ಸಮಂತಾ 'ಊ ಅಂಟಾವಾ ಮಾವ' ಒಂದು ಹಾಡಾ?; ಗಾಯಕಿ ಎಲ್‌ ಆರ್‌ ಈಶ್ವರಿ ಗರಂ

By Vaishnavi Chandrashekar  |  First Published Mar 10, 2023, 7:08 PM IST

ಇಡೀ ದೇಶವೇ ಮೆಚ್ಚಿಕೊಂಡಿರುವ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಖ್ಯಾತ ಗಾಯಕಿ ಎಲ್‌ ಆರ್‌ ಈಶ್ವರಿ....ಪುಷ್ಪ 2 ಏನ್ ಮಾಡ್ತಾರೆ? 


ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೆ ಹಾಡಿರುವ ಎಲ್‌ಆರ್‌ ಈಶ್ವರಿ ಅವರ ಬಗ್ಗೆ ಇಂಟ್ರುಡಕ್ಷನ್ ಬೇಡ ನೋಡಿ. ವಿಭಿನ್ನ ಧ್ವನಿ ಮೂಲಕ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಮನಸ್ಸಿನಲ್ಲಿದ್ದಾರೆ. ಅದರಲ್ಲೂ 'ಜೋಕೆ ನಾನು ಬಳ್ಳಿಯ ಮಿಂಚು' ಎಂದು ಹಾಡಿರುವ ಕನ್ನಡ ಹಾಡು ತುಂಬಾನೇ ಫೇಮಸ್ ಅಗಿತ್ತು. ಸೂಪರ್ ಹಿಟ್ ಸಾಂಗ್‌ಗಳನ್ನು ನೀಡಿರುವ ಈಶ್ವರಿ ಈಗ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಪುಷ್ಪ ಚಿತ್ರದ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಪುಷ್ಪ ಚಿತ್ರದ 'ಊ ಅಂಟಾವ ಮಾವ' ಹಾಡಿನಲ್ಲಿ ಸಮಂತಾ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೋಸ್ಕರ ಸಿನಿಮಾ ನೋಡಿದವರು ಇದ್ದಾರೆ, ಈ ಸಿನಿಮಾ ನೋಡಿ ಹಾಡಿಗೆ ಫಿದಾ ಆದವರೂ ಇದ್ದಾರೆ. ಆದರೆ ಗಾಯಕಿ ಎಲ್‌ ಆರ್‌ ಈಶ್ವರಿ ಬೇಸರ ವ್ಯಕ್ತ ಪಡಿಸಿದ್ದಾರೆ. 'ಇದು ಒಂದು ಹಾಡಾ? ಕಂಪೋಸ್ ಮಾಡಿದ್ದು ಹಾಗೂ ಹಾಡಿದ್ದು ಆರಂಭದಿಂದ ಅಂತ್ಯದವರೆಗೂ ಒಂದೇ ರೀತಿ ಇದೆ. ಎಲ್ಲವೂ ಒಂದೇ ಪಿಚ್‌ನಲ್ಲಿದೆ. ಹಾಡುಗಾರರಿಗೆ ತಂಡದವರು ಸೂಚಿಸಿದಂತೆ ಹಾಡುತ್ತಾರೆ. ಗಾಯಕರ ಮೇಲೆ ನಿಗಾ ಇಡೋದು ಸಂಗೀತ ನಿರ್ದೇಶಕರ ಜವಾಬ್ದಾರಿ ಅಗಿರುತ್ತದೆ. ಅದೇ ಹಾಡನ್ನು ನನಗೆ ಹಾಡಲು ಬಿಟ್ಟಿದ್ದರೆ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದೆ' ಎಂದು ಖಾಸಗಿ ಸಂದರ್ಶನದಲ್ಲಿ ಎಲ್‌ಆರ್‌ ಈಶ್ವರಿ ಮಾತನಾಡಿದ್ದಾರೆ. 

Tap to resize

Latest Videos

Pushpa 2: ಬಿಡುಗಡೆಗೂ ಮುನ್ನವೇ ಸಾವಿರ ಕೋಟಿ ರೂ. ಬಾಚಿದ ಚಿತ್ರ

ತಂತ್ರಜ್ಞರ ಬಗ್ಗೆ ಆರೋಪ:

'ನಾವು ಹಿರಿಯರು ಏನಿದ್ದೇವೆ ನಮ್ಮ ಹಿರಿಯರೊಂದಿಗೂ ನಾವು ಕೆಲಸ ಮಾಡಿದ್ದೀವಿ. ಆ ಹಾಡುಗಳನ್ನು ಇಂದಿಗೂ ಎಲ್ಲರಿಗೂ ಮನರಂಜನೆಯನ್ನು ನೀಡುತ್ತದೆ. ಆದರೆ ಆಗಿನ ಕಾಲದಲ್ಲಿ ಸಿನಿಮಾಗಳು 100 ಅಥವಾ 200 ದಿನಗಳು ಓಡುತ್ತಿದ್ದವು. ಈಗಿನ ಸಿನಿಮಾಗಳು ಕೇಲವ 10 ದಿನಗಳು ಓಡುತ್ತದೆ. ಸಿನಿಮಾ ರಂಗ, ಕಥೆ ಮತ್ತು ವೀಕ್ಷಕರನ್ನು ಸೆಳೆಯುವ ಪ್ರತಿಭೆ ಎಲ್ಲಿಗೆ ಬಂದು ನಿಂತಿದೆ' ಎಂದು ಈಶ್ವರಿ ಹೇಳಿದ್ದಾರೆ. 

ಕನ್ನಡದ ಹಾಡುಗಳು:

ಈಶ್ವರಿ ಅವರು ಅನೇಕ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. 'ದೂರದಿಂದ ಬಂದಂತ', 'ರಸಿಕ ರಸಿಕ', 'ಜೋಕೆ ನಾನು ಬಲ್ಲೀಯ', 'ಓ ಗೆಳೆಯ', 'ಯಾವುರಯ್ಯ ಈ ಮುಕ್ಕ', 'ಸಿತ್ಯಾಕೋ ಸಿಡುಕ್ಯಾಕೋ', 'ಸುಮಬಾಲೆಯ ಪ್ರೇಮದ ಸಿರಿಯೇ', 'ಬಂಗಾರ ನೋಟ' ಸಖತ್ ಫೇಮಸ್ ಹಾಡುಗಳು. 

ಅಲ್ಲು ಅರ್ಜುನ್ 'ಪುಷ್ಪ-2' ಆಫರ್ ರಿಜೆಕ್ಟ್ ವದಂತಿ; ಸಮಂತಾ ಟೀಂ ಸ್ಪಷ್ಟನೆ

3 ನಿಮಿಷದ ಹಾಡಿಗೆ 5 ಕೋಟಿ ಪಡೆದ ಸಮಂತಾ: 

ಈ ಐಟಂ ಸಾಂಗ್‌ ಯೂಟ್ಯೂಬ್‌ನ ಟಾಪ್ 10 ಟ್ರೆಂಡಿಂಗ್ ಪಟ್ಟಿಯಲ್ಲಿದೆ. ಸಮಂತಾ ಅವರ ಮಾದಕ ಸ್ಟೆಪ್ಸ್‌ಗಳು ಮತ್ತು ಅಲ್ಲು ಅರ್ಜುನ್ ಜೊತೆಗಿನ ಅವರ ನೃತ್ಯದ ಹೆಜ್ಜೆಗಳು ಹಾಡಿನ ಹೈಲೈಟ್ ಆಗಿದ್ದು, ಸಮಂತಾ ಅವರ ಹೊಸ ಅವತಾರವನ್ನು ನೋಡಿ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ ಮತ್ತು ಅಭಿನಯವನ್ನು ಪ್ರಶಂಸಿಸಿದ್ದಾರೆ. ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಖುದ್ದು ಸಮಂತಾಗೆ ನೃತ್ಯದ ಬಗ್ಗೆ ಮನವರಿಕೆ ಮಾಡಿದ್ದಾರೆ. ಆಕೆಯ ಡ್ಯಾನ್ಸ್ ನಂಬರ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ  ಹಿನ್ನಡೆಯಾದಾಗ ಅವರು ಸಮಂತಾರನ್ನು ಬೆಂಬಲಿಸಿದರು. ಮೂರು ನಿಮಿಷದ ಹಾಡಿಗೆ ಆಕೆ 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ಇತ್ತೀಚಿನ ಸುದ್ದಿ ಹೇಳುತ್ತಿದೆ.

ಜನಪ್ರಿಯ ಮನರಂಜನಾ ಪತ್ರಕರ್ತ ಸುಭಾಷ್ ಕೆ ಝಾ ಅವರಿಗೆ ಒಂದು ಮೂಲವು ಅಲ್ಲು ಅರ್ಜುನ್ ಅವರು ಸಮಂತಾ ಅವರನ್ನು ಹಾಡಿಗೆ ಒಪ್ಪಿಸಿದರು ಎಂದು ಹೇಳಿದೆ. ಈ ಹಾಡಿಗೆ ನಿರ್ಮಾಪಕರು ಆಕೆಗೆ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ.

click me!