ಯಾರೋ ಕೈ ಕತ್ತರಿಸ್ತಾರೆ ಅನ್ನೋ ವಿಚಿತ್ರ ಭಯದಲ್ಲಿ ಒದ್ದಾಡುತ್ತಿರುವ ಶಾರುಖ್‌ ಖಾನ್! ಇದ್ಯಾಕೆ?

By Suvarna NewsFirst Published Apr 23, 2023, 5:20 PM IST
Highlights

ಶಾರುಖ್‌ ಖಾನ್ ತಮ್ಮ ವಿಚಿತ್ರ ಭಯವೊಂದರ ಬಗ್ಗೆ ಹೇಳ್ಕೊಂಡಿದ್ದಾರೆ. ಅವರಿಗೆ ಯಾರೋ ತನ್ನ ಕೈ ಕತ್ತರಿಸುತ್ತಾರೆ ಅನ್ನೋ ವಿಚಿತ್ರ ಭಯವಂತೆ. ಅವರಿಗೆ ಈ ಭಯ ಯಾಕೆ ಕಾಣಿಸಿಕೊಳ್ತು? ಇದರ ಹಿನ್ನೆಲೆ ಏನು?

ಬಾಲಿವುಡ್ ಬಾದ್‌ಷಾ ಶಾರೂಖ್‌ ಖಾನ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತನಗಿರೋ ವಿಚಿತ್ರ ಭಯದ ಬಗ್ಗೆ ಮಾತಾಡಿದ್ದಾರೆ. ಅವರಿಗೆ ಇಂಥಾ ವಿಚಿತ್ರ ಭಯ ಯಾಕೆ ಬಂತು, ಅದರ ಹಿನ್ನೆಲೆ ಏನು ಅನ್ನೋದೇ ಇಂಟರೆಸ್ಟಿಂಗ್. ಹಾಗೆ ನೋಡಿದರೆ ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾರಂಗವನ್ನು ಆಳಿದವರು ಶಾರುಖ್. ಆಮೇಲೆ ಒಂದಿಷ್ಟು ಕಾಲ ಅವರ ಸಿನಿಮಾಗಳು ಅಂಥಾ ಸದ್ದು ಮಾಡಲಿಲ್ಲ. ಈ ದಶಕದಲ್ಲಂತೂ ಅವರು ಹೇಳಿಕೊಳ್ಳುವಂಥಾ ಸಿನಿಮಾ ನೀಡಿಲ್ಲ. ಆದರೆ ಪಠಾಣ್ ಹೊರತುಪಡಿಸಿ. ಈ ಸಿನಿಮಾ ರಿಲೀಸ್ ಆಗಿ ಪ್ರಖ್ಯಾತಿ ಜೊತೆಗೆ ಹಣವನ್ನೂ ಗಳಿಸಿದೆ. ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳಿದ ಶಾರೂಖ್ ಸಾಕಷ್ಟು ಸದ್ದು ಮಾಡಿದರು.

ಹಾಗೆ ನೋಡಿದರೆ ಶಾರುಖ್ ಖಾನ್ ಜೀರೋದಿಂದ ಹೀರೋ ಆದವರು. ಮೊದಲ ಬಾರಿಗೆ ಮುಂಬೈಗೆ ಬಂದಾಗ ಅವರ ಬಳಿ ಮರಳಿ ಹೋಗಲು ಹಣ ಇರಲಿಲ್ಲ. ಈಗ ಅವರು ಸಾವಿರಾರು ಕೋಟಿ ರೂಪಾಯಿ ಒಡೆಯ. ಈಗ ಶಾರುಖ್ ಖಾನ್ ಇಷ್ಟು ದೊಡ್ಡ ಸ್ಟಾರ್ ಆದರೂ ಅವರಿಗೆ ಒಂದು ಭಯ ಈಗಲೂ ಕಾಡುತ್ತದೆ. ಆ ಫೋಬಿಯಾದಿಂದ ಹೊರ ಬರೋಕೆ ಅವರಿಗೆ ಸಾಧ್ಯವಾಗಲೇ ಇಲ್ಲ.

Latest Videos

ಶಾರುಖ್ ಖಾನ್ ನೇರವಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸೀರಿಯಲ್ ಮೂಲಕ. ಶಾರೂಖ್ ನಟಿಸಿದ ಮೊದಲ ಸೀರಿಯಲ್ ‘ಫೌಜಿ’. ಇದು ಅವರಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತು. ಆ ಬಳಿಕ ಅವರು ಕೆಲವೊಂದಿಷ್ಟು ಸೀರಿಯಲ್‌ಗಳಲ್ಲಿ ನಟಿಸಿದರು. ಶಾರೂಖ್ ಖಾನ್ ಹಿರಿತೆರೆಗೆ ಕಾಲಿಟ್ಟದ್ದು 1992ರಲ್ಲಿ. ಆ ತೊಂಭತ್ತರ ದಶಕದಿಂದ ಇಲ್ಲಿವರೆಗೆ ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ತುಂಬ ಹಿಂದೆ ಶುರುವಾದ ಒಂದು ವಿಚಿತ್ರ ಫೋಬಿಯಾ ಇನ್ನೂ ಶಾರೂಖ್ ಅವರನ್ನು ಕಂಗೆಡಿಸುತ್ತಿದೆ. ಅವರು ಈ ಬಗ್ಗೆ ಅವರು ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

Suhana Khan: ಶಾರುಖ್​ ಪುತ್ರಿ ಜೊತೆ ಯಾರೀ ಹೊಸ ಹ್ಯಾಂಡ್​ಸಮ್​ ಯುವಕ?

ನೀವು ಶಾರುಖ್ ಅವರನ್ನು ಹಲವರಾರು ಸಿನಿಮಾಗಳಲ್ಲಿ(Cinema) ಗಮನಿಸಿರಬಹುದು. ಅವರಿಗೇ ಅಂತ ಒಂದು ವಿಶಿಷ್ಟ ಮ್ಯಾನರಿಸಂ ಇದೆ. ಅವರು ವಿಶಿಷ್ಟ ರೀತಿಯಲ್ಲಿ ಕೈ ಎತ್ತುತ್ತಾರೆ. ಅದೊಂದು ಬಹಳ ಆಪ್ತವಾಗಿದ್ದು ಒಂದು ರೀತಿಯಲ್ಲಿ ತಬ್ಬಿಕೊಳ್ಳುವ ರೀತಿಯಲ್ಲಿ ಇರುತ್ತದೆ. ಈ ಮ್ಯಾನರಿಸಂ ಅನ್ನು ಅವರು ಅನೇಕ ಸಿನಿಮಾಗಳಲ್ಲಿ ಮಾಡಿದ್ದಾರೆ. ಹೀಗಿರುವ ಒಂದು ಭಂಗಿಗಾಗಿ ಶಾರೂಖ್ ಪಡೋ ಕಷ್ಟ ಅಷ್ಟಿಷ್ಟಲ್ಲ. ಅನುಪಮ್ ಖೇರ್ ಶೋನಲ್ಲಿ ಈ ಬಗ್ಗೆ ಶಾರುಖ್ ಮಾತನಾಡಿದ್ದಾರೆ. ‘ಈ ಫೇಮಸ್ ಫೋಬಿಯಾಗಳು(Phobia) ಇವೆಯಲ್ಲಾ, ಅಂಥ ಭಯಗಳು ನನಗಿಲ್ಲ. ನನಗೆ ಕತ್ತಲೆ ಬಗ್ಗೆ ಭಯ(Fear) ಇಲ್ಲ. ಎತ್ತರದಲ್ಲಿ ನಿಂತರೆ, ಆಳ ನೋಡಿದರೆ ಭಯ ಆಗುವುದಿಲ್ಲ. ಆದರೆ, ಸಿನಿಮಾದಲ್ಲಿರಲಿ, ರಿಯಲಲ್ಲಿ ಇರಲಿ, ಕೈ ಮೇಲೆತ್ತಿದಾಗ ಮಾತ್ರ ವಿಚಿತ್ರ ಭಯ ಆವರಿಸುತ್ತದೆ. ಆ ಹೊತ್ತಿಗೆ ಯಾರಾದರೂ ನನ್ನ ಕೈಯನ್ನು ಕತ್ತರಿಸಿಬಿಟ್ಟರೆ ಅನ್ನೋ ಯೋಚನೆ ಬರುತ್ತದೆ. ಇದೊಂದು ವಿಚಿತ್ರ ವಿಷಯ. ನನಗೆ ಈಗಲೂ ಅದು ಅತಿಯಾಗಿ ಕಾಡುತ್ತದೆ’ ಎಂದು ಅವರು ಹೇಳಿದ್ದಾರೆ.

ಶಾರೂಖ್ ಗಿರೋ ಇನ್ನೊಂದು ಭಯ ಕುದುರೆ ಸವಾರಿಯದು. ಅನೇಕ ಸಿನಿಮಾಗಳಲ್ಲಿ ನೀವು ಕುದುರೆ ರೈಡ್(Horse ride) ಮಾಡೋ ಶಾರೂಖ್ ಅವರನ್ನು ನೋಡಿರಬಹುದು. ಅದನ್ನು ಅವರು ಖುಷಿಯಲ್ಲಿ ಮಾಡಿಲ್ಲ. ಬಹಳ ಕಷ್ಟಪಟ್ಟು ಭಯದಲ್ಲಿ ಮಾಡಿದ್ದಾರೆ. ಆದರೆ ಮುಖದಲ್ಲಿ ಆ ಫೀಲಿಂಗ್ ಕಾಣದಂತೆ ನಟಿಸಿದ್ದಾರೆ. ಅದು ಶಾರೂಖ್ ಆಕ್ಟಿಂಗ್ ಸ್ಕಿಲ್‌ಗೆ(Acting skill) ದೊಡ್ಡ ಎಕ್ಸಾಂಪಲ್.

ಅಮೃತವರ್ಷಿಣಿ ನಟ ಶರತ್ ಬಾಬು ಸ್ಥಿತಿ ಗಂಭೀರ; ICUನಲ್ಲಿ ಚಿಕಿತ್ಸೆ

click me!