ತಲೈವರ್‌ 170 ಚಿತ್ರಕ್ಕಾಗಿ ರಜನೀಕಾಂತ್‌ ಹೊಸ ಹೇರ್‌ಸ್ಟೈಲ್‌

Published : Aug 06, 2023, 12:15 PM IST
ತಲೈವರ್‌ 170 ಚಿತ್ರಕ್ಕಾಗಿ ರಜನೀಕಾಂತ್‌ ಹೊಸ ಹೇರ್‌ಸ್ಟೈಲ್‌

ಸಾರಾಂಶ

ದಕ್ಷಿಣ ಭಾರತದ ಖ್ಯಾತ ನಟ ರಜನೀಕಾಂತ್‌ ಅವರ ಜೈಲರ್‌ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಈಗಾಗಲೇ ತಮ್ಮ ಮುಂಬರುವ ಚಿತ್ರ ತಲೈವರ್‌ 170ಗಾಗಿ ನಟ ನೂತನ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. 

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ರಜನೀಕಾಂತ್‌ ಅವರ ಜೈಲರ್‌ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಈಗಾಗಲೇ ತಮ್ಮ ಮುಂಬರುವ ಚಿತ್ರ ತಲೈವರ್‌ 170ಗಾಗಿ ನಟ ನೂತನ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್‌ನಲ್ಲಿ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದ ರಜನಿ, ಇದೀಗ ತಮ್ಮ ಗಡ್ಡ ಮತ್ತು ತಲೆಕೂದಲನ್ನು ಸಣ್ಣದಾಗಿ ಕತ್ತರಿಸಿಕೊಂಡಿದ್ದಾರೆ. ಇನ್ನು ಚಿತ್ರಕ್ಕಾಗಿ ಲುಕ್‌ಟೆಸ್ಟ್‌ ನಡೆಯುತ್ತಿದ್ದು ನಟನ ಕೇಶ ವಿನ್ಯಾಸ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ. ' ಜೈಲರ್‌'ನಲ್ಲಿ ರಜನಿಯ ಕೇಶ ವಿನ್ಯಾಸಕರಾಗಿದ್ದ ಆಲಿಮ್‌ ಹಕೀಮ್‌ ಅವರೇ ತಲೈವರ್‌ನಲ್ಲೂ ಕೆಲಸ ಮಾಡುತ್ತಿದ್ದು ಇವರೊಂದಿಗಿನ ರಜನಿ ಅವರ ಇತ್ತೀಚಿನ ಫೋಟೋ ವೈರಲ್‌ ಆಗಿದೆ. ಇದರಲ್ಲಿ ಚಿಕ್ಕ ಚಿಕ್ಕ ಬಿಳಿ ಕೂದಲುಗಳಲ್ಲಿ ರಜನಿ ಕಾಣಿಸಿಕೊಂಡಿದ್ದಾರೆ.

JAILER ಚಿತ್ರಕ್ಕೆ ರಜನಿಕಾಂತ್​ ಈ ಪರಿ ಸಂಭಾವನೆನಾ? ಶಿವರಾಜ್​ಕುಮಾರ್, ತಮನ್ನಾ​ ಪಡೆದದ್ದೆಷ್ಟು?

13ನೇ ವಯಸ್ಸಿಗೇ ರಜನಿಕಾಂತ್‌ ತಾಯಿ ಪಾತ್ರ ಮಾಡಿದ್ರು ಶ್ರೀದೇವಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!