ಅಪ್ಪ ಕಮಲ್ ಹಾಸನ್ ವಿಚ್ಛೇದನದಿಂದ ಮಗಳು ಶ್ರುತಿ ಹಾಸನ್ ಕಲಿತ ಪಾಠವೇನು?

By Roopa Hegde  |  First Published Dec 27, 2024, 2:00 PM IST

ನಟ ಕಮಲ್ ಹಾಸನ್ ಹಾಗೂ ಸಾರಿಕಾ ವಿಚ್ಛೇದನ ಪಡೆದಿದ್ದಾರೆ. ಇದು ಮಕ್ಕಳ ಮೇಲೆ ಯಾವ ಪರಿಣಾಮ ಬೀರಿದೆ, ಇದರಿಂದ ಕಲಿತ ಪಾಠವೇನು ಎಂಬುದನ್ನು ಇದೇ ಮೊದಲ ಬಾರಿ ಮಗಳು ಹಾಗೂ ನಟಿ ಶ್ರುತಿ ಹಾಸನ್ ಎಲ್ಲರ ಮುಂದಿಟ್ಟಿದ್ದಾರೆ.
 


ನಟ ಕಮಲ್ ಹಾಸನ್ (Actor Kamal Haasan) ಮತ್ತು ಸಾರಿಕಾ 2004 ರಲ್ಲಿ ವಿಚ್ಛೇದನ ಪಡೆದು ಬೇರೆಯಾಗಿದ್ದಾರೆ. ಪಾಲಕರ ವಿಚ್ಛೇದನದ ಬಗ್ಗೆ ನಟಿ ಶ್ರುತಿ ಹಾಸನ್ (actress Shruti Haasan) ಇದೇ ಮೊದಲ ಬಾರಿ ಮಾತನಾಡಿದ್ದಾರೆ. ಅವರ ವಿಚ್ಛೇದನ ತಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಹಾಗೂ ಅದರಿಂದ ಅವರು ಕಲಿತ ಪಾಠವೇನು ಎಂಬುದನ್ನು ಶ್ರುತಿ ಹಾಸನ್ ಹೇಳಿದ್ದಾರೆ.   

ಕಮಲ್ ಹಾಸನ್ ಮತ್ತು ಸಾರಿಕಾ ಮಗಳು ಶ್ರುತಿ ಹಾಸನ್ ಇತ್ತೀಚೆಗೆ ತಮ್ಮ ಪೋಷಕರ ವಿಚ್ಛೇದನ (divorce)ದ ಬಗ್ಗೆ ಮಾತನಾಡಿದ್ದಾರೆ. 1988 ರಲ್ಲಿ ವಿವಾಹವಾದ ದಂಪತಿ 2002 ರಲ್ಲಿ ಬೇರೆಯಾಗಿದ್ದರು. 2004 ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ, ಶ್ರುತಿ ಕಮಲ್ ಹಾಸನ್ ಹಾಗೂ ಸಾರಿಕಾ ವಿಚ್ಛೇದನ ಬಗ್ಗೆ ಮಾತನಾಡಿದ್ದಾರೆ.

Tap to resize

Latest Videos

undefined

ಶ್ರೇಷ್ಠಾ ಹೊಸ ನಾಟಕ, ಬೆವರಿದ ತಾಂಡವ್, ಕರಗ್ತಾಳಾ ಭಾಗ್ಯಾ ?

ವಿಚ್ಛೇದನದ ನಂತ್ರ ಬದಲಾಯ್ತು ಜೀವನ : ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಶ್ರುತಿ ಹಾಸನ್, ನಾನು ಸುಂದರ ಕುಟುಂಬದಲ್ಲಿ ಜನಿಸಿದ್ದೆ. ದೇವರ ದಯೆಯಿಂದ ಕಲೆ, ಬುದ್ಧಿವಂತಿಕೆ, ಪೋಷಕರು, ಐಷಾರಾಮಿ ಜೀವನ ನನಗೆ ಸಿಕ್ಕಿತ್ತು. ಆದ್ರೆ ಅದ್ರ ಇನ್ನೊಂದು ಮುಖವನ್ನು ನಾನು ನೋಡುವಂತಾಯ್ತು. ನನ್ನ ಹೆತ್ತವರು ಬೇರ್ಪಟ್ಟಾಗ ಜೀವನ ಬದಲಾಯ್ತು ಎಂದು ಶ್ರುತಿ ಹೇಳಿದ್ದಾರೆ. 

ಆರ್ಥಿಕ ಸ್ವಾವಲಂಬನೆ ಮುಖ್ಯ :  ಅಮ್ಮ ವಿಚ್ಛೇದನ ಪಡೆದ ನಂತ್ರ, ಒಬ್ಬ ಮಹಿಳೆಗೆ ಸ್ವಾತಂತ್ರ್ಯ ಎಷ್ಟು ಮುಖ್ಯ ಎಂಬುದು ನನಗೆ ಗೊತ್ತಾಗಿದೆ ಎಂದು ಶ್ರುತಿ ಹೇಳಿದ್ದಾರೆ. ಪಾಲಕರ ವಿಚ್ಛೇದನದಿಂದ ಶ್ರುತಿ ಅನೇಕ ವಿಷ್ಯಗಳನ್ನು ಕಲಿತಿದ್ದಾರೆ. ಆರ್ಥಿಕ ಸ್ವಾವಲಂಬನೆ ನನಗೆ ಅರ್ಥವಾಗಿದೆ. ಅದರಲ್ಲೂ ಹೆಣ್ಣು ಮಗಳಾಗಿರುವ ನನಗೆ ವಿಚ್ಛೇದನ ಜೀವನದ ಪಾಠವನ್ನು ಕಲಿಸಿದೆ ಎಂದಿದ್ದಾರೆ.  ಮಹಿಳಾ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಶ್ರುತಿ, ನಾನು ಸ್ವತಂತ್ರ ಸ್ತ್ರೀವಾದಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದು ನಿಜವಾಗಿಯೂ ತುಂಬಾ ಶಾಂತವಾದ, ಅಭಿನಯಿಸದ  ಹೋರಾಟವಾಗಿದೆ ಎಂದು ಶ್ರುತಿ ಹೇಳಿದ್ದಾರೆ. 

ನಮ್ಮನ್ನು ಪ್ರಶಂಸಿಸಲು ಯಾರೂ ಇಲ್ಲ, ಎಲ್ಲವನ್ನೂ ನಾವೇ ಮಾಡಬೇಕು, ನಾವು ಪ್ರತಿದಿನ ಬದುಕಬೇಕು ಮತ್ತು ನಮ್ಮ ಬಿಲ್‌ಗಳನ್ನು ನಾವೇ ಪಾವತಿಸಬೇಕು. ಇದು ಜೀವನದ ಸಾಮಾನ್ಯ ಭಾಗವಾಗಿದೆ ಎಂಬುದನ್ನು ಅನೇಕ ಮಹಿಳೆಯರು ಅರಿತಿದ್ದಾರೆ ಎಂದು ಶ್ರುತಿ ಹೇಳಿದ್ದಾರೆ.

ರಗ್ ಹೊದ್ದು ರಜಾ ಎಂಜಾಯ್ ಮಾಡ್ತಿರುವ ಸಮಂತಾ, ನೋವು ಮರೆಯಲು ಸರಳ ಮಂತ್ರ

ಪಾಲಕರ ಸಂತೋಷ ಮುಖ್ಯ : ಪಾಲಕರು ಬೇರೆಯಾಗಿದ್ದನ್ನು ಶ್ರುತಿ ಎಂದಿಗೂ ವಿರೋಧಿಸುವುದಿಲ್ಲ. ಅವರು ಒಟ್ಟಿಗಿದ್ದಾಗ, ಸಂತೋಷವಾಗಿದ್ದಾಗ ಅತ್ಯಂತ ಸುಂದರ ದಂಪತಿಯಾಗಿದ್ದರು. ಅವರು ಒಟ್ಟಿಗೆ ಕೆಲಸ ಮಾಡ್ತಿದ್ದರು. ಒಟ್ಟಿಗೆ ಸೆಟ್‌ಗಳಿಗೆ ಹೋಗುತ್ತಿದ್ದರು. ಅಮ್ಮ ಕಾಸ್ಟ್ಯೂಮ್ ಡಿಸೈನ್ ಮಾಡ್ತಿದ್ದರು. ನಮ್ಮ ಇಡೀ ಕುಟುಂಬ ಸಿನಿಮಾದಲ್ಲಿ ತೊಡಗಿಸಿಕೊಂಡಿದೆ. ನಾನಿನ್ನೂ ಕಾಸ್ಟ್ಯೂಮ್ ವಿಭಾಗದಲ್ಲಿದ್ದೆ, ನನ್ನ ತಂಗಿ ಸಹಾಯಕ ನಿರ್ದೇಶಕಿ ವಿಭಾಗದಲ್ಲಿದ್ದಳು, ಹಾಗಾಗಿ ನಮ್ಮದು ಚಲನಚಿತ್ರ ಕುಟುಂಬ ಎಂದು ಶ್ರುತಿ ಹೇಳಿದ್ದಾರೆ. ಅವರು ಬೇರ್ಪಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಆದ್ರೆ ನಾನು ಅವರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ವೈಯಕ್ತಿಕವಾಗಿ, ಅವರಿಬ್ಬರೂ ತುಂಬಾ ಪ್ರತಿಭಾವಂತರು. ಅವರು ಇನ್ನೂ ನನ್ನ ಹೆತ್ತವರಾಗಿರುವುದು ನನಗೆ ಖುಷಿ ತಂದಿದೆ. ಅವರು ಪ್ರತ್ಯೇಕವಾಗಿ ಸಂತೋಷವಾಗಿದ್ದರೆ ಅದು ನನಗೆ ಖುಷಿ ನೀಡುತ್ತದೆ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿಒರುವ ಶ್ರುತಿ, ಪ್ರೀತಿ ವಿಷ್ಯದಲ್ಲೂ ಆಗಾಗ ಸುದ್ಧಿಯಾಗ್ತಿರುತ್ತಾರೆ. ಅವರು ಹೆಸರು, ಅನೇಕ ನಟರ ಜೊತೆ ಥಳುಕು ಹಾಕಿಕೊಂಡಿದೆ. ಆದ್ರೆ ಸಂದರ್ಶನದಲ್ಲಿ ಸದ್ಯ ಮದುವೆ ಆಗೋದಿಲ್ಲ. ಇಷ್ಟಪಡುವ ವ್ಯಕ್ತಿ ಸಿಕ್ಕಿಲ್ಲ ಎಂದ ಶ್ರುತಿ ರಿಲೇಶನ್ಶಿಪ್ ಬೇಕು, ರೋಮ್ಯಾನ್ಸ್ ಕಷ್ಟ ಎಂದಿದ್ದಾರೆ. 

click me!