೊಳ್ಳುತ್ತಿದ್ದು ಡಾ.ಹಿಮಾನಿ ಚಿಕಿತ್ಸೆ ನೀಡುತ್ತಿದ್ದರು. ಈ ಸಮಯದಲ್ಲಿ ಅವರಿಬ್ಬರ ನಡುವೆ ಪ್ರೇಮ ಹುಟ್ಟಿತ್ತು.
ಈಗಾಗಲೇ ಎರಡು ತಿಂಗಳಿಂದ ಪ್ರಭುದೇವ ಹಾಗೂ ಹಿಮಾನಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು 2021 ಮೇ ತಿಂಗಳಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸಹೋದರ ನೀಡಿರುವ ಮಾಹಿತಿ ಪ್ರಕಾರ ಮದುವೆ ಪ್ರಭುದೇವ ಮನೆಯಲ್ಲಿಯೇ ಆಗಲಿದ್ದು ಆಪ್ತರು ಮಾತ್ರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಎರಡನೇ ಮದುವೆಗೆ ಸೈ ಎಂದ ಪ್ರಭುದೇವ; ಹುಡುಗಿ ಯಾರು ಗೊತ್ತಾ?
ಮೈಸೂರಿನ ನಿವಾಸದಲ್ಲಿ ಎರಡು ಬಾರಿ ಹಿಮಾನಿ ಪ್ರಭುದೇವ ಅವರ ಪೋಷಕರನ್ನು ಭೇಟಿ ಮಾಡಿದ್ದಾರೆ. ಹಿಮಾನಿ ಪೋಷಕರನ್ನು ಭೇಟಿ ಮಾಡಲು ಪ್ರಭುದೇವ ಆಗಸ್ಟ್‌ನಲ್ಲಿ ಮುಂಬೈಗೆ ತೆರಳಿದರು ಎನ್ನಲಾಗಿದೆ. ಪ್ರಭುದೇವ ಮತ್ತೊಮ್ಮೆ ಮದುವೆಯಾಗುತ್ತಿರುವ ವಿಚಾರದ ಬಗ್ಗೆ ಸಹೋದರ ಸಂತೋಷ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.