ಮೊದಲ ಪ್ರೇಮಿಗಳ ದಿನಕ್ಕೆ ಶಾರುಖ್ ತನ್ನ ಪತ್ನಿಗೆ ಕೊಟ್ಟ ಗಿಫ್ಟ್ ಏನು? ಸುಂದರ ಕ್ಷಣ ನೆನೆದ ಪಠಾಣ್ ಸ್ಟಾರ್

Published : Feb 14, 2023, 03:13 PM ISTUpdated : Feb 14, 2023, 03:59 PM IST
ಮೊದಲ ಪ್ರೇಮಿಗಳ ದಿನಕ್ಕೆ ಶಾರುಖ್ ತನ್ನ ಪತ್ನಿಗೆ ಕೊಟ್ಟ ಗಿಫ್ಟ್ ಏನು? ಸುಂದರ ಕ್ಷಣ ನೆನೆದ ಪಠಾಣ್ ಸ್ಟಾರ್

ಸಾರಾಂಶ

ತಮ್ಮ ಮೊದಲ ಪ್ರೇಮಿಗಳ ದಿನಾಚರಣೆಗೆ ಶಾರುಖ್ ಖಾನ್ ತನ್ನ ಪತ್ನಿ ಗೌರ್ ಖಾನ್‌ಗೆ ಕೊಟ್ಟ ಗಿಫ್ಟ್ ಬಗ್ಗೆ ನೆನಪಿಸಿಕೊಂಡಿದ್ದಾರೆ. 

ಫೆಬ್ರವರಿ 14 ಪ್ರೇಮಿಗಳ ಪಾಲಿಗೆ ಹಬ್ಬದ ದಿನ. ಜೋಡಿ ಹಕ್ಕಿಗಳು ಈ ದಿನವನ್ನು ಸಂಭ್ರಮಿಸುತ್ತಾರೆ, ಗಿಫ್ಟ್ ಎಕ್ಸೇಂಜ್ ಮಾಡಿಕೊಳ್ಳುತ್ತಾರೆ. ತರಹೇವಾರಿ ರೀತಿಯಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಪ್ರೇಮಿಗಳ ದಿನಕ್ಕೆ ಗಿಫ್ಟ್ ಇಂಪ್ರೆಸ್ ಮಾಡಿದವರಲ್ಲಿ ಕಿಂಗ್ ಖಾನ್ ಶಾರುಖ್ ಖಾನ್ ಕೂಡ ಒಬ್ಬರು. ಶಾರುಖ್ ಅವರನ್ನು ಕಿಂಗ್ ಆಫ್ ರೊಮ್ಯಾನ್ಸ್ ಎಂದು ಕರೆಯುತ್ತಾರೆ. ಅನೇಕ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ನಿಜ ಜೀವನದ ಲವ್ ಸ್ಟೋರಿ ಕೂಡ ಯಾವುದೇ ಸಿನಿಮಾಗೂ ಕಡಿಮೆ ಇಲ್ಲ. 

ಶಾರುಖ್ ಖಾನ್ ಮತ್ತು ಗೌರಿ ಖಾನ್ ಇಬ್ಬರೂ 1991ರಲ್ಲಿ ವಿವಾಹವಾದರು. ಇಬ್ಬರದ್ದು ಪ್ರೇಮ ವಿವಾಹ. ಮೂರು ದಶಕಗಳ ಕಾಲ ಸುಖಸಂಸಾರ ನಡೆಸುತ್ತಿದ್ದಾರೆ. ಶಾರುಖ್ ಮತ್ತು ಗೌರಿ ಇಬ್ಬರೂ ಅನೇಕ ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ಇಬ್ಬರೂ ಪ್ರಿತಿಸುತ್ತಿದ್ದ ಸಮಯದಲ್ಲಿ ಶಾರುಖ್ ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗೊರೆ ನೀಡಿ ಪ್ರೇಮ ನಿವೇದನೆ ಮಾಡಿದ್ದರು. ಸುಮಾರು 34 ವರ್ಷಗಳ ಹಿಂದಿನ ಸುಂದರ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಬಗ್ಗೆ ಶಾರುಖ್ ರಿವೀಲ್ ಮಾಡಲು ಕಾರಣ ಅಭಿಮಾನಿಯ ಪ್ರಶ್ನೆ. 

ಇತ್ತೀಚಿಗಷ್ಟೆ ಟ್ವಿಟ್ಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಅನ್ನು ಆಯೋಜಿಸಿದ್ದರು. ಈ ವೇಳೆ ತಮ್ಮ ಮೊದಲ ಪ್ರೇಮಿಗಳ ದಿನಾಚರಣೆಯ ಕ್ಷಣವನ್ನು ವಿವರಿಸಿದ್ದಾರೆ. ಸ್ಕ್ ಮಿ ಎನಿಥಿಂಗ್ ಸೆಷನ್ ಅನೌನ್ಸ್ ಮಾಡುತ್ತಿದ್ದಂತೆ ಶಾರುಖ್ ಖಾನ್‌ಗೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಬರುತ್ತಿದೆ. ಕೆಲವು ಆಯ್ದ ಪ್ರಶ್ನೆಗಳಿಗೆ ಶಾರುಖ್ ಉತ್ತರ ನೀಡಿದ್ದಾರೆ. ಅಭಿಮಾನಿಯೊಬ್ಬ, 'ಗೌರಿ ಮೇಡಮ್‌ಗೆ ಪ್ರೇಮಿಗಳ ದಿನದಂದು ಮೊದಲ ಉಡುಗೊರೆ ಏನು ಕೊಟ್ಟಿದ್ರಿ? ಎಂದು ಕೇಳಿದ್ದಾರೆ. 

ಪಠಾಣ್ ಜೊತೆ ಫ್ಲರ್ಟ್ ಮಾಡ್ತಿರುವ ಪೂಜಾ; ಬ್ಯಾಕ್‌ಲೆಸ್‌ ಲೆಹಂಗಾದಲ್ಲಿ ಮಿಂಚಿದ ಈ 'ಡ್ರೀಮ್ ಗರ್ಲ್' ಯಾರು?

ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಶಾರುಖ್, 'ನನಗೆ ಸರಿಯಾಗಿ ನೆನಪಿದೆ, ಈಗ 34 ವರ್ಷಗಳು ಕಳೆದಿವೆ. ನಾನು ಅವಳಿಗೆ ಒಂದು ಜೊತೆ ಪ್ಲಾಸ್ಟಿಕ್ ಕಿವಿಯೋಲೆ ಉಡುಗೊರೆಯಾಗಿ ನೀಡಿದ್ದೇನೆ'  ಎಂದು ಹೇಳಿದ್ದಾರೆ. ಶಾರುಖ್ ಖಾನ್ ಗಿಫ್ಟ್ ಗಮನ ಸೆಳೆಯುತ್ತಿದೆ. ಮತ್ತೊಬ್ಬ ಅಭಿಮಾನಿ, 'ಪ್ರೇಮಿಗಳ ದಿನದ ಈ ವಿಶೇಷ ಸಮಯದಲ್ಲಿ ಅಭಿಮಾನಿಗಳಿಂದ ನೀವು ಏನು ಬಯಸುತ್ತೀರಿ' ಎಂದು ಕೇಳಿದ್ದಾರೆ. ಈ ಪ್ರಶ್ನೆ ಶಾರುಖ್ ಕೊಟ್ಟ ಉತ್ತರ ಅಭಿಮಾನಿಗಳ ಹೃದಯ ಗೆದ್ದಿದೆ. 

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಶಾರುಖ್ ಖಾನ್, 'ಈಗಾಗಲೇ ನೀವು ನನಗೆ ಕೊಟ್ಟಿದ್ದೀರಿ. ಪಠಾಣ್ ಗೆ ತುಂಬಾ ಪ್ರೀತಿ ನೀಡಿದ್ದೀರಿ' ಎಂದು ಹೇಳಿದ್ದಾರೆ. ಶಾರುಖ್ ಉತ್ತರಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಠಾಣ್ ಸಕ್ಸಸ್ ನಲ್ಲಿರುವ ಶಾರುಖ್ ಇದೇ ಖುಷಿಯಲ್ಲಿ ಮುಂದಿನ ಸಿನಿಮಾದ ಶೂಟಿಂಗ್ ಕೂಡ ಪ್ರಾರಂಭಿಸಿದ್ದಾರೆ.

'ಪಠಾಣ್' ಶೂಟಿಂಗ್‌ನಲ್ಲಿ ಶಾರುಖ್ ಪುತ್ರನನ್ನು ತಬ್ಬಿ ಮುದ್ದಾಡಿದ ದೀಪಿಕಾ; ಫೋಟೋ ವೈರಲ್

ಶಾರುಖ್ ಸದ್ಯ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಯನತಾರಾ ಮತ್ತು ಶಾರುಖ್ ಜೋಡಿಯಾಗಿದ್ದಾರೆ. ಆಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ಶಾರುಖ್ ಡಂಕಿ ಚಿತ್ರದಲ್ಲೂ ನಟಿಸುದ್ದಾರೆ. ರಾಜ್ ಕುಮಾರ್ ಹಿರಾನಿ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ