ತಾವು ಅಮ್ಮನ ಗರ್ಭದಲ್ಲಿದ್ದಾಗ ಅಮ್ಮನಿಗೆ ವೈದ್ಯರು ಗರ್ಭಪಾತ ಮಾಡಲು ಸಲಹೆ ನೀಡಿದ್ದ ವಿಷಯವನ್ನು ಬಹಿರಂಗಗೊಳಿಸಿ ಭಾವುಕರಾದ ನಟಿ ಶಿಲ್ಪಾ ಶೆಟ್ಟಿ
ಬಾಲಿವುಡ್ ನಟಿ, ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಇಂದು ದೊಡ್ಡ ಪ್ರಮಾಣದಲ್ಲಿ ಹೆಸರು ಮಾಡಿದ್ದಾರೆ. ಅವರು ಸದ್ಯ ಸುಖಿ ಚಿತ್ರದಲ್ಲಿ ಬಿಜಿ ಇದ್ದು, ಚಿತ್ರವು ಇದೇ 22ರಂದು ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಅವರು ತಮ್ಮ ಹುಟ್ಟಿನ ಕುರಿತು ಕೆಲವೊಂದು ಮಾಹಿತಿ ಹೇಳಿಕೊಂಡಿದ್ದು, ಭಾವುಕರಾಗಿದ್ದಾರೆ. ಈ ಹಿಂದೆ ಅವರು ತಮಗೆ ಮಗ ಹುಟ್ಟಿದ ಮೇಲೆ ಮೂರು ಬಾರಿ ಗರ್ಭಪಾತವಾಗಿ ತಾವು ಅನುಭವಿಸಿದ್ದ ನೋವಿನ ಕುರಿತು ಹೇಳಿಕೊಂಡಿದ್ದರು. 2012ರಲ್ಲಿ ಮಗ ವಿಹಾನ್ ಹುಟ್ಟಿದ ಬಳಿಕ ಎರಡನೇ ಮಗುವನ್ನು ಬಾಡಿಗೆ ತಾಯ್ತನದ (ಸರೋಗೆಸಿ) ಮೂಲಕ ಬರ ಮಾಡಿಕೊಳ್ಳಲು ನಿರ್ಧರಿಸಿದ್ದು ಏಕೆ ಎನ್ನುವ ಕಾರಣ ಬಿಚ್ಚಿಟ್ಟಿದ್ದರು. 'ನನ್ನ ಮಗ ಹುಟ್ಟಿದ ಮೇಲೆ ಸಾಕಷ್ಟು ಬಾರಿ ಎರಡನೇ ಮಗು ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡಿದೆ ಆದರೆ ನಾನು ಆಟೋ tomium ಕಾಯಿಲೆ Apla ಯಿಂದ ಬಳಲುತ್ತಿದ್ದೆ. ಇದರಿಂದ ಎರಡು ಮೂರು ಸಲ ಗರ್ಭಪಾತವಾಗಿದೆ. ನಾನು ಸಹೋದರಿಯರ ಜೊತೆ ಹುಟ್ಟಿ ಬೆಳೆದಿರುವುದು ಹೀಗಾಗಿ ನನ್ನ ಮಗ ಒಬ್ಬಂಟಿಯಾಗಿ ಬೆಳೆಯುವುದು ಬೇಡ ಎಂದು ನಿರ್ಧರಿಸಿ ನಾನು ಬಾಡಿಗೆ ತಾಯ್ತನಕ್ಕೆ ಮುಂದಾದೆ ಎಂದಿದ್ದರು.
ಇದೀಗ ಅವರು ತಮ್ಮ ಹುಟ್ಟಿನ ರಹಸ್ಯವನ್ನು ಹೇಳಿದ್ದಾರೆ. ತಾವು ಅಮ್ಮನ ಗರ್ಭದಲ್ಲಿ ಇರುವಾಗಲೇ ಅಮ್ಮನಿಗೂ ಗರ್ಭಪಾತ ಮಾಡಿಕೊಳ್ಳಲು ಹೇಳಿದ್ದರೂ, ತಾವು ಹೇಗೆ ಹುಟ್ಟಿದೆ ಎಂಬ ಕುರಿತು ಇದೇ ಮೊದಲ ಬಾರಿಗೆ ನಟಿ ನೋವು ತೋಡಿಕೊಂಡಿದ್ದಾರೆ. ಸುಖಿ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಶಿಲ್ಪಾ ಶೆಟ್ಟಿ ಅವರು ಅಮ್ಮನ ಗರ್ಭದಲ್ಲಿದ್ದಾಗ ಗರ್ಭಪಾತ ಮಾಡಿಸಿಕೊಳ್ಳಲು ಅವರ ಅಮ್ಮನಿಗೆ ವೈದ್ಯರು ಸೂಚಿಸಿದ್ದರು ಎನ್ನುವ ಶಾಕಿಂಗ್ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.
ಮಗ ಹುಟ್ಟಿದ ಮೇಲೆ ಮೂರು ಸಲ ಗರ್ಭಪಾತವಾಗಿದೆ: ಕಣ್ಣೀರಿಟ್ಟ ನಟಿ ಶಿಲ್ಪಾ ಶೆಟ್ಟಿ
’ನಾನು ಅಮ್ಮನ ಗರ್ಭದಲ್ಲಿದ್ದಾಗ, ತಾಯಿಯ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ರಕ್ತಸ್ರಾವವಾಗುತ್ತಿತ್ತು. ನಾನು ಹುಟ್ಟಿದರೆ ಅವರ ಜೀವಕ್ಕೇ ಅಪಾಯ ಎಂದೂ ವೈದ್ಯರು ಹೇಳಿದ್ದರು. ಗರ್ಭಪಾತ ಅನಿವಾರ್ಯವಾಗಿತ್ತು. ಆದ್ದರಿಂದ ನಾನು ಹುಟ್ಟುವುದೇ ಇಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೂ ಅಮ್ಮ ನನಗೆ ಜನ್ಮ ನೀಡಿದಳು’ ಎಂದು ಶಿಲ್ಪಾ ಭಾವುಕರಾಗಿ ನುಡಿದಿದ್ದಾರೆ. ನನ್ನ ಹುಟ್ಟು ಅಮ್ಮನಿಗೆ ಮಾತ್ರವಲ್ಲದೇ, ನನಗೂ ಪುನರ್ಜನ್ಮವೇ. ನನ್ನ ಹುಟ್ಟಿನ ಹಿಂದೆ ಯಾವುದೋ ಬಲವಾದ ಕಾರಣ ಇದ್ದಿರಬೇಕು ಎಂದಿದ್ದಾರೆ ಶಿಲ್ಪಾ. ಪ್ರತಿಯೊಬ್ಬರ ಜೀವನದಲ್ಲೂ ಹಲವು ಕಷ್ಟಗಳು ಇದ್ದೇ ಇರುತ್ತವೆ. ಹಾಗಾಗಿ ಅವರಲ್ಲಿ ಸ್ಫೂರ್ತಿ ತುಂಬಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ. ಬದುಕು ಯಾರಿಗೂ ಸುಲಭವಲ್ಲ ಎಂದು ತಮ್ಮ ಹುಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಅಂದಹಾಗೆ ಸುಖಿ ಚಿತ್ರದ ಮೂಲಕ ಶಿಲ್ಪಾ ಕೆಲ ಕಾಲದ ಬ್ರೇಕ್ ಬಳಿಕ ಕಮ್‌ಬ್ಯಾಕ್ ಆಗುತ್ತಿದ್ದಾರೆ. ಸೋನಾಲ್ ಜೋಶಿ ನಿರ್ದೇಶಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದರ ಪ್ರಕಾರ, ಶಿಲ್ಪಾ ಇದರಲ್ಲಿ ಅತೃಪ್ತ ಗೃಹಿಣಿಯ ಪಾತ್ರ ನಿರ್ವಹಿಸುತ್ತಿರುವುದನ್ನು ತಿಳಿಯಬಹುದು. ಅವಳು ತನ್ನ ಕೆಲಸ ಮಾಡುವ ಗಂಡನನ್ನು ನೋಡಿಕೊಳ್ಳುವುದು, ಅವನ ಅನಾರೋಗ್ಯದ ತಂದೆಗೆ ಚಿಕಿತ್ಸೆ ನೀಡುವುದು ಮತ್ತು ಶಾಲೆಗೆ ಹೋಗುವ ಮಗನನ್ನು ಕರೆದುಕೊಂಡು ಹೋಗುವುದು... ಹೀಗೆ ತನ್ನ ಪ್ರಾಪಂಚಿಕ ದಿನಚರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮಹಿಳೆಯಾಗಿದ್ದಾಳೆ. ತನ್ನ ಶಾಲೆಯ ಸ್ನೇಹಿತರ ಮರು ಭೇಟಿಯ ಕಾರ್ಯಕ್ರಮಕ್ಕೆ ಕರೆ ಬಂದಾಗ, ಹಳೆಯ ಸ್ನೇಹಿತರನ್ನು ನೋಡಲು ಉತ್ಸುಕಳಾಗಿರುತ್ತಾಳೆ ನಾಯಕಿ. ಆದರೆ ಪತಿಯು ದೆಹಲಿಗೆ ಭೇಟಿ ನೀಡಬೇಕಿರುವ ಹಿನ್ನೆಲೆಯಲ್ಲಿ ಇದಕ್ಕೆ ಅನುಮತಿ ನೀಡುವುದಿಲ್ಲ. ಆಗ ನಾಯಕಿ ಸುಖಿ ತನ್ನ ಪತಿಗೆ ತಿಳಿಸದೆ ಹೋಗುವ ನಿರ್ಧಾರ ಮಾಡಿದಾಗ ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕುತೂಹಲ.
ಯುವಕರು, ವಯಸ್ಸಾದೋರು ... ನಿಮ್ಗೆ ಸುಖ ಎಲ್ಲಿ ಸಿಗತ್ತೆ ಎಂದ ಪ್ರಶ್ನೆಗೆ ಶಿಲ್ಪಾ ಹೇಳಿದ್ದೇನು?