ರಸ್ತೆಯ ಮೇಲೆ ಬಿದ್ದಿದ್ದ ಕಸವನ್ನು ಎತ್ತಿಹಾಕುವ ಮೂಲಕ ನಟಿ ಮಲೈಕಾ ಅರೋರಾ ಟ್ರೋಲ್ಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಸದಾ ಒಂದಿಲ್ಲೊಂದು ಕಾರಣಗಳಿಂದ ಸದ್ದು ಮಾಡುತ್ತಲೇ ಇರುವ ನಟಿಯರಲ್ಲಿ ಒಬ್ಬರು ಬಾಲಿವುಡ್ ಹಸಿಬಿಸಿ ಲೇಡಿ ಮಲೈಕಾ ಅರೋರಾ. 50 ವರ್ಷ ವಯಸ್ಸು ದಾಟಿದರೂ, ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ, ಆಗಾಗ್ಗೆ ಒಂದಿಷ್ಟು ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಫಿಟ್ ಆ್ಯಂಡ್ ಫೈನ್ ಆಗಿರಲು ಸಾಕಷ್ಟು ಕಸರತ್ತು ಕೂಡ ಮಾಡುತ್ತಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್ ಸೆನ್ಸ್ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ. ಆದರೆ ಇವರು ಸರಿಯಾದ ಕಮೆಂಟ್ಗೆ ಒಳಗಾಗುವ ಬದಲು ಟ್ರೋಲ್ ಆಗುವುದೇ ಹೆಚ್ಚು.
ಇದೀಗ ಮತ್ತೊಮ್ಮೆ ಮಲೈಕಾ ಟ್ರೋಲ್ ಆಗಿದ್ದಾರೆ. ಆದರೆ ಅದು ತಮ್ಮ ಅಂಗಾಂಗ ಪ್ರದರ್ಶನದಿಂದ ಅಲ್ಲ. ಬದಲಿಗೆ ಕಸ ಹೆಕ್ಕುವ ಮೂಲಕ. ಜಿಮ್ಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆ ಮೇಲೆ ಬಿದ್ದ ಕಸವನ್ನು ಮಲೈಕಾ ಎತ್ತಿ ಸಮೀಪದ ಡಸ್ಟ್ಬಿನ್ಗೆ ಹಾಕಿದ್ದಾರೆ. ಇದು ಒಳ್ಳೆಯ ಕೆಲಸವೇ. ಇದರಲ್ಲಿ ಟ್ರೋಲ್ ಆಗುವುದು ಏನಿದೆ ಎನ್ನುವುದೇ ಹಲವರ ಪ್ರಶ್ನೆ. ಅಷ್ಟಕ್ಕೂ ನಟಿಗೆ ತನ್ನ ಹಿಂದೆ ಕ್ಯಾಮೆರಾ ಕಣ್ಣುಗಳು ಇರುವುದು ತಿಳಿದೇ ಇದೆ. ಅದಕ್ಕಾಗಿಯೇ ಈ ಪೋಸ್ ಕೊಡುತ್ತಿರುವುದು ಎನ್ನುವ ಕಾರಣಕ್ಕೆ ಹಲವರು ಟ್ರೋಲ್ ಮಾಡಿದ್ದಾರೆ. ಅದಕ್ಕೆ ಒಂದು ಕಾರಣವೂ ಇದೆ. ನಟಿ ಕಸ ನೋಡಿದ ಕೂಡಲೇ ಹೆಕ್ಕಲ್ಲೋ ಬೇಡವೋ ಎಂದು ಅರೆಕ್ಷಣ ಯೋಚಿಸಿದಂತಿದೆ. ನಂತರ ಆ ಕಸವನ್ನು ಬಿದ್ದಲ್ಲಿಯೇ ಹೆಕ್ಕುವ ಬದಲು ಕಾಲಿನಿಂದ ಒಟ್ಟುಗೂಡಿಸಿಕೊಂಡು ಪೋಸ್ ಕೊಡುವವರ ರೀತಿಯಲ್ಲಿಯೇ ಕಸವನ್ನು ಹೆಕ್ಕಿರುವ ಕಾರಣ ಸಕತ್ ಟ್ರೋಲ್ಗೆ ಒಳಗಾಗಿದ್ದಾರೆ. ನಟಿ ಹೋದಲ್ಲಿ, ಬಂದಲ್ಲಿ ಪಾಪರಾಜಿಗಳು ಬಿಡಬೇಕಲ್ಲ. ಹಿಂಬದಿಯಿಂದಲೇ ನಟಿಯ ವಿಡಿಯೋ ಮಾಡಿದ್ದಾರೆ. ಹೀಗೆ ಕಸ ಹೆಕ್ಕುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಮ್ಮನ್ನು ಶ್ಲಾಘಿಸುವವರ ಸಂಖ್ಯೆ ಹೆಚ್ಚುತ್ತದೆ ಎಂದುಕೊಂಡರೆ ನಟಿಗೆ ಇದು ಉಲ್ಟಾ ಹೊಡೆದಿದೆ. ಸಕತ್ ಟ್ರೋಲ್ ಆಗುತ್ತಿದ್ದಾರೆ.
ನನ್ನ ಹಿಂಬದಿ ಊಟದ ಟೇಬಲ್ನಂತೆ ಕಂಡುಬಂದ್ರೆ ಏಳು ಮಂದಿಗೆ ಆಹಾರ ನೀಡ್ತೇನೆ... ನಿಮಗೇನ್ರೀ ಸಮಸ್ಯೆ?
ಕೆಲ ದಿನಗಳ ಹಿಂದಷ್ಟೇ ನಟಿ, ತಮ್ಮ ವಯಸ್ಸನ್ನು ತೆಗೆದುಕೊಂಡು ಟ್ರೋಲ್ ಮಾಡುವವರಿಗೆ ತಿರುಗೇಟು ಕೊಟ್ಟಿದ್ದರು. ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಅವರು, ನಾನು ಹಂಸದಂತೆ ನಡೆಯುತ್ತೇನೆ ಎಂದು ಕೆಲವರು ಹೇಳುತ್ತಾರೆ. ನನ್ನ ಹಿಂಬದಿ ಬಫೆಟ್ ಟೇಬಲ್ನಂತೆ ಇದೆ ಅಂತಾರೆ. ಹೌದುರಿ. ಅದರಿಂದ ಯಾರಿಗೆ ಏನು ಸಮಸ್ಯೆ? ಬಫೆಟ್ ಟೇಬಲ್ನಂತೆ ಇದ್ದರೆ ಏಳು ಮಂದಿಗೆ ಊಟ ಬಡಿಸ್ತೇನೆ ಅಷ್ಟೇ ಎಂದು ಟ್ರೋಲಿಗರಿಗೆ ಟಾಂಗ್ ಕೊಟ್ಟಿದ್ದಾರೆ. ನಾನು ಹಂಸದಂತೆಯೂ ನಡೆಯಬಲ್ಲೆ, ಕ್ಯಾಟ್ ವಾಕ್ ಮಾಡಬಲ್ಲೆ, ಚಿರತೆಯಂತೆಯೂ ನಡೆಯಬಲ್ಲೆ. ಸಮಸ್ಯೆ ಏನೀಗ ಎಂದು ಪ್ರಶ್ನಿಸಿದ್ದರು.
ಅಂದಹಾಗೆ, ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್ ಕಪೂರ್ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
ಪೆದ್ದು ಮಲ್ಲಿಯ ಅದ್ಭುತ ಕಂಠಸಿರಿಗೆ ಮನಸೋತ ಫ್ಯಾನ್ಸ್: ನಟನೆಯಷ್ಟೇ ಮುದ್ದಾಗಿದೆ ದನಿ ಅಂತಿದ್ದಾರೆ...