ನಾನು ಕೆಟ್ಟವನೋ, ಒಳ್ಳೆಯವನೊ? ಉತ್ತರ ಹೇಳಲು 30 ದಿನ ಗಡುವು ನೀಡಿದ ಶಾರುಖ್​ ಖಾನ್​!

By Suvarna News  |  First Published Aug 8, 2023, 5:40 PM IST

ಶಾರುಖ್​ ಖಾನ್​ ತಮ್ಮ ಜವಾನ್​ ಚಿತ್ರದ ಹೊಸ ಪೋಸ್ಟರ್​ ಒಂದನ್ನು ಶೇರ್​ ಮಾಡಿದ್ದು, ನಾನು ಕೆಟ್ಟವನೋ, ಒಳ್ಳೆಯವನೊ ಎಂದು ಕೇಳಿದ್ದಾರೆ, ಉತ್ತರ ಹೇಳಲು 30 ದಿನ ಗಡುವು ನೀಡಿದ್ದಾರೆ. 
 


ಶಾರುಖ್ ಖಾನ್ ಅಭಿನಯದ 'ಜವಾನ್' (Jawan) ಚಿತ್ರವು ಈ ಕ್ಷಣದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ. ಈ ಚಿತ್ರವನ್ನು ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ ಮತ್ತು ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ನಟಿಸಿದ್ದಾರೆ. ಚಿತ್ರದ ಮುನ್ನೋಟ ಮತ್ತು ಟ್ರೇಲರ್​ ಇದಾಗಲೇ ಬಿಡುಗಡೆಯಾಗಿದ್ದು ಸಕತ್​ ಹಿಟ್​ ಆಗಿವೆ.   ಸೆಪ್ಟೆಂಬರ್ 7ರಂದು ಜವಾನ್​ ಬಿಡುಗಡೆಯಾಗಲಿದ್ದು, ಶಾರುಖ್​ ಫ್ಯಾನ್ಸ್​ ತುದಿಗಾಲಿನಲ್ಲಿ ಚಿತ್ರ ನೋಡಲು ನಿಂತಿದ್ದಾರೆ.  ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್​ ಸ್ಟಾರ್​ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ದಕ್ಷಿಣದ ಬಹುತೇಕ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಮುಖ್ಯ ವಿಲನ್ ರೀತಿನೇ ಕಾಣಿಸುತ್ತಿದ್ದಾರೆ.  ನಟಿ ದೀಪಿಕಾ ಪಡುಕೋಣೆ (Deepika Padukone) ಇಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ನಯನತಾರಾ ಇಲ್ಲಿ ಹೊಸ ಖದರ್ ಅಲ್ಲಿಯೇ ಬರ್ತಿದ್ದಾರೆ. ಕನ್ನಡದ ಪ್ರಿಯಾಮಣಿ ಕೂಡ ಅಭಿನಯಿಸಿದ್ದಾರೆ.

ಹೀಗೆ ಬಹು ಕುತೂಹಲ ಕೆರಳಿಸಿರೋ ಜವಾನ್​ನ ಹೊಸ ಪೋಸ್ಟರ್​ ಒಂದನ್ನು ಶೇರ್​ ಮಾಡಿಕೊಂಡಿರುವ ಶಾರುಖ್​ ಖಾನ್​, ನಾನು ಒಳ್ಳೆಯವನೋ, ಕೆಟ್ಟವನೋ ಎಂದು ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಲು 30 ದಿನಗಳ ಗಡುವು ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಶಾರುಖ್​ ಅವರು ಪೋಸ್ಟ್​ ಮಾಡಿರುವ ಈ ಚಿತ್ರವನ್ನು ನೋಡಿದರೆ ಮೇಲ್ನೋಟಕ್ಕೆ ಅದು ವಿಲನ್​ ರೀತಿಯಲ್ಲಿ ಕಾಣಿಸುತ್ತದೆ. ಇದಾಗಲೇ ಕೆಲವು ಸಿನಿಮಾಗಳಲ್ಲಿ ಶಾರುಖ್​ ನೆಗೆಟಿವ್​ ಶೇಡ್​ ಇರುವ ನಾಯಕನ ಪಾತ್ರ ಮಾಡಿದ್ದೂ ಇದೆ. ಇದೇ ಕಾರಣಕ್ಕೆ ಈ ಪೋಸ್ಟರ್​ ನೋಡಿದರೆ ನಾಯಕನೋ, ಖಳನಾಯಕನೋ ತಿಳಿಯುವುದು ಕಷ್ಟ, ಇದೇ ಕಾರಣಕ್ಕೆ, ಈ ಫೋಟೋ ನೋಡಿದರೆ ತಾವು ಒಳ್ಳೆಯವನೋ, ಕೆಟ್ಟವನೋ ಏನು ಎಂದು ನಿಮಗೆ ಕಾಣಿಸುತ್ತದೆ ಎನ್ನುವ ಅರ್ಥದಲ್ಲಿ ಶಾರುಖ್​ ಬರೆದುಕೊಂಡಿದ್ದಾರೆ.  

Tap to resize

Latest Videos

ಶಾರುಖ್​ v/s ಪ್ರಭಾಸ್: ಮೇಲುಗೈ ಯಾರಿಗೆ? 'ಜವಾನ್'​ಗೆ 21 ದಿನಗಳ ಚಾಲೆಂಜ್​!

ಈ ಪ್ರಶ್ನೆ ಈ ಪೋಸ್ಟರ್​ಗೆ ಸಂಬಂಧಿಸಿದ್ದು. ಅಥವಾ ಈ ಚಿತ್ರದಲ್ಲಿ ತಮ್ಮ ಪಾತ್ರ ನಾಯಕನೋ, ಖಳನಾಯಕನದ್ದೋ ಎನ್ನುವ ಅರ್ಥದಲ್ಲಿ ಶಾರುಖ್​ ಈ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.  ಅಷ್ಟಕ್ಕೂ ಈ ಪೋಸ್ಟರ್​ನಲ್ಲಿ  ಶಾರುಖ್​ ಖಾನ್​ ಅವರು ಬೋಳು ತಲೆಯ ಗೆಟಪ್​ನಲ್ಲಿ  ಕಾಣಿಸಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಜವಾನ್​ನಲ್ಲಿ ವಿಭಿನ್ನ ಗೆಟಪ್​ನಲ್ಲಿ ಶಾರುಖ್​ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿ ಇದು ಕೂಡ ಒಂದು.  ಸಿನಿಮಾದ ಪ್ರಿವ್ಯೂ ವಿಡಿಯೋದಲ್ಲಿ ಕೂಡ ಈ ಬಾಲ್ಡ್​ ಹೆಡ್​  ಲುಕ್​ ಬಹಿರಂಗ ಆಗಿತ್ತು. ಈಗ ಅದೇ ಗೆಟಪ್​ನ ಇನ್ನೊಂದು ಪೋಸ್ಟರ್​ ಅನ್ನು ಶಾರುಖ್​ ಖಾನ್​ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು  ‘ನಾನು ಒಳ್ಳೆಯವನಾ ಅಥವಾ ಕೆಟ್ಟವನಾ? ತಿಳಿದುಕೊಳ್ಳಲು ಇನ್ನು 30 ದಿನ ಇದೆ, ರೆಡಿನಾ’ ಎಂದು ಶಾರುಖ್​ ಖಾನ್​ ಎಂಬ ಕುತೂಹಲದ ಶೀರ್ಷಿಕೆ ನೀಡಿದ್ದಾರೆ.  

 ಅಟ್ಲಿ ಕುಮಾರ್ (Atly Kumar) ನಿರ್ದೇಶನದ 'ಜವಾನ್' ಚಿತ್ರಕ್ಕೆ ಆರಂಭಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಾರುಖ್ ಅವರ ವಿಭಿನ್ನ ಅವತಾರವನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಚಿತ್ರದ ಸ್ಟಾರ್‌ಕಾಸ್ಟ್ ಕೂಡ ತುಂಬಾ ಪ್ರಭಾವಶಾಲಿಯಾಗಿದೆ. ಹೀಗಿರುವಾಗ ಶಾರುಖ್ ಅಭಿನಯದ ‘ಜವಾನ್’ ಸಿನಿಮಾ ಹಿರಿತೆರೆಯಲ್ಲಿ ಅವರ ‘ಪಠಾಣ್’ ಚಿತ್ರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲಿದೆ ಎಂಬ ನಂಬಿಕೆ ಇದೆ. ಮೊದಲ ದಿನದ ಕಲೆಕ್ಷನ್ 100 ಕೋಟಿ ದಾಟುವ ಮಾತುಗಳು ಕೇಳಿ ಬರುತ್ತಿವೆ. ಅದೇ ಸಮಯದಲ್ಲಿ, ಬಿಡುಗಡೆಯಾದ ಮೊದಲ ವಾರದಲ್ಲಿ, ಹೊಸ ದಾಖಲೆಗಳನ್ನು ಸೃಷ್ಟಿಸಲು ಚಿತ್ರದ ಪರವಾಗಿ ಹಕ್ಕುಗಳನ್ನು ಪಡೆಯಲಾಗುತ್ತಿದೆ. ಇದೆಲ್ಲದರ ನಡುವೆ ದಕ್ಷಿಣದ ದೊಡ್ಡ ನಟರೂ ಶಾರುಖ್‌ಗೆ ಪೈಪೋಟಿ ನೀಡಲು ಸರದಿಯಲ್ಲಿದ್ದಾರೆ.

57ನೇ ವಯಸ್ಸಲ್ಲೂ ಶಾರುಖ್​ ಹ್ಯಾಂಡ್​ಸಮ್​ ಆಗಿರೋದ್ಯಾಕೆ? ಆನಂದ್​ ಮಹೀಂದ್ರಾ ಉತ್ತರ ಕೇಳಿ...

 

 
 
 
 
 
 
 
 
 
 
 
 
 
 
 

A post shared by Shah Rukh Khan (@iamsrk)

click me!