
ಕಾಲಿವುಡ್ ಚಿತ್ರರಂಗದಲ್ಲಿ ಹಿಸ್ಟರ್ ಕ್ರಿಯೇಟ್ ಮಾಡಿದ ಮಾರಿ-2 ಚಿತ್ರದ 'ರೌಡಿ ಬೇಬಿ' ಹಾಡು ಯುಟ್ಯೂಬ್‌ನಲ್ಲಿ 1 ಬಿಲಿಯನ್ ವೀಕ್ಷಣೆ ಪಡೆದಿದೆ. ವಿಚಾರ ತಿಳಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಧನುಷ್ ಹಾಗೂ ಸಾಯಿ ಪಲ್ಲವಿಗೆ ಜೈಕಾರ ಕೂಗಿದ್ದಾರೆ. ಖುಷಿ ವಿಚಾರವನ್ನು ಚಿತ್ರತಂಡ ಪೋಸ್ಟರ್ ಮೂಲಕ ರಿವೀಲ್ ಮಾಡಿದೆ.
ಸಾಯಿ ಪಲ್ಲವಿ ಮದುವೆ ಫೋಟೋ ವೈರಲ್; ಆದರೆ ಪಕ್ಕದಲ್ಲಿ ನಾಗಚೈತನ್ಯ ಯಾಕೆ?
ವಂಡರ್ ಬಾರ್ ಫಿಲ್ಮ್‌ನ ಟ್ಟಿಟರ್ ಖಾತೆಯಲ್ಲಿ ಈ ಫೋಸ್ಟರ್ ಶೇರ್ ಮಾಡಲಾಗಿದೆ. ರಾಕ್ ಸ್ಟಾರ್ ರೀತಿಯಲ್ಲಿರುವ ಧನುಷ್ ಪೋಟೋ ಶೇರ್ ಮಾಡಲಾಗಿದೆ. 'ರೌಡಿ ಬೇಬಿ ಒಂದು ಬಿಲಿಯನ್ ವೀಕ್ಷಣೆ' ಎಂದು ಬರೆದಿದ್ದಾರೆ. ಆದರೆ ಈ ಫೋಟೋದಲ್ಲಿ ಸಾಯಿ ಪಲ್ಲವಿ ಇಲ್ಲದ ಕಾರಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರಿ 2 ಚಿತ್ರದಲ್ಲಿ ಸಾಯಿ ಪಲ್ಲವಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ರೌಡಿ ಬೇಬಿ ಹಾಡಿನಲ್ಲಿ ಸಕತ್ ಆಗಿ ಹೆಜ್ಜೆ ಹಾಕಿದ್ದಾರೆ. ಹಾಡು ಸೂಪರ್ ಹಿಟ್ ಆಗಲು ಆಕೆಯ ಪಾಲು ದೊಡ್ಡದು ಆದರೆ ಧನುಷ್ ಮಾತ್ರ ಇರುವುದು ಅಸಮಾಧಾನ ಉಂಟಾಗಿದೆ.
ಸೌಂದರ್ಯ ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ..?
'ಕೊಲವೆರಿ ಡಿ' ಹಾಡು ಒಂಬತ್ತನೇ ವರ್ಷ ತುಂಬಿದ ದಿನವೇ ರೌಡಿ ಬೇಬಿ ಒಂದು ಬಿಲಿಯನ್ ವೀಕ್ಷಣೆ ಕಂಡಿದೆ. ಧನುಷನ್‌ಗೆ ಇದು ಡಬಲ್ ಧಮಾಕಾ ಆದರೆ ಸಾಯಿ ಪಲ್ಲವಿಯನ್ನು ಸೈಡ್‌ಲೈನ್ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.