ಶಿಲ್ಪಾ ಶೆಟ್ಟಿ ಮಗ ಸೋನು ಸೂದ್‌ಗೆ ಗೌರವ ಸಲ್ಲಿಸಿದ್ದು ಹೀಗೆ..! ಸೋನು ರಿಯಾಕ್ಷನ್ ನೋಡಿ

Suvarna News   | Asianet News
Published : Oct 10, 2020, 11:10 AM ISTUpdated : Oct 10, 2020, 02:23 PM IST
ಶಿಲ್ಪಾ ಶೆಟ್ಟಿ ಮಗ ಸೋನು ಸೂದ್‌ಗೆ ಗೌರವ ಸಲ್ಲಿಸಿದ್ದು ಹೀಗೆ..! ಸೋನು ರಿಯಾಕ್ಷನ್ ನೋಡಿ

ಸಾರಾಂಶ

ಶಿಲ್ಪಾ ಶೆಟ್ಟಿ ಮಗ ವಿಯಾನ್ ಇತ್ತೀಚೆಗೆ ಮಾಡಿರೋ ಒಂದು ಕೆಲಸಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ. ಏನದು..? ಇಲ್ಲಿ ನೋಡಿ

ಶಿಲ್ಪಾ ಶೆಟ್ಟಿ ಮಗ ವಿಯಾನ್ ಅಮ್ಮನ ಜೊತೆ ಬಹತೇಕ ಎಲ್ಲ ವಿಡಿಯೋ ಫೋಟೋಸ್‌ನಲ್ಲಿಯೂ ಕಾಣಿಸಿಕೊಳ್ತಾನೆ. ಅಮ್ಮನ ಜೊತೆಗೇ ಕೇಕ್ ಮಾಡ್ತಾ, ಯೋಗ ಮಾಡ್ತಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೆ.

ಇತ್ತೀಚೆಗೆ ವಿಯಾನ್ ಮಾಡಿರೋ ಒಂದು ಕೆಲಸಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ. 8 ವರ್ಷದ ವಿಯಾನ್ ಅಮ್ಮನ ಹಾಗೇ ಡ್ಯಾನ್ಸ್ ಮಾಡೋದ್ರಲ್ಲೂ ಎತ್ತಿದ ಕೈ. ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಮಗ ಮಾಡಿದ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ರು.

60 ವರ್ಷದಲ್ಲೂ ಫಿಟ್ ಆಗಿರೋಕೆ ಬಯಸ್ತಾರೆ ಈ ನಟಿ..! ಇಲ್ಲಿದೆ ಶಿಲ್ಪಾ ಶೆಟ್ಟಿ Fitness ಸೀಕ್ರೆಟ್

ಸ್ಕೂಲ್ ಪ್ರಾಜೆಕ್ಟ್ ಭಾಗವಾಗಿ ವಿಯಾನ್ ಇದನ್ನು ತಯಾರಿಸಿದ್ದು ಈ ವಿಡಿಯೋ ಈಗ ವೈರಲ್ ಆಗಿದೆ. ಪ್ರಾಜೆಕ್ಟ್ ಮೂಲಕ ಬಾಲಿವುಡ್ ನಟ ಸೋನು ಸೂದ್‌ಗೆ ಗೌರವ ಸಲ್ಲಿಸಿದ್ದಾನೆ ವಿಯಾನ್.

ಇಬ್ಬರು ವಲಸೆ ಕಾರ್ಮಿಕರಿಗೆ ಸೋನು ಸೂದ್ ಮನೆ ಸೇರಲು ನೆರವಾಗುವುದನ್ನು ಅಂದವಾಗಿ ಎನಿಮೇಷನ್ ಮೂಲಕ ವಿಡಿಯೋದಲ್ಲಿ ತೋರಿಸಲಾಗಿದೆ. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಹಸ್ರ ಕಾರ್ಮಿಕರಿಗೆ ನೆರವಾದ ಸೋನು ಕುರಿತ ವಿಡಿಯೋವನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

40 + ನಂತರೂ ಫಿಟ್‌ ಅಂಡ್‌ ಫೈನ್ ಆಗಿರಬೇಕಾ? ಬಳಕುವ ಸೊಂಟ ನಿಮ್ಮದಾಗಬೇಕಾ? ಹೀಗ್ಮಾಡಿ!

ಮಕ್ಕಳು ತಮ್ಮ ಸುತ್ತ ನಡೆಯುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ವಿಯಾನ್ ಇತ್ತೀಚಿನ ಸ್ಕೂಲ್ ಪ್ರಾಜೆಕ್ಟ್‌ನಲ್ಲೇನು ಮಾಡಿದ್ದಾನೆ ನೋಡಿ.. ಬದಲಾವಣೆ ತಂದವರು ಎಂಬುದಾಗಿತ್ತು ಪ್ರಾಜೆಕ್ಟ್ ಟಾಪಿಕ್. ವಿಯಾನ್ ಸೋನು ಮಾಡಿದ ಎಲ್ಲ ಕೆಲಸವನ್ನೂ ಗಮನಿಸುತ್ತಿದ್ದ. ಎಲ್ಲರೂ ಭಯದಿಂದ ಮನೆಯೊಳಗೆ ಕುಳಿತಾಗ ಸೋನು ಧೈರ್ಯದಿಂದ ಹೊರಗೆ ಬಂದ ಅಗತ್ಯವಿದ್ದವರಿಗೆ ನೆರವಾದರು ಎಂದು ಬರೆದಿದ್ದಾರೆ.

ಕಾರ್ಮಿಕರಿಗೆ ನೆರವಾದ ಸೋನು ಕೆಲಸ ವಿಯಾನ್ ನೋಡಿದ್ದಾನೆ. ಹಾಗಾಗಿ ಈ ಎನಿಮೇಟೆಡ್ ವಿಡಿಯೋ ಮಾಡಲು ಅವನು ಕೆಲಸ ಮಾಡಿದ. ಬರೆದು, ಡಬ್ ಮಾಡಿ, ಎಡಿಟ್ ಮಾಡಿದ್ದು, ಈ ಹಿರೋನನ್ನು ಆರಿಸಿದ್ದೂ ಸಂಪೂರ್ಣ ವಿಯಾನ್ ಕೆಲಸ. ನಾನೊಬ್ಬ ಹೆಮ್ಮೆಯ ತಾಯಿ. ಅವನಿಗೆ 8 ವರ್ಷವಷ್ಟೇ ಎಂದಿದ್ದಾರೆ ನಟಿ. ವಿಡಿಯೋವನ್ನು ಸೋನು ಸೂದ್ ಕೂಡಾ ಪೋಸ್ಟ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ. ವಿಯಾನ್ ಸೂಪರ್ ಟ್ಯಾಲೆಂಟೆಡ್, ಅವನ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಉಸಿರು ಬಿಗಿದಿಟ್ಟುಕೊಂಡು ನೋಡುವಂತಹ Serial Killer ಚಿತ್ರಗಳು Don't Miss It