ರಗ್ ಹೊದ್ದು ರಜಾ ಎಂಜಾಯ್ ಮಾಡ್ತಿರುವ ಸಮಂತಾ, ನೋವು ಮರೆಯಲು ಸರಳ ಮಂತ್ರ

By Roopa Hegde  |  First Published Dec 27, 2024, 12:22 PM IST

ಸಮಂತಾ ರುತ್ ಪ್ರಭು ರಜಾ ಮೂಡ್ ನಲ್ಲಿದ್ದಾರೆ. ಅತ್ಯಂತ ಸರಳವಾಗಿ, ಶಾಂತವಾಗಿ, ನಿಧಾನವಾಗಿ ರಜೆಯನ್ನು ಅವರು ಕಳೆಯುತ್ತಿದ್ದಾರೆ. ಪ್ರತಿ ಕ್ಷಣವನ್ನೂ ಸಮಂತಾ ಎಂಜಾಯ್ ಮಾಡ್ತಿದ್ದಾರೆ. 
 


ಟಾಲಿವುಡ್ ನ ಎವರ್ ಗ್ರೀನ್ ನಟಿ ಸಮಂತಾ ರುತ್ ಪ್ರಭು (Tollywood  evergreen actress Samantha Ruth Prabhu) ರಿಲಾಕ್ಸ್ ಮೂಡ್ ನಲ್ಲಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿರುವ ಸಮಂತಾ, ರಜಾ ದಿನ (holiday) ಗಳನ್ನು ಶಾಂತವಾಗಿ ಕಳೆಯುತ್ತಿದ್ದಾರೆ. ಕೆಲಸಕ್ಕೆ ರೆಸ್ಟ್ ಸಿಗ್ತಿದ್ದಂತೆ ಜನರು ದೇಶ, ವಿದೇಶದ ಪ್ರವಾಸದಲ್ಲಿ ಬ್ಯುಸಿಯಾಗ್ತಾರೆ. ಆದ್ರೆ ಸಮಂತಾ ಸ್ಟೈಲ್ ಸ್ವಲ್ಪ ಭಿನ್ನವಾಗಿದೆ. ಮನೆಯಲ್ಲಿ ರಜಾ ದಿನ ಎಂಜಾಯ್ ಮಾಡ್ತಿರುವ ಅವರು ರಗ್ ಹೊದ್ದು ಮಲಗಿದ್ದಾರೆ. 

ಶುಕ್ರವಾರ ತಮ್ಮ ಇನ್ಸ್ಟಾ ಖಾತೆ (Insta account ) ಯಲ್ಲಿ ಐದಾರು ಫೋಟೋಗಳನ್ನು ಸಮಂತಾ ಪೋಸ್ಟ್ ಮಾಡಿದ್ದಾರೆ. ಬಹುಶಃ ಸುಮ್ಮನೆ ಕುಳಿತು ನೋಡುವುದು ಸರಿಯೇ. ಬಹುಶಃ ಗದ್ದಲ ಸ್ವಲ್ಪ ಸಮಯ ನಿಲ್ಲಬಹುದು. ಬಹುಶಃ ಬಿಡುವಿಲ್ಲದ ಜಗತ್ತಿನಲ್ಲಿ ನಿಮಗೆ ಸರಳವಾದ ಜೀವನದ ಶಾಂತಿ ಬೇಕು. ಬಹುಶಃ ಯಾವುದೇ ಯೋಜನೆಗಳಿಲ್ಲದಿರುವುದು ಯೋಜನೆಯ ಭಾಗವಾಗಿದೆ. ಅಲೆದಾಡುವುದು, ಆಶ್ಚರ್ಯಪಡುವುದು ನಮಗೆ ಸಾಧ್ಯ. ರಜಾ ದಿನದ ಶುಭಾಶಯ ಎಂದು ಸಮಂತಾ ಶೀರ್ಷಿಕೆ ಹಾಕಿದ್ದಾರೆ. ಸಮಂತಾ ಮೊದಲ ಫೋಟೋದಲ್ಲಿ ಅವರು ನಿದ್ರೆ ಮಾಡ್ತಿರೋದನ್ನು ನೀವು ನೋಡ್ಬಹುದು. ಎರಡನೇ ಫೋಟೋದಲ್ಲಿ ವಿ ಕೆನ್ ಡು ಈಟ್ ಎನ್ನುವ ಫೋಟೋ ಹಿಡಿದು ಸಮಂತಾ ಫೋಟೋಕ್ಕೆ ಪೋಸ್ ನೀಡಿದ್ದಾರೆ. ನಿಮ್ಮ ಕನಸುಗಳನ್ನು ಅನುಸರಿಸಿ ಎಂಬ ಫೋಟೋವನ್ನು ಸಮಂತಾ ಪೋಸ್ಟ್ ಮಾಡಿದ್ದಾರೆ. ನಾಲ್ಕನೇ ಫೋಟೋದಲ್ಲಿ ದೇವರ ಫೋಟೋ, ದೀಪವನ್ನು ನೀವು ಕಾಣ್ಬಹುದು. ಗಿಡ, ಹೂವು, ಮುಳುಗುತ್ತಿರುವ ಸೂರ್ಯ, ಎರಡು ಹಸು ಸೇರಿದಂತೆ ಅನೇಕ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ಸಮಂತಾ ತಮ್ಮ ರಜಾ ದಿನವನ್ನು ಪ್ರಕೃತಿಯ ಮಡಿಲಲ್ಲಿ, ಆರಾಮವಾಗಿ, ಶಾಂತವಾಗಿ ಎಂಜಾಯ್ ಮಾಡ್ತಿದ್ದಾರೆ ಎಂಬುದನ್ನು ಈ ಫೋಟೋ ನೋಡಿ ನೀವು ಹೇಳ್ಬಹುದು.

Tap to resize

Latest Videos

ಶ್ರೇಷ್ಠಾ ಹೊಸ ನಾಟಕ, ಬೆವರಿದ ತಾಂಡವ್, ಕರಗ್ತಾಳಾ ಭಾಗ್ಯಾ ?

ಸಮಂತಾ ಫೋಟೋಕ್ಕೆ ಲೈಕ್ಸ್, ಕಮೆಂಟ್ ಸುರಿಮಳೆಯಾಗಿದೆ. ಫ್ಯಾನ್ಸ್, ಸಮಂತಾ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಸಣ್ಣ ಸಣ್ಣ ವಿಷ್ಯದಲ್ಲಿ ಸಂತೋಷ ಕಾಣ್ತಿರುವ ಸಮಂತಾರಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ನೀವು ಹಿಂದೆ ಬೀಳುತ್ತಿರುವಂತೆ ಭಾಸವಾಗುತ್ತದೆ. ಆದರೆ ನಿಮಗೆ ಏನನ್ನೂ ಮಾಡಲು ಮನಸ್ಸಿರುವುದಿಲ್ಲ. ಸಮಯ ತೆಗೆದುಕೊಳ್ಳುವುದು ಸರಿ ಎಂದು ಯಾರೂ ನಮಗೆ ಹೇಳುವುದಿಲ್ಲ. ನಿರಂತರವಾಗಿ ಕೆಲಸ ಮಾಡಲು ಅವರು ಬಯಸುತ್ತಾರೆ. ತುಂಬಾ ಧನ್ಯವಾದ ಸ್ಯಾಮ್. ಇದರ ಅವಶ್ಯಕತೆ ಇತ್ತು ಎಂದು ಫ್ಯಾನ್ಸ್ ಒಬ್ಬರು ಕಮೆಂಟ್ ಮಾಡಿದ್ದಾರೆ ಧನ್ಯವಾದಗಳು. ನಮಗೆ ನಿಧಾನದ ಪ್ರಾಮುಖ್ಯತೆ ತೋರಿಸಿದ್ದಕ್ಕಾಗಿ. ಈ ಗದ್ದಲದ ಜಗತ್ತಿನಲ್ಲಿ ಶಾಂತವಾಗಿರಿ ಮತ್ತು ವರ್ತಮಾನವನ್ನು ಆನಂದಿಸಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಕನಸಿನ ಹಿಂದೆ ಹೋಗಿ ಎಂಬ ಸಮಂತಾ ಫೋಟೋವನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. 

ಬಿಬಿ ರೆಸಾರ್ಟ್‌ನಲ್ಲಿ ಚಿಲ್ಲರೆ ಬುದ್ಧಿ ತೋರಿಸಿದ ಚೈತ್ರಾ ಕುಂದಾಪುರ; ಫೋಟೋ ವೈರಲ್

2023ರಲ್ಲಿ ಖುಷಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಸಮಂತಾ ಕಾಣಿಸಿಕೊಂಡಿದ್ದರು. ಸದ್ಯ ವರುಣ್ ಧವನ್ ಜೊತೆ ವೆಬ್ ಸರಣಿಯಲ್ಲಿ ಸಮಂತಾ ನಟಿಸಿದ್ದಾರೆ. ಸಿಟಾಡೆಲ್ ವೆಬ್ ಸರಣಿಯಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 7ರಂದು ಇದು ಬಿಡುಗಡೆಯಾಗಿದೆ. ಸಮಂತಾ ಈ ಸರಣಿಯಲ್ಲಿ ಗೂಢಚಾರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೆಲಸದ ಮಧ್ಯೆಯೂ ಸಮಂತಾ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ತಿಂದಿದ್ದಾರೆ. ಸಮಂತಾ ಮಾಜಿ ಪತಿ ನಟ ನಾಗ ಚೈತನ್ಯ ಎರಡನೇ ಮದುವೆ ಆಗಿದ್ದರೆ, ಅದೇ ಸಮಯದಲ್ಲಿ ಸಮಂತಾ ತಂದೆಯನ್ನು ಕಳೆದುಕೊಂಡಿದ್ದಾರೆ. ಸಮಂತಾ ಕೂಡ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲ ನೋವನ್ನು ಎದುರಿಸಿ, ದಿಟ್ಟವಾಗಿ ಹೆಜ್ಜೆ ಇಡ್ತಿರುವ ಸಮಂತಾ, ಶಾಂತತೆಯನ್ನು ಇಷ್ಟಪಡ್ತಿದ್ದಾರೆ. 
 

click me!