ಮೋದಿ ಪಕ್ಕದಲ್ಲೇ ಕೂತು ತೂಕಡಿಸಿದ ಶ್ಲೋಕಾ ಅಂಬಾನಿ, ನೀತಾ ಮೊದಲ‌ ಸೊಸೆ ಪರ ನೆಟ್ಟಿಗರ ಬ್ಯಾಟಿಂಗ್!

By Roopa Hegde  |  First Published Jul 15, 2024, 1:26 PM IST

ಅಂಬಾನಿ ಹಿರಿ ಸೊಸೆ ಶ್ಲೋಕಾ ಅಂಬಾನಿ ವಿಡಿಯೋ ಒಂದು ವೈರಲ್ ಆಗಿದೆ. ಅದನ್ನು ನೋಡಿದ ನೆಟ್ಟಿಗರು, ಶ್ಲೋಕಾ ಪರ ನಿಂತಿದ್ದಾರೆ. ಶ್ರೀಮಂತರು ಮನುಷ್ಯರಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ.
 


ಅನಂತ್ ಅಂಬಾನಿ, ರಾಧಿಕಾ ಮದುವೆ ಕಾರ್ಯಕ್ರಮ ಇನ್ನೂ ನಡೆಯುತ್ತಲೇ ಇದೆ. ಸತತ ಎರಡ್ಮೂರು ತಿಂಗಳಿಂದ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಗಳಿಗೆ ತೆರೆ ಬಿದ್ದಿದ್ದು, ಮದುವೆ ನಂತ್ರದ ಕಾರ್ಯಕ್ರಮ ನಡೆಯುತ್ತಿದೆ. ಒಂದಾದ್ಮೇಲೆ ಒಂದರಂತೆ ನಡೆದ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಎಲ್ಲರ ಗಮನ ಸೆಳೆದವರಲ್ಲಿ ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಹಿರಿ ಸೊಸೆ ಶ್ಲೋಕಾ ಅಂಬಾನಿ ಸೇರಿದ್ದಾರೆ. ಶ್ಲೋಕಾ ಅಂಬಾನಿ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲ ಕಡೆ ನಗ್ತಾ ಓಡಾಡ್ತಿದ್ದ ಶ್ಲೋಕಾ, ಆಶೀರ್ವಾದ ಸಮಾರಂಭದ ವೇಳೆ ಸುಸ್ತಾಗಿದ್ರು. ಹಾಗಾಗಿ ವೇದಿಕೆ ಮೇಲೆ ನಡೆಯುತ್ತಿದ್ದ ಕಾರ್ಯಕ್ರಮ ನೋಡ್ತಾನೆ ಒಂದು ನಿದ್ರೆ ಮಾಡಿ ಬಂದ್ರು. ಇದನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿಯಲಾಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಬಳಕೆದಾರರು ಶ್ಲೋಕಾ ಪರ ನಿಂತಿದ್ದಾರೆ.

ವೈರಲ್ (Viral) ವಿಡಿಯೋದಲ್ಲಿ ಶ್ಲೋಕಾ (Shloka) ಅಂಬಾನಿ, ಪತಿ ಆಕಾಶ್ (Akash) ಅಂಬಾನಿ ಜೊತೆ ಕುಳಿತಿದ್ದಾರೆ. ವೇದಿಕೆ ಮೇಲಿಂದ ಶಬ್ಧ ಬರ್ತಿದೆ. ಕಣ್ಣನ್ನು ಆಗಾಗ ಮಿಟುಕಿಸಿ ನಿದ್ರೆ ಓಡಿಸುವ ಪ್ರಯತ್ನ ಮಾಡ್ತಿದ್ದ ಶ್ಲೋಕಾಗೆ ಅದು ಸಾಧ್ಯವಾಗೋದಿಲ್ಲ. ಅಲ್ಲಯೇ ಅವರು ಕಣ್ಣು ಮುಚ್ಚುತ್ತಾರೆ. ತೂಕಡಿಸಿ, ಎದ್ದ ಅವರು ಆಕಾಶ್ ಅಂಬಾನಿ ಮುಖ ನೋಡ್ತಾರೆ. ಆಶೀರ್ವಾದ ಸಮಾರಂಭದಲ್ಲಿ ಶ್ಲೋಕಾ ಅಂಬಾನಿ ನಿದ್ರಿಸುತ್ತಿದ್ದಾರೆ. ಅಂಬಾನಿಯ ಕ್ಯೂಟೆಸ್ಟ್ ಸೊಸೆ ಎಂದು ಶೀರ್ಷಿಕೆ ಹಾಕಲಾಗಿದೆ.

ಅಂಬಾನಿ ಮದ್ವೆಯಲ್ಲಿ ಹಾಡಲು ಹಾಲಿವುಡ್ ಸಿಂಗರ್ ರೇಮಾ ಪಡೆದ ಸಂಭಾವನೆ ಇಷ್ಟೊಂದಾ?

Tap to resize

Latest Videos

ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು, ವಿಡಿಯೋ ಮಾಡಿದವರನ್ನು ಖಂಡಿಸಿದ್ದಾರೆ. ಇಬ್ಬರು ಮಕ್ಕಳ ತಾಯಿ ಶ್ಲೋಕಾ, ಮದುವೆ ಕಾರ್ಯಕ್ರಮದಲ್ಲಿ ಸುಸ್ತಾಗೋದು ಸಹಜ ಎಂದಿದ್ದಾರೆ. ಮದುವೆಯ ಎಲ್ಲ ಕಾರ್ಯಕ್ರಮದಲ್ಲಿ ಇಬ್ಬರು ಮಕ್ಕಳನ್ನು ಸಂಭಾಳಿಸ್ತಾ ಪಾಲ್ಗೊಂಡಿದ್ದಾರೆ. ಅವರಿಗೆ ನಿದ್ರೆ ಸರಿಯಾಗಿ ಆಗಿರೋದಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಮನೆಯಲ್ಲಿ ಸತತ ಕಾರ್ಯಕ್ರಮಗಳು ಮತ್ತು ಅತಿಥಿಗಳನ್ನು ಸ್ವಾಗತಿಸುವ ಕೆಲಸದಿಂದಾಗಿ ಅವರು ತುಂಬಾ ದಣಿದಿದ್ದಾರೆ. ಶ್ರೀಮಂತರಾಗುವುದು ಅಷ್ಟು ಸುಲಭವಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಬರೀ ಮದುವೆಯಿಂದ ಮಾತ್ರವಲ್ಲ ತೋರಿಕೆ ಡ್ರಾಮಾದಿಂದ ಅವರು ಬೇಸತ್ತಂತಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. 

ಇದು ತಮಾಷೆಯ ಅಲ್ಲ. ಇದು ಸಾಮಾನ್ಯ. ಅವರೂ ಮನುಷ್ಯರು. ಕಾರ್ಯಕ್ರಮದಲ್ಲಿ ಅನಂತ್ ಮತ್ತು ರಾಧಿಕಾ ಕೂಡ ನಿದ್ರಿಸುತ್ತಿದ್ದರೆ ಆಶ್ಚರ್ಯವೇನಿಲ್ಲ. ಶ್ರೀಮಂತರ ಮನೆ ಆಗಿರಲಿ ಇಲ್ಲ ಬಡವರ ಮನೆ ಆಗಿರಲಿ, ಮದುವೆ ಸಮಾರಂಭಗಳಲ್ಲಿ ನಿದ್ರೆಗೆಡೋದು ಸಾಮಾನ್ಯ. ದಣಿವಿನಿಂದ ಹಗಲಿನಲ್ಲಿ ನಿದ್ರೆ ಬರಲು ಶುರುವಾಗುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ. 

ಕಳೆದ ನಾಲ್ಕೈದು ತಿಂಗಳಿಂದ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಅಂಬಾನಿ ಹಿರಿ ಸೊಸೆ ಇದ್ರಿಂದ ಸುಸ್ತಾಗಿದ್ದಾರೆ. ಆಕೆ ಸ್ಥಿತಿಯನ್ನು ಒಂದು ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಒಬ್ಬರು ಕಮೆಂಟ್ ಹಾಕಿದ್ರೆ ಇನ್ನೊಬ್ಬರು, ಆಕಾಶ್, ಪತ್ನಿ ನಿದ್ರೆ ಮಾಡ್ತಿರೋದನ್ನು ನೋಡಿಯೂ ಎಬ್ಬಿಸುವ ಪ್ರಯತ್ನ ಮಾಡಿಲ್ಲ. ಅವರಿಗೆ ಗೊತ್ತು, ಅಮ್ಮಂದಿರ ಕಷ್ಟ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಅಂಬಾನಿ ಮಗನ ಮದುವೆಯಲ್ಲಿ ಭಾಗಿಯಾದ ಯಶ್ ರಾಧಿಕಾ ಪಂಡಿತ್, ನಟ ಕೂದಲಿಗೆ ಕತ್ತರಿ ಹಾಕಿದ್ದು ರಿವೀಲ್!

ಕಳೆದ ಒಂದು ವರ್ಷಗಳಿಂದ ಅನಂತ್ ಹಾಗೂ ರಾಧಿಕ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಮದುವೆ ಪೂರ್ವ ಸಮಾರಂಭ ಸಾಕಷ್ಟು ನಡೆದಿದೆ. ಅದಾದ್ಮೇಲೆ ಜುಲೈ 12ಕ್ಕೆ ಮದುವೆ ನಡೆದಿದ್ದು, ಜುಲೈ 13ರಂದು ಆಶೀರ್ವಾದ ಕಾರ್ಯಕ್ರಮ ನಡೆದಿದೆ. ಜುಲೈ 14ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಿದೆ.   ಜುಲೈ 15 ಅಂದ್ರೆ ಇಂದು ಮುಂಬೈನಲ್ಲಿ ರಿಸೆಪ್ಷನ್ ನಡೆಯಲಿದೆ. ಸ್ಯಾಂಡಲ್ವುಡ್ ರಾಕಿ ಭಾಯ್ ಯಶ್ ರಿಂದ ಹಿಡಿದು ಬಾಲಿವುಡ್, ಹಾಲಿವುಡ್ ಸ್ಟಾರ್ ಜೊತೆ ಎಲ್ಲ ಉದ್ಯಮಗಳ ಸೆಲೆಬ್ರಿಟಿಗಳು ಈ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅಂಬಾನಿ ಮಗನ ಮದುವೆ ಸಂಭ್ರಮವೇ ಇನ್ನೂ ಮನೆ ಮಾಡಿದೆ. 

click me!