ಮದುವೆ ನಂತ್ರ ಬುರ್ಖಾ ಮಾತ್ರ ಧರಿಸ್ಬೇಕು: ರಿಸೆಪ್ಶನ್ ದಿನ ಹಿಂದೂ ಪತ್ನಿಗೆ ಶಾಕ್ ಕೊಟ್ಟ ನಟ

Suvarna News   | Asianet News
Published : Jan 19, 2021, 11:02 AM ISTUpdated : Jan 19, 2021, 11:08 AM IST
ಮದುವೆ ನಂತ್ರ ಬುರ್ಖಾ ಮಾತ್ರ ಧರಿಸ್ಬೇಕು: ರಿಸೆಪ್ಶನ್ ದಿನ ಹಿಂದೂ ಪತ್ನಿಗೆ ಶಾಕ್ ಕೊಟ್ಟ ನಟ

ಸಾರಾಂಶ

ಭಿನ್ನ ಮತದ ಇಬ್ಬರು ಪ್ರೀತಿಸಿ ಮದುವೆಯಾಗಿ ನಂತರ ಮತಾಂತರವಾಗು, ಹಾಗೇ ಇರು, ಹೀಗೆ ಇರು ಎಂದರೆ ಹೇಗಾಗಬಹುದು ಹೇಳಿ..? ನಂಬಿ ಮದುವೆಯಾದ ಹುಡುಗಿಗೆ ಇನ್ಮುಂದೆ ಬುರ್ಖಾ ಮಾತ್ರ ಧರಿಸ್ಬೇಕು ಎಂದು ಶಾಕ್ ಕೊಟ್ಟಿದ್ದರು ಈ ನಟ

ಶಾರೂಖ್ ಖಾನ್ ಮತ್ತು ಗೌರಿ ಅವರದ್ದು ಮತವನ್ನೂ ಮೀರಿದ ಪ್ರೀತಿ. ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರು. ಗೌರಿ ಕುಟುಂಬವಂತೂ ಸ್ವಲ್ಪ ಸಂಪ್ರದಾಯಿಕ. ಹೀಗಿದ್ದರೂ ಇಬ್ಬರೂ ಪ್ರೀತಿಸಿ ಮದುವೆಯಾದಾಗ ರಿಸೆಪ್ಶನ್ ದಿನ ದೊಡ್ಡ ಶಾಕ್ ಕೊಟ್ಟಿದ್ದರು ಬಾಲಿವುಡ್ ಬಾದ್ ಶಾ.

ನಟ ಶಾರೂಖ್ ಖಾನ್ ಮದುವೆ ರಿಸೆಪ್ಶನ್ ದಿನ ಗೌರಿ ಮತ್ತು ಆಕೆಯ ಫ್ಯಾಮಿಲಿಗೆ ದೊಡ್ಡ ಶಾಕ್ ಕೊಟ್ಟಿದ್ದರು. ಮಗಳು ಪ್ರೀತಿಸಿದ್ಲು ಅಂತ ಮದುವೆ ಮಾಡಿಕೊಟ್ಟರೆ ಮದುವೆಯ ನಂತರ ಗೌರಿ ಬುರ್ಖಾ ಮಾತ್ರ ಧರಿಸಬೇಕು ಅಂತ ತಗಾದೆ ತೆಗೆದಿದ್ದರು ಶಾರೂಖ್ ಖಾನ್. ಇದು ಗೌರಿ ಮಾತ್ರವಲ್ಲ, ಗೌರಿ ಫ್ಯಾಮಿಲಿಗೂ ದೊಡ್ಡ ಶಾಕ್.

ಸಿನಿಮಾದವ್ರಂತೂ ಬೇಡ್ವೇ ಬೇಡ: ಮದುವೆ ಪ್ಲಾನ್ ರಿವೀಲ್ ಮಾಡಿದ ನಟಿ ತಾಪ್ಸಿ

ಶಾರೂಖ್ ಗೌರಿ ಮದುವೆಯಾಗಿ ಫ್ಯಾಮಿಲಿ ರಿಸೆಪ್ಶನ್ ನಡೆಯುತ್ತಿತ್ತು. ಅದಾಗಲೇ ರಿಸೆಪ್ಶನ್‌ಗೆ ಸೇರಿದ ಜನ ಹೋ ಆಕೆ ಮತಾಂತರವಾದಳು ಎಂದು ಗೌರಿ ಬಗ್ಗೆ ಗುಸುಗುಸು ಮಾತಾಡೋಕೆ ಶುರು ಮಾಡಿದ್ದರು. ಆದರೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ದೊಡ್ಡ ಶಾಕ್ ಕೊಟ್ಟಿದ್ದು ಶಾರೂಖ್ ಖಾನ್.

ಗೌರಿ ಬುರ್ಖಾ ಹಾಕ್ಕೊಂಡು ಬಾ, ನಮಾಝ್ ಓದುವ ಎಂದು ಶಾರೂಖ್ ಕರೆದಾಗ ಗೌರಿ ಕುಟುಂಬದವರಷ್ಟೇ ಅಲ್ಲ, ಸ್ವತಃ ಗೌರಿಯೇ ಶಾಕ್‌ಗೆ ಒಳಗಾಗಿದ್ದರು. ನೋಡಿ ಇಂದಿನಿಂದ ನಂತರ ಗೌರಿ ಬುರ್ಖಾ ಧರಿಸಿಯೇ ಇರಲಿದ್ದಾಳೆ. ಇಂದಿನಿಂದ ಈಕೆ ಮನೆಯಿಂದ ಹೊರ ಬರಲ್ಲ, ಆಕೆಯ ಹೆಸರು ಆಯೆಷಾ ಆಗಲಿದೆ ಎಂದಿದ್ದರು. ಇದು ದೊಡ್ಡ ಶಾಕ್ ಆಗಿತ್ತು.

ಆ ಹುಡುಗಿಗೆ ಪ್ರೀತಿ ಹೇಳಿದ್ದರೆ ಈಗ ನಾನು ಅಜ್ಜನಾಗಿರುತ್ತಿದ್ದೆ: ಸಲ್ಮಾನ್‌ ಖಾನ್‌

ಸ್ವಲ್ಪ ಹೊತ್ತಲ್ಲೇ ಇದು ಫ್ರಾಂಕ್ ಎಂದು ರಿವೀಲ್ ಮಾಡಿ ಫನ್ ಮಾಡಿದ್ದರು ಶಾರೂಖ್. ನಿರಾಳವಾಗಿತ್ತು ಗೌರು ಕುಟುಂಬ. ಇದನ್ನು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದರು ಶಾರೂಖ್.

ಈಗ ಗೌರಿಗಿಂತ ಹೆಚ್ಚಾಗಿ ಆಕೆಯ ಕುಟುಂಬ ನನ್ನನ್ನು ಪ್ರೀತಿಸುತ್ತೆ ಎಂದ ಶಾರೂಖ್ ಮಾತಲ್ಲಿ, ವಿವಾಹ ಮತ್ತು ಕುಟುಂಬ ಜೀವನದ ಯಶಸ್ಸು, ಖುಷಿ, ಸಂತೃಪ್ತಿ ಎಲ್ಲವೂ ಇತ್ತು ಎಂಬುದು ಸತ್ಯ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!