
ಚಿತ್ರರಂಗದಲ್ಲಿ ಪದೇ ಪದೇ ಕೇಳಿ ಬರುವ ನೆಪೋಟಿಸಂ ಪದದಿಂದ ದೂರ ಉಳಿಯಬೇಕು ಎಂದು ನಟಿ ಶ್ರುತಿ ಹಾಸನ್ ಹೊಸ ಟ್ರಿಕ್ ಪ್ಲೇ ಮಾಡಿದ್ದಾರೆ. ಸ್ವಂತ ಹೆಸರು ಮಾಡಬೇಕು, ಸಾಧನೆ ಮಾಡಬೇಕು ಎಂದು ಸುಳ್ಳು ಹೆಸರುಗಳನ್ನು ಹೇಳಿಕೊಂಡು ಓಡಾಡುತ್ತಿದ್ದರಂತೆ.
'ನನ್ನ ತಂದೆ ಕಮಲ್ ಹಾಸನ್ ಮತ್ತು ತಾಯಿ ಸಾರಿಕಾ ತುಂಬಾ ಫೇಮಸ್ ಆಗಿದ್ದ ಕಾರಣ ನನ್ನ ಐಡೆಂಟಿಟಿ ಬಗ್ಗೆ ತುಂಬಾ ಯೋಚನೆ ಮಾಡುತ್ತಿದ್ದೆ. ಹೀಗಾಗಿ ನಕಲಿ ಹೆಸರು ಬಳಸಿಕೊಂಡು ನನ್ನ ಕೆಲಸ ಮಾಡಿಕೊಳ್ಳುತ್ತಿದ್ದೆ. ಫೇಮ್ ಅನ್ನೋದು ಒಂದು ಹ್ಯಾಂಡ್‌ಬ್ಯಾಗ್ ಇದ್ದಂತೆ ಅದರಲ್ಲಿ ಕಪ್ಪು ತುಂಬಿದರೆ ಅದು ನಮ್ಮ ಹೆಗಲು ನೋವು ಬರುವಂತೆ ಮಾಡುತ್ತದೆ. ಸ್ವಂತವಾಗಿ ಜೀವನ ಕಟ್ಟಿಕೊಳ್ಳಬೇಕು ಅಂತ ಯಾರಾದರೂ ಆಸೆ ಪಟ್ಟರೆ...ತಮ್ಮ ಕನಸು, ಆಸೆಗಳೇ ಅವರಿಗೆ ದೊಡ್ಡ ಫೇಮ್ ಆಗಬೇಕು. ನನ್ನ ಪೋಷಕರು ತುಂಬಾ ಕಷ್ಟ ಪಡುತ್ತಾರೆ. ನನ್ನ ತಂದೆ ತುಂಬಾ ಸಮಯ ಕೊಟ್ಟು ಕಥೆ ಬರೆಯುತ್ತಾರೆ ಅನಂತರ ವಿಭಿನ್ನ ಪಾತ್ರಗಳನ್ನು ಚಿತ್ರೀಕರಣ ಮಾಡಲು ಶೂಟಿಂಗ್‌ಗೆ ಹೋಗುತ್ತಾರೆ' ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಶ್ರುತಿ ಮಾತನಾಡಿದ್ದಾರೆ.
ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ನಟ ದರ್ಶನ್ ತಾಯಿ ಭೇಟಿ; ಬಸವ ಆಶೀರ್ವಾದ ಪಡೆದ ಮೀನಮ್ಮ
'ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವುದುಕ್ಕೆ ನಾವು ಸರಿಯಾದ ಜಾಗದಲ್ಲಿ ಇಲ್ಲ. ಹಲವರಿಗೆ ಆರೋಗ್ಯ ವಿಮೆಗಳನ್ನು ಮಾಡಿಸಿಕೊಂಡಿಲ್ಲ. ದೇಶದಲ್ಲಿ ನಡೆಯುತ್ತಿರುವ ಅದೆಷ್ಟೋ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಬೇಕು, ಹೀರೋ -ಹೀರೋಯಿನ್‌ಗಳ ನಡುವೆ ಸಂಭಾವನೆ ಸರಿಸಮ ಮಾಡಬೇಕು, ನಮ್ಮ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಾನಸಿಕ ಆರೋಗ್ಯಕ್ಕಿಂತ ಹೆಚ್ಚಾಗಿ ಹಲವು ವಿಚಾರಗಳಿದೆ ಚರ್ಚೆ ಮಾಡಲು. ಮಾನಸಿಕ ಆರೋಗ್ಯ ದೊಡ್ಡ ಚರ್ಚೆ ಕ್ರಿಯೇಟ್ ಮಾಡುವ ಬದಲು ಪ್ರತಿಯೊಬ್ಬರು ಬಹಿರಂಗವಾಗಿ ಮಾತನಾಡಿದ್ದರೆ ಸರಿ ಹೋಗುತ್ತದೆ' ಎಂದು ಶ್ರುತಿ ಹೇಳಿದ್ದಾರೆ.
ನನ್ನ ಡ್ರೆಸ್ ಡಿಸೈನ್ ಮಾಡೋದು, ಅಕೌಂಟ್ ನೋಡಿಕೊಳ್ಳುವುದು ಅವಳೇ; ಭಾವಿ ಪತ್ನಿ ಬಗ್ಗೆ ಶಮಂತ್
'ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ಯಾವುದೇ ಬ್ಯಾರಿಯರ್‌ಗಳು ಇರುವುದಿಲ್ಲ. ಏಕೆಂದರೆ ಜನರಿಗೆ ಯಾವುದು ಇಷ್ಟನೋ ಅದನ್ನು ನೋಡುತ್ತಾರೆ. ಸಿನಿಮಾ ಮಾಡಿ ಥಿಯೇಟರ್ ಅಥವಾ ಓಟಿಟಿಯಲ್ಲಿ ನೋಡುವ ಅವಕಾಶ ಕೊಟ್ಟರೆ ಖಂಡಿತ ಆಯ್ಕೆಗಳನ್ನು ಬದಲಾಯಿಸುತ್ತಾರೆ' ಎಂದಿದ್ದಾರೆ ಶ್ರುತಿ.
ಇವತ್ತು ಒಟ್ಟಿಗೆ ಇದ್ದು ನಾಳೆ ಬ್ರೇಕಪ್ ಮಾಡಿಕೊಳ್ಳುವ ಲವರ್ಸ್‌ಗೆ ಖಡಕ್ ಉತ್ತರ ಕೊಟ್ಟ ರಾಗಿಣಿ ಪ್ರಜ್ವಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.