Sidharth Shukla Birth Anniversary; ನಿನ್ನನ್ನು ಮತ್ತೆ ನೋಡುತ್ತೇನೆ, ಭಾವುಕ ಪೋಸ್ಟ್ ಹಂಚಿಕೊಂಡ ಶೇಹನಾಜ್

Published : Dec 12, 2022, 06:18 PM IST
Sidharth Shukla Birth Anniversary; ನಿನ್ನನ್ನು ಮತ್ತೆ ನೋಡುತ್ತೇನೆ, ಭಾವುಕ ಪೋಸ್ಟ್ ಹಂಚಿಕೊಂಡ ಶೇಹನಾಜ್

ಸಾರಾಂಶ

ಸಿದ್ಧಾರ್ಥ್ ಶುಕ್ಲಾ ಹುಟ್ಟುಹಬ್ಬದ ದಿನ ನಟಿ ಶೆಹನಾಜ್ ಗಿಲ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ನಿನ್ನನ್ನು ಮತ್ತೆ ನೋಡುತ್ತೇನೆ ಎಂದು ಹೇಳಿದ್ದಾರೆ. 

ಹಿಂದಿ ಕಿರುತೆರೆ ಲೋಕದ ಖ್ಯಾತ ನಟ, ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ ಅವರ ಜನ್ಮದಿನ. ಸಿದ್ಧಾರ್ಥ್ ಇಲ್ಲದಿದ್ದರೂ ಅವರ ನೆನಪಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಅಭಿಮಾನಿಗಳು ಮತ್ತು ಸ್ನೇಹಿತರು. ಅದರಲ್ಲೂ ಸಿದ್ಧಾರ್ಥ್ ಶುಕ್ಲಾ ಗೆಳತಿ, ಗರ್ಲ್‌ಫ್ರೆಂಡ್ ಶೆಹನಾಜ್ ಗಿಲ್ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಸಿದ್ಧಾರ್ಥ್ ಜೊತೆಗಿದ್ದ ಫೋಟೋ ಶೇರ್ ಮಾಡುವ ಮೂಲಕ ಶೆಹನಾಜ್ ಗಿಲ್ ಮತ್ತೆ ಭೇಟಿ ಆಗುತ್ತೀನಿ ಎಂದು ಹೇಳಿದ್ದಾರೆ. ಸಿದ್ಧಾರ್ಥ್ ಶುಕ್ಲಾ 2021 ಸೆಪ್ಟಂಬರ್ 2ರಂದು ನಿಧನ ಹೊಂದಿದರು. 40 ವರ್ಷದ ನಟ ಸಿದ್ಧಾರ್ಥ್ ಹೃದಯಾಘಾತಕ್ಕೆ ಬಲಿಯಾದರು. ಸಿದ್ಧಾರ್ಥ್ ಹಠಾತ್ ಅಗಲಿಕೆ ಅವರ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಕುಟುಂಬಕ್ಕೆ ಬರಸಿಡಿಲು ಬಡಿದಂತೆ ಆಗಿತ್ತು. ಸಿದ್ಧಾರ್ಥ್ ಇಲ್ಲ ಎನ್ನುವ  ನೋವಿನಿಂದ ಇನ್ನೂ ಕುಟುಂಬದವರು ಹೊರಬಂದಿಲ್ಲ. ಆಪ್ತರು ಹಾಗೂ ಕುಟುಂಬದವರು ಸಿದ್ಧಾರ್ಥ್ ನೆನಪಲ್ಲೇ ದಿನ ಕಳೆಯುತ್ತಿದ್ದಾರೆ. ಸಿದ್ಧಾರ್ಥ್ ನಿಧನ ಹೊಂದಿ ಒಂದು ವರ್ಷದ ಮೇಲಾಯಿತು. ಆದರೂ ಅಗಲಿಕೆಯ ನೋವು ಇನ್ನು ಹಸಿರಾಗಿಯೇ ಇದೆ. 

ನೋವಿನಲ್ಲೇ ನಟಿ ಶೆಹನಾಜ್ ಗಿಲ್ ಹುಟ್ಟುಹಬ್ಬ ಆಚರಿಸಿದ್ದಾರೆ. ಕೇಕ್ ಕತ್ತರಿಸಿದ್ದಾರೆ. 12;12 ಎಂದು ಕೇಕ್ ಮೇಲೆ ಬರೆಯಲಾಗಿದೆ. ರಾತ್ರಿ ಕೇಕ್ ಕತ್ತರಿಸಿ ಗೆಳೆಯನ ಹುಟ್ಟುಹಬ್ಬ ಮಾಡಿದ್ದಾರೆ. ಇನ್ನೂ ಸಿದ್ಧಾರ್ಥ್ ಜೊತೆಗಿನ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕೋಟ್ ಧರಿಸಿ ಕುಳಿತಿರುವ ಸುಂದರ ಫೋಟೋವನ್ನು ಶೇರ್ ಮಾಡಿ, 'ಮತ್ತೆ ನಿನ್ನನ್ನು ಭೇಟಿಯಾಗುತ್ತೀನಿ' ಎಂದು ಹೇಳಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ ಸ್ಟೋರಿಸ್ ನಲ್ಲಿ ಸಿದ್ಧಾರ್ಥ್ ಜೊತೆ ಕಳೆದ ಫೋಟೋವನ್ನು ಶೇರ್ ಮಾಡಿದ್ದಾರೆ. ಸಿದ್ಧಾರ್ತ್ ಕೈ ಹಿಡಿದು ಕುಳಿತಿರುವ ಫೋಟೋ, ಸಿದ್ಧಾರ್ಥನ ಹಿಂದೆಯಿಂದ ತಬ್ಬಿಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. 

ಶೆಹನಾಜ್ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾರ್ಥ್ ಸದಾ ನಮ್ಮ ಜೊತೆಯಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ. ನಟಿ ಶೆಹನಾಜ್ ಆಗಾಗ ಸಿದ್ಧಾರ್ಥ್ ನೆನೆದು ಭಾವುಕರಾಗುತ್ತಾರೆ. ಇತ್ತೀಚಿಗಷ್ಟೆ ದುಬೈನಲ್ಲಿ ನಡೆದ  ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸಿದ್ಧಾರ್ಥ್ ನೆನೆದು ಬಾವುಕರಾಗಿದ್ದರು. ಪ್ರಶಸ್ತಿ ಸ್ವೀಕಕರಿಸಲು ವೇದಿಕೆ ಏರಿದ ಶೆಹನಾಜ್ ನರ್ವಸ್ ಆಗಿದ್ದರು. ಬಳಿಕ ಮೈಕ್ ಹಿಡಿದು, 'ನಾನು ಯಾರಿಗಾದರೂ ಧನ್ಯವಾದ ಹೇಳಬೇಕೆಂದರೆ ಅದು ಒಬ್ಬರಿಗೆ ಮಾತ್ರ. ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದಗಳು. ನಾನು ಇಂದು ಏನಾಗಿದ್ದರೂ ಅದಕ್ಕೆ ನೀನೆ ಕಾರಣ. ಇದು ನಿನಗಾಗಿ ಸಿದ್ಧಾರ್ಥ್ ಶುಕ್ಲಾ' ಎಂದು ಭಾವುಕರಾಗಿದರು.

ನಾನಿವತ್ತು ಏನಾಗಿದ್ದರೂ ಅದು ನಿನ್ನಿಂದ; ಅವಾರ್ಡ್ ಶೋನಲ್ಲಿ ಸಿದ್ಧಾರ್ಥ್ ನೆನೆದು ಶೆಹನಾಜ್ ಗಿಲ್ ಭಾವುಕ

ಶೆಹನಾಜ್ ಮತ್ತು ಸಿದ್ಧಾರ್ಥ್ ಶುಕ್ಲಾ ಬಾಂಡಿಂಗ್ 

ಸಿದ್ಧಾರ್ಥ್ ಮತ್ತು ಶೆಹನಾಜ್ ಅವರು 'ಬಿಗ್ ಬಾಸ್' ಮನೆಯಲ್ಲಿ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಿದ್ದರು. ಆದರೆ ಎಲ್ಲೂ ಇಬ್ಬರೂ ಪ್ರೀತಿಸುತ್ತಿದ್ದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ. ಹಾಗಂತ ಇಬ್ಬರ ಪ್ರೀತಿ ಗುಟ್ಟಾಗಿ ಉಳಿದಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇಬ್ಬರ ಕ್ಲೋಸ್‌ನೆಸ್, ಕಾಳಜಿ ಮಾಡುವ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಇಬ್ಬರನ್ನೂ ಅಭಿಮಾನಿಗಳು 'ಸಿದ್ನಾಜ್' ಎಂದು ಕರೆಯುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ 'ಸಿದ್ನಾಜ್' ಹೆಸರು ಫುಲ್ ವೈರಲ್ ಆಗಿತ್ತು. ಇಬ್ಬರ ಕ್ಯೂಟ್ ವಿಡಿಯೋಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. 

ಶೆಹನಾಜ್ ಗಿಲ್ ಬಗ್ಗೆ

ಪಂಜಾಬಿ ಸಿನಿಮಾಗಳಲ್ಲಿ ಮಿಂಚುತ್ತಿದ್ದ ನಟಿ ಶೆಹನಾಜ್ ಇದೀಗ ಸಲ್ಮಾನ್ ಖಾನ್ ಜೊತೆ ನಟಿಸುವ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಲ್ಮಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಈ ಸಿನಿಮಾ ಜೊತೆಗೆ ಸಾಜಿದ್ ಖಾನ್ ಅವರ '100%' ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ, ರಿತೇಶ್ ದೇಶಮುಖ್ ಮತ್ತು ನೋರಾ ಫತೇಹಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?