ಚಿರತೆಯ ಔಟ್ಫಿಟ್ನಲ್ಲಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್‌ಕುಂದ್ರಾ ಕಾಣಿಸಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ರಾಜ್‌ಕುಂದ್ರಾ ಅವರಿಗೆ ಟ್ರೋಲಿಗರು ಕಾಲೆಳೆಯುತ್ತಿದ್ದಾರೆ.
ಬಾಲಿವುಡ್ನ ಕ್ಯೂಟ್ ನಟಿಯರಲ್ಲಿ ಒಬ್ಬರು ಕನ್ನಡದ ಬೆಡಗಿ ಶಿಲ್ಪಾ ಶೆಟ್ಟಿ. ವಯಸ್ಸು 48 ಆದರೂ 20ರ ಯುವತಿಯರಂತೆ ಮೆಂಟೇನ್ ಮಾಡಿದ್ದಾರೆ ನಟಿ. ಯೋಗ, ಧ್ಯಾನದ ಮೂಲಕ ಶರೀರವನ್ನು ಫಿಟ್ ಆಗಿಟ್ಟುಕೊಂಡಿದ್ದಾರೆ. ಆದರೆ 2021ರಲ್ಲಿ ಇವರ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಇವರ ಪತಿ, ಖ್ಯಾತ ಉದ್ಯಮಿ ರಾಜ್ ಕುಂದ್ರಾ ನೀಲಿ ಚಿತ್ರ (porn film) ಕೇಸ್ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು. ಬ್ಲೂ ಫಿಲ್ಮ್ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.
ಈ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಟ್ರೀಮಿಂಗ್ ಅಪ್ಲಿಕೇಶನ್ 'ಹಾಟ್ ಶಾಟ್ಸ್' ನ್ನು ಗೂಗಲ್ ಮತ್ತು ಆಪಲ್ ಪ್ಲೇ ಸ್ಟೋರ್ ಡಿಲೀಟ್ ಮಾಡಲಾಗಿತ್ತು. ಇದರ ಜೊತೆಗೆ ರಾಜ್‌ಕುಂದ್ರಾ ಈ ಆ್ಯಪ್ ಮೂಲಕ ಹೇಗೆ ಗ್ರಾಹಕರ ಜೊತೆ ಸಂವಹನ ಮಾಡುತ್ತಿದ್ದರು, ಈ ಆಪ್‌ನೊಳಗೆ ಏನಿತ್ತು ಅನ್ನೋ ರಹಸ್ಯವೂ ಬಯಲಾಗಿತ್ತು. ರಾಜ್ ಕುಂದ್ರಾ ಮುಂಬಯಿಯಲ್ಲಿ ಮಾಡೆಲ್‌ಗಳ ಅಶ್ಲೀಲ ವೀಡಿಯೋ ತಯಾರಿಸಿ ಅದನ್ನು ಇಂಗ್ಲೆಂಡ್‌ಗೆ ಕಳುಹಿಸಿ ಆ್ಯಪ್‌ಗೆ ಅಪ್‌ಲೋಡ್ ಮಾಡಿಸುತ್ತಿದ್ದರು. ಇಂಗ್ಲೆಂಡ್‌ನಲ್ಲಿ ಈತನ ಸಂಬಂಧಿ ಪ್ರದೀಪ್ ಭಕ್ಷಿ ಎಂಬಾತನ ಕೆನ್ರಿನ್ ಲಿಮಿಟೆಡ್ (Cranin Limited) ಕಂಪನಿ ಇದನ್ನು ಈ ವೀಡಿಯೋವನ್ನು ಆ್ಯಪ್ ಮುಖಾಂತರ ಬಿಡುಗಡೆ ಮಾಡುತ್ತಿತ್ತು. ತಾನೇ ಮುಂಬೈಯಲ್ಲಿ ತಯಾರಿಸಿ ಎಡಿಟ್ ಮಾಡುತ್ತಿದ್ದ ಈ ವೀಡಿಯೋವನ್ನು ಭಾರತದಲ್ಲಿ ಅಪ್ ಲೋಡ್ ಮಾಡಲು ಅವಕಾಶವಿಲ್ಲದ ಕಾರಣ ಇದನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗುತ್ತಿತ್ತು. ಈ ದಂಧೆಯಲ್ಲಿ ದಿನಕ್ಕೆ ಲಕ್ಷ ಲಕ್ಷ ಎಣಿಸುತ್ತಿದ್ದರು ಎನ್ನುವ ಆರೋಪ ಎದುರಿಸುತ್ತಿದ್ದಾರೆ.
Sana Khan: ಹಿಜಾಬ್ನಿಂದ ಸುದ್ದಿಯಾಗಿದ್ದ ನಟಿ, ಎದೆಹಾಲುಣಿಸಿ ತಿಂಗಳಲ್ಲಿ 15 ಕೆ.ಜಿ ತೂಕ ಕಳೆದುಕೊಂಡ್ರಂತೆ!
ಇದರ ಮಧ್ಯೆಯೇ, ಶಿಲ್ಪಾ ಶೆಟ್ಟಿ ಹಾಗೂ ರಾಜ್‌ಕುಂದ್ರಾ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದರಲ್ಲಿ ಇಬ್ಬರೂ ಚಿರತೆಯ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಮಿನಿ ಸ್ಕರ್ಟ್ ಧರಿಸಿದರೆ, ಚಿರತೆಯ ಮೈಯನ್ನು ಹೋಲುವ ಔಟ್ಫಿಟ್ನಿಂದ ರಾಜ್‌ಕುಂದ್ರಾ ಮುಖ ಮುಚ್ಚಿಕೊಂಡು ಕಾರಿನಿಂದ ಇಳಿದಿದ್ದಾರೆ. ಶಿಲ್ಪಾ ಶೆಟ್ಟಿ ಮಾಮೂಲಿನಂತೆ ಯುವತಿಯಂತೆ ಕಂಗೊಳಿಸುತ್ತಿದ್ದಾರೆ. ಕ್ಯಾಮೆರಾಗೆ ಪೋಸ್ ಕೊಟ್ಟು ಫ್ಯಾನ್ಸ್ ಬಳಿ ಕೈಬೀಸುತ್ತಿದ್ದಾರೆ. ಆದರೆ ರಾಜ್‌ಕುಂದ್ರಾ ಮಾತ್ರ ಮುಖ ಮುಚ್ಚಿಕೊಂಡು ಕಾರಿನಿಂದ ಇಳಿಯುತ್ತಿದ್ದು, ಅವರ ಬಳಿ ಕ್ಯಾಮೆರಾ ಫೋಕಸ್ ಆಗಿದೆ. ಇದನ್ನು ನೋಡಿ ಟ್ರೋಲಿಗರು ಸುಮ್ಮನೆ ಬಿಟ್ಟಾರೆಯೇ? ಮುಖ ತೋರಿಸುವ ಕೆಲಸ ಮಾಡಿದರೆ ಈ ರೀತಿ ಮುಖ ಮುಚ್ಚಿಕೊಂಡು ಬರುವ ಪ್ರಮೇಯ ಇರುತ್ತಿರಲಿಲ್ಲ ಎಂದು ರಾಜ್ ಕುಂದ್ರಾ ಅವರ ಕಾಲೆಳೆದಿದ್ದಾರೆ. ಇನ್ನಾದರೂ ಮುಖ ಎತ್ತುವ ಕೆಲಸ ಮಾಡಿ ಎಂದು ಹೇಳುತ್ತಿದ್ದರೆ, ಹಲವರು ಶಿಲ್ಪಾ ಆದ್ರೂ ಪತಿಗೆ ಹೇಳಬಾರದಾ ಎಂದಿದ್ದಾರೆ. ಇನ್ನು ಹಲವರು ಶಿಲ್ಪಾ ಶೆಟ್ಟಿಯ ಸೌಂದರ್ಯವನ್ನು ಹೊಗಳಿಸಿದ್ದಾರೆ.
ಇದರ ಮಧ್ಯೆಯೇ, ಈ ನೀಲಿಚಿತ್ರದ ಕಥಾವಸ್ತು ಇರುವ ಚಿತ್ರವೊಂದು ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಬಿ ಟೌನ್ನಲ್ಲಿ ಸಕತ್ ಸದ್ದು ಮಾಡುತ್ತಿದೆ. ಕುತೂಹಲದ ಸಂಗತಿ ಎಂದರೆ ಈ ಚಿತ್ರದ ಮೂಲಕ ರಾಜ್ ಕುಂದ್ರಾ ಬಾಲಿವುಡ್ಗೆ ಎಂಟ್ರಿ ನೀಡಲಿದ್ದಾರಂತೆ. ಅರ್ಥಾತ್ ಬ್ಲೂ ಫಿಲ್ಮ್ ಕೇಸ್ನಲ್ಲಿ (Blue film) ಪ್ರಮುಖ ಆರೋಪಿಯಾಗಿರುವ ಅವರು ತಮ್ಮದೇ ಪಾತ್ರವನ್ನು ಚಿತ್ರದಲ್ಲಿ ಮಾಡಲಿದ್ದಾರಂತೆ! ಈ ಕೇಸ್ನಲ್ಲಿ 63 ದಿನಗಳವರೆಗೆ ಆರ್ಥರ್ ರೋಡ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ರಾಜ್ ಕುಂದ್ರಾ ಅವರು, ಈ ಚಿತ್ರದ ಮೂಲಕ ತಮ್ಮ ಅನುಭವವನ್ನು ಹೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಸದ್ಯ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿಲ್ಲ. ನಿರ್ದೇಶಕರ ಹೆಸರನ್ನು ಮುಚ್ಚಿಡಲಾಗಿದೆ ಆದರೆ ರಾಜ್ ನಿರ್ಮಾಣದಿಂದ ಸ್ಕ್ರಿಪ್ಟಿಂಗ್‌ವರೆಗೆ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
JAILER ಚಿತ್ರಕ್ಕೆ ರಜನಿಕಾಂತ್ ಈ ಪರಿ ಸಂಭಾವನೆನಾ? ಶಿವರಾಜ್ಕುಮಾರ್, ತಮನ್ನಾ ಪಡೆದದ್ದೆಷ್ಟು?