ರಾಖಿ ಸಾವಂತ್ ಪತಿ ಆದಿಲ್ ಖಾನ್ ಜೊತೆ ನಟಿ ಶೆರ್ಲಿನ್ ಚೋಪ್ರಾ ಮತ್ತೆ ರೊಮ್ಯಾನ್ಸ್ ಶುರುವಿಟ್ಟುಕೊಂಡಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ರಾಖಿ ಸಾವಂತ್ ಬಹಳ ಸುದ್ದಿಯಲ್ಲಿರುವ ನಟಿ. ಈಕೆಯ ಪಬ್ಲಿಸಿಟಿ ಹೆಚ್ಚಾಗುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದವರು ಮತ್ತೋರ್ವ ನಟಿ ಶೆರ್ಲಿನ್ ಚೋಪ್ರಾ. ಅಷ್ಟಕ್ಕೂ ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ನಡುವೆ ಬಹಳ ಹಿಂದೆಯೇ ವಿವಾದವಿತ್ತು. ಶೆರ್ಲಿನ್ ಅವರ ಖಾಸಗಿ ವಿಡಿಯೋಗಳನ್ನು ರಾಖಿ ಲೀಕ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಅವರು ರಾಖಿ ವಿರುದ್ಧ ಮಾಡಿದ್ದರು. ವಿಷಯ ಪೊಲೀಸರನ್ನೂ ತಲುಪಿತ್ತು. ಆದರೆ ರಾಖಿ ಮತ್ತು ಶೆರ್ಲಿನ್ ಮತ್ತೆ ಸ್ನೇಹಿತರಾದರು. ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ರಾಖಿ ಸಾವಂತ್ ಪತಿ, ಆದಿಲ್ ದುರಾನಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ, ಶೆರ್ಲಿನ್ ರಾಖಿ ವಿರುದ್ಧ ತಿರುಗಿ ಬಿದ್ದಿದ್ದರು. ಮತ್ತೊಮ್ಮೆ ರಾಖಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಾಲದು ಎನ್ನುವುದಕ್ಕೆ ರಾಖಿ ಸಾವಂತ್ ಸೌದಿ ಅರೇಬಿಯಾದ ಮೆಕ್ಕಾದಿಂದ (Mecca) ಉಮ್ರಾ ಮುಗಿಸಿ ಬರುತ್ತಿದ್ದಂತೆಯೇ ಆಕೆಯ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶೆರ್ಲಿನ್ ಹೇಳಿಕೊಂಡಿದ್ದರು. ಇದಾದ ಬಳಿಕ ಮತ್ತೆ ಸ್ನೇಹಿತರಾದರು. ಆದಿಲ್ ಖಾನ್ ವಿರುದ್ಧ ಶೆರ್ಲಿನ್ ಚೋಪ್ರಾ ಪತ್ರಿಕಾಗೋಷ್ಠಿಯನ್ನೂ ನಡೆಸಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಆದರೆ ಈಗ ಆಗಿರೋದೇ ಬೇರೆ. ವೈರಲ್ ಆಗುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಸುಸ್ತಾಗಿದ್ದಾರೆ. ಇದಕ್ಕೆ ಕಾರಣ, ಇದರಲ್ಲಿ ಶೆರ್ಲಿನ್ ಚೋಪ್ರಾ ಮತ್ತು ಆದಿಲ್ ಖಾನ್ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಹೋಟೆಲ್ ಒಂದರಲ್ಲಿ ಇಬ್ಬರೂ ಒಟ್ಟಿಗೇ ಇದ್ದು ಮಾತುಕತೆಯಲ್ಲಿ ತೊಡಗಿರುವುದು ಹಾಗೂ ರೊಮ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿದೆ. ಮಾತ್ರವಲ್ಲದೇ ಆದಿಲ್ ಖಾನ್, ಶೆರ್ಲಿನ್‌ಗೆ ದುಬಾರಿ ಪರ್ಸ್ ಗಿಫ್ಟ್ ಕೊಟ್ಟು, ಕಿವಿಯೋಲೆಯನ್ನೂ ಕೈಯಾರೆ ತೊಡಗಿಸಿರುವುದನ್ನು ನೋಡಬಹುದು. ಇದನ್ನು ನೋಡಿ ನೆಟ್ಟಿಗರು ಉಫ್ ಎನ್ನುತ್ತಿದ್ದಾರೆ. ನಾಚಿಗೆ ಬಿಟ್ಟವರು ಎಂದು ಉಗಿಯುತ್ತಿದ್ದಾರೆ. ಈಗ ರಾಖಿಯ ಗತಿಯೇನು ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಶೆರ್ಲಿನ್ ಚೋಪ್ರಾಗೆ ಬೇರೆ ಯಾರೂ ಸಿಗಲಿಲ್ವಾ ಎಂದು ಮತ್ತಿಷ್ಟು ಮಂದಿ ಪ್ರಶ್ನಿಸುತ್ತಿದ್ದಾರೆ. ಹಿಂದೊಮ್ಮೆ ಅಣ್ಣ ಎಂದು ಆದಿಲ್ ಖಾನ್‌ರನ್ನು ಕರೆದದ್ದು ಶೆರ್ಲಿನ್ ಅಲ್ವಾ ಈಗ ಅಣ್ಣ ಹೀಗೆ ಆಗಿಬಿಟ್ನಾ ಎಂದು ಕೇಳುತ್ತಿದ್ದಾರೆ.
ಫ್ರೀಯಾಗಿ ಐಸ್ಕ್ರೀಂ ತಿಂದ ನಟಿ ಶೆರ್ಲಿನ್: ಥೂ ನಿನ್ ಜನ್ಮಕ್ಕೆ ಎಂದು ಮಂಚದ ವಿಷ್ಯ ಎಳೆದುತಂದ ನೆಟ್ಟಿಗರು!
ಕೆಲ ದಿನಗಳ ಹಿಂದಷ್ಟೇ ಶೆರ್ಲಿನ್, ರೋಡ್ಸೈಡ್ನಲ್ಲಿ ಕೋನ್ ಐಸ್ಕ್ರೀಂ ತಿಂದು , ಅದಕ್ಕೆ ದುಡ್ಡು ಕೊಡದೇ ಸಕತ್ ಟ್ರೋಲ್ ಆಗಿದ್ದರು. ಮಾಮೂಲಿಯಂತೆ ವಾಕರಿಕೆ ಬರುವ ದೇಹ ಪ್ರದರ್ಶನ ಮಾಡಿಕೊಂಡು ಐಸ್ಕ್ರೀಂವಾಲನ ಬಳಿಗೆ ಹೋದ ನಟಿ, ಅಲ್ಲಿ ಐಸ್ಕ್ರೀಂ ಕೇಳಿದ್ದಾರೆ. ಇದು ಯಾವ ಫ್ಲೇವರ್ ಎನ್ನುತ್ತಾ ವೆನ್ನಿಲ್ಲಾ ಫ್ಲೇವರ್ ತೆಗೆದುಕೊಂಡು ತಿಂದಿದ್ದಾರೆ. ಅಷ್ಟರಲ್ಲಿ ಅಂಗಡಿಯವ ದುಡ್ಡಿಯಾಗಿ ನೋಡಿದ್ದಾನೆ. ಆಗ ನನ್ನ ಬಳಿ ದುಡ್ಡು ತಗೋತೀಯಾ? ಇಲ್ವಲ್ಲಾ ಎಂದು ಶೆರ್ಲಿನ್ ಕೇಳಿದ್ದಾರೆ. ಅದಕ್ಕೆ ಏನು ಹೇಳಬೇಕು ಎಂದು ತಿಳಿಯದ ಐಸ್ಕ್ರೀಂವಾಲಾ ಇಲ್ಲ ಎಂದಿದ್ದಾನೆ. ಇದನ್ನು ಖುಷಿಯಿಂದ ಎಲ್ಲರಿಗೂ ಹೇಳಿದ್ದಾರೆ ನಟಿ. ಇದರ ವಿಡಿಯೋ ವೈರಲ್ ಆಗಿದ್ದು, ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಥೂ ನಿನ್ ಜನ್ಮಕ್ಕೆ, 10-20 ರೂಪಾಯಿ ಇರಲಿಲ್ವಾ ನಿನ್ ಹತ್ರ ಎಂದು ಕೇಳಿದ್ದರು. ಇನ್ನು ಕೆಲವರು ಹೋಗಿ ಆ 10 ರೂಪಾಯಿಯಿಂದ ಮೈತುಂಬಾ ಬಟ್ಟೆ ಹೊಲಿಸ್ಕೊ ಎಂದು ಐಸ್ಕ್ರಿಂವಾಲಾ ಬಿಟ್ಟಿದ್ದಾನೆ ಎಂದು ಕೆಲವರು ಹೇಳಿದರೆ, ರಾಖಿ ಸಾವಂತ್ ಬಳಿ ಭಿಕ್ಷೆ ಬೇಡಿದ್ರೆ ದುಡ್ಡು ಕೊಡ್ತಾ ಇದ್ದಳು ಎಂದಿದ್ದರು ಇನ್ನು ಕೆಲವರು.
ಇನ್ನು ರಾಖಿ ಬಗ್ಗೆಯಂತೂ ಎಲ್ಲರಿಗೂ ತಿಳಿದದ್ದೇ. ರಾಖಿ ಸಾವಂತ್ ಇತ್ತೀಚೆಗಷ್ಟೇ ಧರ್ಮ ಬದಲಿಸಿ ಫಾತಿಮಾ ಆಗಿದ್ದಾರೆ. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ನಂತರ ಆದಿಲ್ ಮತ್ತು ರಾಖಿ ನಡುವೆ ಜಗಳ ಪ್ರಾರಂಭವಾಗಿತ್ತು. ರಾಖಿ ಆದಿಲ್ ಖಾನ್ರನ್ನುಜೈಲಿಗೆ ತಳ್ಳಿದ್ದು, ಅವರೀಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇದರ ನಡುವೆಯೇ, ರಾಖಿ ಮೆಕ್ಕಾಕ್ಕೆ ಹೋಗಿ ಉಮ್ರಾ ನೆರವೇರಿಸಿದ್ದಾರೆ. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು.