
ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಜಯಸುಧಾ ಮತ್ತೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ವೈರಲ್ ಆಗಿದೆ. 64 ವರ್ಷದ ನಟಿ ಜಯಸುಧಾ 3ನೇ ಮದುವೆ ಆಗಿದ್ದಾರೆ ಎಂದು ಟಾಲಿವುಡ್ ನಲ್ಲಿ ಗುಲ್ಲಾಗಿದೆ. ಸಹಜ ನಟಿ ಎಂದೇ ಖ್ಯಾತಿ ಗಳಿಸಿರುವ ಜಯಸುಧಾ ಇತ್ತೀಚಿಗೆ ಅಮೆರಿಕಾ ಮೂಲದ ವ್ಯಕ್ತಿಯೊಬ್ಬರ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೀಗ 3ನೇ ಮದುವೆ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ. 3ನೇ ಮದುವೆ ವದಂತಿ ತಳ್ಳಿ ಹಾಕಿರುವ ನಟಿ ಅಮೆರಿಕಾ ಮೂಲದ ವ್ಯಕ್ತಿ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಈ ರೀತಿಯ ಸುದ್ದಿ ಹಬ್ಬಿದೆ ಅಷ್ಟೆ ಎಂದು ಹೇಳಿದ್ದಾರೆ.
ಜಯಸುಧಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಆ ವ್ಯಕ್ತಿ ಯಾರು ಎಂದು ಬಹಿರಂಗ ಪಡಿಸಿದ್ದಾರೆ. ಜಯಸುಧಾ ಜೊತೆ ಥಳಕು ಹಾಕಿಕೊಂಡಿರುವ ವ್ಯಕ್ತಿ ಫಿಲಿಪ್ ರೂಲ್ಸ್. ಅಮೆರಿಕಾ ಮೂಲದವರು. ತನ್ನ ಬಯೋಪಿಕ್ ಮಾಡಲಾಗುತ್ತಿದೆ, ಈ ವಿಚಾರವಾಗಿ ಹೆಚ್ಚು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. 'ಬಯೋಪಿಕ್ ಚಿತ್ರೀಕರಣಕ್ಕಾಗಿ ಭಾರತಕ್ಕೆ ಬರುತ್ತಿದ್ದರು. ಚಿತ್ರರಂಗದಲ್ಲಿ ನನ್ನ ಪ್ರಾಮುಖ್ಯತೆ ತಿಳಿದುಕೊಳ್ಳಲು ಹೆಚ್ಚಾಗಿ ಎಲ್ಲಾ ಕಾರ್ಯಕ್ರಮಗಳಲ್ಲೂ ನನ್ನೊಂದಿಗೆ ಹಾಜರಿರುತ್ತಿದ್ದಾರೆ. ಇಂಟರ್‌ನೆಟ್‌ನಲ್ಲಿ ನನ್ನ ಬಗ್ಗೆ ತಿಳಿದಕೊಂಡರು. ನಾನು ಅಮೆರಿಕಾಗೆ ಹೋದಾಗ ಅವರನ್ನು ಭೇಟಿಯಾಗಿದ್ದೆ. ನನ್ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಭಾರತಕ್ಕೆ ಬಂದಿದ್ದಾರೆ. ನನ್ನೊಂದಿಗೆ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಾರೆ' ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇವಲ 10 ಸಿನಿಮಾ ಮಾಡಿದ್ದಕ್ಕೆ ಕಂಗನಾಗೆ ಪದ್ಮಶ್ರೀ, ಸೌತ್‌ನವರಿಗೆ ಯಾಕಿಲ್ಲ; ನಟಿ ಜಯಸುಧಾ ಆಕ್ರೋಶ
ಎನ್ ಟಿ ಆರ್ ಕಾಲದಿಂದನೂ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಜಯಸುಧಾ ಮುಂದಿನ ಪೀಳಿಗೆ ಚಿರಂಜೀವಿ ಮತ್ತು ಮೋಹನ್ ಬಾಬು ಅವರೊಂದಿಗೂ ನಾಯಕಿಯಾಗಿ ನಟಿಸಿದ್ದಾರೆ. ಬಳಿಕ ಜಯಸುಧಾ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದರು. ಸದ್ಯ ತಾಯಿ ಪಾತ್ರದ ಮೂಲಕ ಜಯಸುಧಾ ಪ್ರಸಿದ್ಧರಾಗಿದ್ದಾರೆ. ತಾಯಿ, ಅಜ್ಜಿ, ಅತ್ತೆ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನೂ ಕಾಣಿಸಿಕೊಳ್ಳುವ ಜಯಸುಧಾ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.
ಬಾಲಿವುಡ್ ನಟಿಯರಿಗೆ ಪದ್ಮಶ್ರೀ ಕೊಡ್ತಾರೆ, ನಾಯಿಗೂ ರೂಮ್ ಕೊಡ್ತಾರೆ: ನಟಿ ಜಯಸುಧಾ ಗರಂ
ನಟಿ ಜಯಸುಧಾ ಮೊದಲು ಕಾಕರ್ಲಪುಡಿ ರಾಜೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ವಿಚ್ಛೇದನ ಪಡೆದು ದೂರ ಆದರು. ಬಳಿಕ 1985ರಲ್ಲಿ ಬಾಲಿವುಡ್‌ನ ಜೀತೆಂದ್ರ ಕಪೂರ್ ಅವರ ಸಹೋದರ ನಿತಿನಿ ಕಪೂರ್ ಅವರನ್ನು ವಿವಾಹ ಆದರು. ನಿತಿನ್ ಕಪೂರ್ 2017ರಲ್ಲಿ ನಿಧನ ಹೊಂದಿದರು. ನಿತಿನ್ ಕಪೂರ್ ಕೆಲವು ಮಾನಸಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡರು ಎನ್ನುವ ಸುದ್ದಿಯೂ ಇದೆ. ನಿತಿನ್ ನಿದನದ ಬಳಿಕ ಒಂಟಿಯಾಗಿ ಜೀವನ ನಡೆಸುತ್ತಿರುವ ಜಯಸುಧಾ ಇದೀಗ ಮತ್ತೆ 3ನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಸುದ್ದಿಯನ್ನು ತಳ್ಳಿ ಹಾಕುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.