ಬಾಲಿವುಡ್‌ ಹುಡುಗಿಯ ಪಕ್ಕಾ ಲೋಕಲ್‌ ಸ್ಟೈಲ್‌ ಮೋಜು ಮಸ್ತಿ!

Published : Oct 24, 2019, 09:27 AM ISTUpdated : Jan 18, 2022, 05:59 PM IST
ಬಾಲಿವುಡ್‌ ಹುಡುಗಿಯ ಪಕ್ಕಾ ಲೋಕಲ್‌ ಸ್ಟೈಲ್‌ ಮೋಜು ಮಸ್ತಿ!

ಸಾರಾಂಶ

1995 ಸಿನಿಮಾ ‘ಕೂಲಿ ನಂ.1’ ರಿಮೇಕ್‌ ಶೂಟಿಂಗ್‌ನಲ್ಲಿ ಇಷ್ಟುದಿನ ಬ್ಯುಸಿ ಇದ್ದ ಸಾರಾಗೆ ಯಾಕೋ ಜೀವನೋತ್ಸಾಹವೇ ಕಡಿಮೆಯಾಗಿ ಲೈಫೇ ಬೋರು ಅನಿಸತೊಡಗಿತಂತೆ. ಅದೇ ಮನಸ್ಥಿತಿಯಲ್ಲಿ ಎಷ್ಟುದಿನ ಅಂತ ಇರೋಕೆ ಸಾಧ್ಯ. 

ಯಾರದೋ ಫೋಟೋದಲ್ಲಿ ಇದು ರಿವೀಲ್‌ ಆದದ್ದಲ್ಲ. ಸ್ವತಃ ಸಾರಾ ಇದನ್ನು ತನ್ನ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾಳೆ.

ಬ್ಯಾಗ್ ನಿಂದ ಶಾರ್ಟ್ಸ್ ಮುಚ್ಚಿಕೊಳ್ಳಲು ಹೋಗಿ ಸಿಕ್ಕಿಬಿದ್ದ ಬಾಲಿವುಡ್ ನಟಿ!

ಒಂದಿಷ್ಟುದಿನ ಶೂಟಿಂಗ್‌ನಿಂದ ಬ್ರೇಕ್‌ ತಗೊಂಡು ಶ್ರೀಲಂಕಾ ಫ್ಲೈಟ್‌ ಹತ್ತಿದ್ದಾಳೆ ಸುಂದರಿ. ತನ್ನ ಫ್ಯಾನ್‌ಗಳಿಗೆ ಬೋರ್‌ ಆಗಬಾರದು ಅಂತ ಬಿಕಿನಿ ತೊಟ್ಟು ಸಮುದ್ರ ದಂಡೆಯಲ್ಲಿ ಓಡಾಡುವ ಫೋಟೋವನ್ನು ಇನ್‌ಸ್ಟಾದಲ್ಲಿ ಹಂಚಿದ್ದಾಳೆ. ಸಮುದ್ರ ಕಿನಾರೆಯಲ್ಲಿರುವ ರೆಸಾರ್ಟ್‌ನ ಸ್ವಿಮ್ಮಿಂಗ್‌ ಫäಲ್‌ನಲ್ಲಿ ಈಜಾಡುತ್ತಾ ಎಳನೀರು ಹೀರುವ ಇನ್ನೊಂದು ಫೋಟೋದಲ್ಲಿ ಅವಳಿರುವ ಬ್ಯೂಟಿಫುಲ್‌ ಜಾಗ ಮನಸೂರೆಗೊಳ್ಳುತ್ತದೆ.

 

ಮುಂಬೈಯಲ್ಲಿ ಸೌಮ್ಯವಾಗಿ ಓಡಾಡಿಕೊಂಡಿರುವ ಹುಡುಗಿಯ ಇನ್ನೊಂದು ಮುಖವೂ ಇಲ್ಲಿ ರಿವೀಲ್‌ ಆಗಿದೆ. ಪಕ್ಕಾ ಲೋಕಲ್‌ ಸ್ಟೈಲ್‌ನಲ್ಲಿ ಬೀಚ್‌ ಸಮೀಪದಲ್ಲಿ ಪಪ್ಪಾಯಿ ತಿನ್ನುತ್ತಿರೋದು, ಬೀಚ್‌ ಸಮೀಪದ ಬಂಡೆಯೇರಿ ನಿಂತಿರುವ ಫೋಟೋ ನೋಡಿ ಫ್ಯಾನ್‌ಗಳು ಫಿದಾ ಆಗಿದ್ದಾರೆ.

ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ಸಾರಾ ಅಲಿ ಖಾನ್!

ಬಿಕಿನಿಯಲ್ಲಿ ಮಾದಕವಾಗಿ ಫೋಸ್‌ ನೀಡಿದ್ದು ಪಡ್ಡೆಗಳ ಎದೆಬಡಿತ ಹೆಚ್ಚಿಸಿದೆ. ಒಟ್ಟಾರೆ, ಬೆಣ್ಣೆಮುದ್ದೆಯಂಥಾ ಹುಡುಗಿಯ ತುಂಟತನ ಕಂಡು ಹುಡುಗರ ಹೃದಯ ಕರಗಿ ನೀರಾಗಿದೆ ಅನ್ನೋದು ಲೇಟೆಸ್ಟ್‌ ಸುದ್ದಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?