ಬಾಲಿವುಡ್ ಕಿಂಗ್ ಖಾನ್ ಶಾರಖ್ ಖಾನ್ ಪಠಾಣ್ ಸಕ್ಸಸ್ ಮೀಟ್ ನಲ್ಲಿ ಧರಿಸಿದ್ದ ವಾಚ್‌ನ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಿನಿಮಾದ ಸಕ್ಸಸ್‌ನ ಅಲಿಯಲ್ಲಿ ತೇಲುತ್ತಿದ್ದಾರೆ. ಶಾರುಖ್ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬಂದಿದ್ದಾರೆ. ಬಹು ನಿರೀಕ್ಷೆಯ ಪಠಾಣ್ ಸಿನಿಮಾ ಜನವರಿ 15ರಂದು ರಿಲೀಸ್ ಆಗಿದೆ. ಅನೇಕ ವರ್ಷಗಳ ಬಳಿಕ ತೆರೆಮೇಲೆ ಬಂದ ಶಾರುಖ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಶಾರುಖ್ ಕಮ್‌ಬ್ಯಾಕ್ ಸಿನಿಮಾ ಕೋಟಿ ಕೋಟಿ ಕಮಾಯಿ ಮಾಡಿದೆ. ಅನೇಕ ಹಿಂದಿ ಸಿನಿಮಾಗಳ ದಾಖಲೆ ಪುಡಿ ಪುಡಿ ಮಾಡಿದೆ. ಈ ನಡುವೆ ಶಾರುಖ್ ಧರಿಸುವ ದುಬಾರಿ ವಾಚ್‌ಗಳು ಸದ್ದು ಮಾಡುತ್ತಿವೆ. ಶಾರುಖ್ ಬಳಿ ಇರುವ ವಾಚ್ ಕಲೆಕ್ಷನ್ ಸುದ್ದಿಯಾಗಿದೆ.
ಶಾರುಖ್ ಖಾನ್ ಬಳಿ ಅನೇಕ ದುಬಾರಿ ವಾಚ್ ಗಳಿವೆ. ಕಿಂಗ್ ಖಾನ್ ಅಂದ್ಮೇಲೆ ದುಬಾರಿ ಬೆಲೆಯ ವಾಚ‌್‌ಗಳನ್ನು ಹೊಂದುವುದು ದೊಡ್ಡ ವಿಚಾರವಲ್ಲ ಅಂತ ಹೇಳಬಹುದು. ಆದರೆ ಶಾರುಖ್ ಬಳಿ ಅನೇಕ ದುಬಾರಿ ಕಂಪನಿಯ ವಾಚ್ ಕಲೆಕ್ಷನ್ ಇದೆ. ಲಕ್ಷದಿಂದ ಬರೋಬ್ಬರಿ 4 ಕೋಟಿ ಬೆಲೆ ಬಾಳುವ ವಾಚ್‌ಗಳು ಶಾರುಖ್ ಬಳಿ ಇವೆ. ಇತ್ತೀಚಿಗಷ್ಟೆ ಶಾರುಖ್ ಅವರ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪಠಾಣ್ ಸಕ್ಸಸ್ ಬಳಿಕ ಪ್ರೆಸ್ ಮೀಟ್ ಆಯೋಚಿಸಲಾಗಿತ್ತು. ಪ್ರೆಸ್‌ಮೀಟ್‌ಗೆ ಶಾರುಖ್ ತಯಾರಿ ನಡೆಸಿದ್ದ ವಿಡಿಯೋ ಅದಾಗಿತ್ತು. ಅದರಲ್ಲಿ ಶಾರುಖ್ ಕಟ್ಟಿದ್ದ ನೀಲಿ ಬಣ್ಣದ ವಾಚ್ ಅಭಿಮಾನಿಗಳ ಗಮನ ಸೆಳೆದಿತ್ತು.
ವಾಚ್ ನೋಡಿದ ನೆಟ್ಟಿಗರು ಯಾವ ಬ್ರಾಂಡ್ ಎಂದು ತಲೆಕೆಡಿಸಿಕೊಂಡಿದ್ದರು. ಬಳಿಕ ಶಾರುಖ್ ಕಟ್ಟಿದ್ದ ವಾಚ್ ಯಾವುದು ಎನ್ನುವುದು ಎಂದು ರಿವೀಲ್ ಆಗಿದೆ. ಕಿಂಗ್ ಖಾನ್ ಕಟ್ಟಿದ್ದು ಅತೀ ದುಬಾರಿ ಕಂಪನಿಯಾದ ಆಡೆಮರ್ಸ್ ಪಿಗುಯೆಟ್ ಅವರ ರಾಯಲ್ ಓಕ್ ಪರ್ಪೆಚುಯಲ್ ಕ್ಯಾಲೆಂಡರ್ ವಾಚ್ ಆಗಿದೆ. ಈ ವಾಚ್ ಬೆಲೆ ಬರೋಬ್ಬರಿ 4.9 ಕೋಟಿ ರೂಪಾಯಿ.
ಹಿಟ್ ಚಿತ್ರವನ್ನು ಯಾರೂ ತಡೆಯೋಕಾಗಲ್ಲ; ಪಠಾನ್ ಬಾಯ್ಕಾಟ್ ಬಗ್ಗೆ ಅನುಪಮ್ ಖೇರ್ ರಿಯಾಕ್ಷನ್
ಕಿಂಗ್ ಖಾನ್ ಭಾರತೀಯ ಸಿನಿಮಾರಂಗದ ಅತ್ಯಂತ ಶ್ರೀವಂತ ನಟರಲ್ಲಿ ಒಬ್ಬರು. ಡ್ರೆಸ್, ಶೂ, ವಾಚ್, ಹೇರ್ ಸ್ಟೈಲ್ ಹೇಗೆ ಎಲ್ಲಾ ವಿಚಾರದಲ್ಲೂ ಕಿಂಗ್ ಖಾನ್ ತುಂಬಾ ಪರ್ಫೆಕ್ಟ್. ಇದೀಗ 4 ಕೋಟಿ ರೂಪಾಯಿ ಬೆಲೆ ಬಾಳುವ ವಾಚ್ ಧರಿಸಿ ಗಮನ ಸೆಳೆಸಿದ್ದಾರೆ.
ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ಕೂಡ ಅತ್ಯಂತ ಅಮೂಲ್ಯವಾದ ಆಸ್ತಿಯಾಗಿದೆ. ಮನ್ನತ್ 200 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುತ್ತದೆ. ಮುಂಬೈ ಮಾತ್ರವಲ್ಲದೇ ದೆಹಲಿಯಲ್ಲೂ ಶಾರುಖ್ ಖಾನ್ ಬಂಗಲೆಗಳನ್ನು ಹೊಂದಿದ್ದಾರೆ. ಇನ್ನು ಶಾರುಖ್ ಬಳಿ BMW ಅನೇಕ ಕಾರುಗಳಿವೆ. ಆಡಿ ಸೇರಿದಂತೆ ಅನೇಕ ದುಬಾರಿ ಕಾರುಗಳ ಕಲೆಕ್ಷನ್ ಹೊಂದಿದ್ದಾರೆ.
ಮೋದಿ ಚಿತ್ರ 30 ಕೋಟಿ ಗಳಿಸಿಲ್ಲ, ಬೊಗಳ್ತಾರೆ ಕಚ್ಚಲ್ಲ; ಪಠಾಣ್ ಬಹಿಷ್ಕರಿಸಿದವರ ವಿರುದ್ಧ ಪ್ರಕಾಶ್ ರಾಜ್ ಕಿಡಿ
ಶಾರುಖ್ ಸದ್ಯ ಪಠಾಣ್ ಮೂಲಕ ಮತ್ತೆ ಸಕ್ಸಸ್ ಟ್ರ್ಯಾಕ್‌ಗೆ ಮರಳಿದ್ದಾರೆ. ಪಠಾಣ್ ಬಳಿಕ ಜವಾನ್, ಡಂಕಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಎರಡು ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗಿದೆ. ಜವಾನ್ ಸಿನಿಮಾಗೆ ತಮಿಳು ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಹೇಳುತ್ತಿದ್ದಾರೆ. ಡಂಕಿ ಸಿನಿಮಾಗೆ ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿದ್ದಾರೆ.