ದೀಪಿಕಾ ಪಡುಕೋಣೆ ಅಮ್ಮ ಆಗೋದು ನಿಜ, ಆದ್ರೆ ಗರ್ಭಿಣಿ ಅನ್ನೋದೇ ಸುಳ್ಳಾ? ಏನಿದು ಹೊಸ ವಿಷ್ಯ?

By Suvarna News  |  First Published Apr 18, 2024, 5:34 PM IST

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅಮ್ಮ ಆಗೋದು ನಿಜ, ಆದ್ರೆ ಗರ್ಭಿಣಿ ಅನ್ನೋದೇ ಸುಳ್ಳಾ? ಏನಿದು ಹೊಸ ವಿಷ್ಯ? ಇಲ್ಲಿದೆ ಡಿಟೇಲ್ಸ್‌
 


ಸಿನಿ ಪ್ರಿಯರ ಬಾಯಲ್ಲಿ ಈಗ ದೀಪಿಕಾ ಪಡುಕೋಣೆ ಅಮ್ಮ ಆಗ್ತಿರೋ ಸುದ್ದಿ ಹರಿದಾಡ್ತಿದೆ. ಬರುವ ಸೆಪ್ಟೆಂಬರ್​ ತಿಂಗಳಿನಲ್ಲಿ ಮಗು ಹುಟ್ಟುತ್ತಿರುವುದಾಗಿ  ನಟಿ ಈಚೆಗೆ ಖುದ್ದು ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ನಟಿ  ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಣೆಯನ್ನು ಮಾಡಿದ್ದು,  ಈ ವರ್ಷದ ಸೆಪ್ಟೆಂಬರ್‌ನಲ್ಲಿ ಜನ್ಮ ನೀಡುತ್ತೇನೆ ಎಂದಿದ್ದರು. ಅವರು "ಸೆಪ್ಟೆಂಬರ್ 2024" ದಿನಾಂಕವನ್ನು ಬರೆದಿರುವ ಸಿಹಿ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಜೊತೆಗೆ ಮಕ್ಕಳ ಉಡುಪುಗಳ ಗ್ರಾಫಿಕ್ಸ್, ಆಟಿಕೆಗಳು ಮತ್ತು ನೀಲಿ ಮತ್ತು ಗುಲಾಬಿ ಬಣ್ಣದ ಬಲೂನ್‌ಗಳನ್ನು  ಇಟ್ಟಿದ್ದರು. ಇದರ ಪ್ರಕಾರ ನೋಡಿದರೆ ದೀಪಿಕಾ ಅವರಿಗೆ ಈಗ ನಾಲ್ಕು ತಿಂಗಳು.  

 ದೀಪಿಕಾ ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅಷ್ಟಕ್ಕೂ ದೀಪಿಕಾ ಕರ್ನಾಟಕ ಮೂಲದವರು ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯ. ಮಂಗಳೂರು ಮೂಲದವರಾಗಿರುವ ಪಡುಕೋಣೆಯವರ ಮಾತೃಭಾಷೆ ಕೊಂಕಣಿ ಆಗಿದೆ. ಆದರೆ ದೀಪಿಕಾ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದರು. ನಂತರ ಅವನು ತನ್ನ ಹೆತ್ತವರೊಂದಿಗೆ ಭಾರತಕ್ಕೆ ಬಂದರು. ಆದರೆ ಮೂಲ ಮಾತ್ರ ಕರ್ನಾಟಕ. ಇದೇ ಹಿನ್ನೆಲೆಯಲ್ಲಿ, ದೀಪಿಕಾ ಮಗು ಕೂಡ ಕರ್ನಾಟದಲ್ಲಿಯೇ ಜನಿಸಲಿದೆ ಎಂದು ಹೇಳಲಾಗುತ್ತಿದೆ.  ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯರುಗಳ ನೆರವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Tap to resize

Latest Videos

ಟ್ಯಾನ್ ಆದ ಬೆನ್ನು ತೋರಿಸಿದ ದೀಪಿಕಾ ಪಡುಕೋಣೆ; 'ಆರ್‌ಕೆ' ಟ್ಯಾಟೂ ಮರೆಯಾದ ಬಗ್ಗೆ ನೆಟ್ಟಿಗರ ಕಣ್ಣು

ಆದರೆ ಇದೀಗ ದೀಪಿಕಾ ಪಡುಕೋಣೆ ಗರ್ಭಿಣಿ ಅಲ್ಲವೇ ಅಲ್ಲ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ 2-3 ಕಾರಣಗಳನ್ನು ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ನಟಿ, ಟ್ಯಾನ್‌ ಆಗಿರುವ ಫೋಟೋ ಶೇರ್‌ ಮಾಡಿದ್ದರು. ಅದನ್ನು ನೋಡಿದರೆ ಅವರು ಶೂಟಿಂಗ್‌ನಲ್ಲಿ ಫುಲ್‌ ಬಿಜಿ ಇರುವುದು ತಿಳಿದುಬರುತ್ತದೆ. ನಾಲ್ಕು ತಿಂಗಳ ಗರ್ಭಿಣಿ ಈ ರೀತಿ ಶೂಟಿಂಗ್‌ನಲ್ಲಿ ಬಿಜಿಯಾಗುವುದು ಕಷ್ಟ ಎನ್ನುತ್ತಿದ್ದಾರೆ ನೆಟ್ಟಿಗರು. ಇದಕ್ಕಿಂತಲೂ ಮುಖ್ಯವಾಗಿ ನಟಿ, ಇದೀಗ ನಟಿ  ಶೂಟಿಂಗ್‌ ಸ್ಪಾಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಪೊಲೀಸ್‌ ಅಧಿಕಾರಿಯಾಗಿ. ಪೊಲೀಸ್‌ ಅಧಿಕಾರಿಯೆಂದರೆ ಸಾಮಾನ್ಯವಾಗಿ ಫೈಟಿಂಗ್‌ ಇದ್ದೇ ಇರುತ್ತದೆ. ಇಂಥ ಶೂಟಿಂಗ್‌ ನಾಲ್ಕು ತಿಂಗಳ ಗರ್ಭಿಣಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಅಷ್ಟೇ ಅಲ್ಲದೇ, ನಾಲ್ಕು ತಿಂಗಳು ಎಂದರೆ ಸಾಮಾನ್ಯವಾಗಿ ಸ್ವಲ್ಪವಾದರೂ ಹೊಟ್ಟೆ ಕಾಣಿಸುತ್ತದೆ. ಆದರೆ ನಟಿಯ ಹೊಟ್ಟೆಯೂ ಕಾಣಿಸುತ್ತಿಲ್ಲ ಎನ್ನುವುದು ಡಿಪ್ಪಿ ಫ್ಯಾನ್ಸ್‌ ಅಭಿಮತ.

ಅಂದಹಾಗೆ ನಟಿ ಇದೀಗ  ‘ಸಿಂಗಂ ಅಗೇನ್‌ ಚಿತ್ರದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ನಿರ್ದೇಶಕ ರೋಹಿತ್ ಶೆಟ್ಟಿ ಅವರ ‘ಸಿಂಗಂ ಎಗೇನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಫೋಟೋಗಳು ವೈರಲ್‌ ಆಗಿವೆ. ಸಾಹಸ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ದೀಪಿಕಾ ಸೆಟ್‌ಗೆ ಬಂದಿದ್ದಾರೆ ಎನ್ನಲಾಗಿದೆ. ಗರ್ಭಿಣಿ ಹೀಗೆ ಬಂದಿರುವುದಕ್ಕೆ ಅಭಿಮಾನಿಗಳು  ಚಿಂತಿತರಾಗಿದ್ದರೂ ಗರ್ಭಿಣಿ ಬರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಇದೇ ಕಾರಣಕ್ಕೆ ದೀಪಿಕಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ. ಆ ಮಗು ಸೆಪ್ಟೆಂಬರ್‌ನಲ್ಲಿ ಹುಟ್ಟಲಿದೆ. ನಟಿಯೇನೂ ಸುಳ್ಳು ಹೇಳಿಲ್ಲ. ಅಮ್ಮ ಆಗ್ತಿರೋದನ್ನು ಹೇಳಿದ್ದಾರಷ್ಟೇ. ಅಮ್ಮ ಆಗ್ತಿರೋದು ನಿಜ, ಆದರೆ ಈಕೆ ಗರ್ಭಿಣಿಯಲ್ಲ ಎನ್ನುತ್ತಿದ್ದಾರೆ. ಗರ್ಭಿಣಿಯಾದರೆ ಅದನ್ನು ಮುಚ್ಚಿಡುವುದಂತೂ ಸಾಧ್ಯವಿಲ್ಲ. ಕೆಲವೇ ದಿನಗಳಲ್ಲಿ ಗೊತ್ತಾಗಲೇಬೇಕಲ್ಲಾ! ಅಷ್ಟಕ್ಕೂ ದೀಪಿಕಾ ಕೈಯಲ್ಲಿ ಇದಾಗಲೇ ಸಾಕಷ್ಟು ಚಿತ್ರಗಳೂ ಇವೆ. 

ಅಮ್ಮನಾಗ್ತಿರೋ ನಟಿ ದೀಪಿಕಾ ಪಡುಕೋಣೆ ಇನ್ನೊಂದು ಗುಡ್​ ನ್ಯೂಸ್​: ಆಸ್ಕರ್​ರಿಂದ ವಿಶೇಷ ಮನ್ನಣೆ
 

click me!