ಹಿಂದು ದೇಗುಲದಲ್ಲಿ ನಟಿ ಸಾರಾ ಅಲಿ ಖಾನ್; ಶಕ್ತಿಗಳ ಮೇಲೆ ನಂಬಿಕೆ ಇದೆ, ಜನರ ಕಾಮೆಂಟ್‌ಗಳಿಗೆ ಡೋಂಟ್ ಕೇರ್!

By Vaishnavi Chandrashekar  |  First Published Jun 1, 2023, 10:23 AM IST

ನನ್ನ ನಂಬಿಕೆಗಳು ನನಗೆ ಬಿಟ್ಟಿದ್ದು ಎಂದು ಹೇಳಿದ ಸಾರಾ ಅಲಿ ಖಾನ್. ಹಿಂದು ದೇಗುಲಕ್ಕೆ ಕಾಲಿಡುವುದು ತಪ್ಪೇ?
 


ಬಾಲಿವುಡ್ ಬೋಲ್ಡ್‌ ಆಂಡ್ ಫನ್ನಿ ನಟಿ ಸಾರಾ ಅಲಿ ಖಾನ್ ಕೆಲವು ದಿನಗಳ ಹಿಂದೆ ದೇಗುಲಕ್ಕೆ ಕಾಲಿಟ್ಟ ಕಾರಣ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.  ಸಾರಾ ನಟಿಸಿರುವ ಜರಾ ಹತ್ ಕೆ ಜರಾ ಬಚ್ ಕೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಈ ವೇಳೆ ಭೇಟಿ ನೀಡುವ ಪ್ರತಿ ನಗರದಲ್ಲಿರುವ ಜನಪ್ರಿಯ ಗುಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಸಾರಾ ಜೊತೆ ನಟಿಸಿರುವ ವಿಕ್ಕಿ ಕೌಶಾಲ್‌ ಕೂಡ ಟೆಂಪಲ್‌ರನ್‌ನಲ್ಲಿ ಬ್ಯುಸಿಯಾಗಿದ್ದಾರೆ. 

ಖೇದರ್‌ನಾಥ್‌, ಗುರುದ್ವಾರ, ರಿಷಿಕೇಶ್, ಗಂಗಾ ಗಾಟ್ ಸೇರಿದಂತೆ ಅನೇಕ ಪವಿತ್ರ ಹಿಂದು ಸ್ಥಳಗಳಿಗೆ ಭೇಟಿ ಕೊಟ್ಟಾಗಲೆಲ್ಲಾ ಸಾರಾ ಟ್ರೋಲ್ ಆಗುವುದು ತುಂಬಾನೇ ಕಾಮನ್ ಅಗಿ ಬಿಟ್ಟಿದೆ. ಜನರಿಗೆ ಏನು ಮಾತನಾಡುತ್ತಾರೆ ಎಂದು ಸುಮ್ಮನಿದ್ದ ನಟಿ ಇತ್ತೀಚಿಗೆ ನಡೆದ ಪ್ರೆಸ್‌ ಮೀಟ್‌ನಲ್ಲಿ ಈ ವಿಚಾರವನ್ನು ಚರ್ಚೆ ಮಾಡಿದ್ದಾರೆ. ಜನರು ಹೇಗೆ ಬೇಕಿದರೂ ಕಾಮೆಂಟ್ ಮಾಡಲಿ ನಾನು ನಡೆಯುತ್ತಿರುವ ದಾರಿ ಬಗ್ಗೆ ನಂಬಿಕೆ ಹೆಚ್ಚಿದೆ ದೇವರಲ್ಲಿರುವ ಶಕ್ತಿಯನ್ನು ನಂಬುವೆ ಎಂದು ಮಾತನಾಡಿದ್ದಾರೆ. 

Tap to resize

Latest Videos

ಹೆವಿ ಎಂಬ್ರಾಡರಿ ಇರುವ ಸೆಲ್ವಾರ್‌ ಧರಿಸಿ ಮತ್ತೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್!

'ನನ್ನ ಕೆಲಸವನ್ನು ಗಂಭೀರವಾಗಿ ಪರಿಗಣಿಸುತ್ತೀನಿ. ನಾನು ಜನರಿಗೋಸ್ಕರ ಕೆಲಸ ಮಾಡುತ್ತೀನಿ ನಿಮಗಾಗಿ. ನಾನು ಮಾಡುತ್ತಿರುವ ಕೆಲಸ ನಿಮಗೆ ಇಷ್ಟ ಆಗಿಲ್ಲ ಅಂದ್ರೆ ಖಂಡಿತಾ ಬೇಸರವಾಗುತ್ತದೆ ಆದರೆ ನನ್ನ ನಂಬಿಕೆಗಳು ನನಗೆ ಮಾತ್ರ ಗೊತ್ತಿದೆ. ಅಜ್ಮೀರ್ ಷರೀಫ್ ಜಾಗಕ್ಕೆ ಎಷ್ಟು ಭಕ್ತಿಯಿಂದ ಹೋಗುತ್ತೀನಿ ಅದೇ ಭಕ್ತಿಯಿಂದ ನಾನು ಬಾಂಗ್ಲಾ ಸಾಹಿಬ್ ಅಥವಾ ಮಹಾಕಾಲ್‌ಗೂ ಹೋಗುವೆ. ಜೀವನ ಪರಿಯಂತ ದೇಗುಲಗಳಿಗೆ ಭೇಟಿ ನೀಡುವೆ.  ಜನರು ಹೇಗೆ ಬೇಕಿದ್ದರೂ ಏನು ಬೇಕಿದ್ದರೂ ಕಾಮೆಂಟ್ ಮಾಡಬಹುದು ನನಗೆ ಸಮಸ್ಯೆ ಇಲ್ಲ. ನಾವು ಭೇಟಿ ನೀಡುವ ಜಾಗದಲ್ಲಿರುವ ಶಕ್ತಿಯನ್ನು ನಂಬಬೇಕು. ಆ ಶಕ್ತಿಗಳ ಮೇಲೆ ನನಗೆ ನಂಬಿಕೆ ಹೆಚ್ಚಿದೆ' ಎಂದು ಸಾರಾ ಖಾನ್ ಹೇಳಿದ್ದಾರೆ. 

ಸಿನಿಮಾ ಬೇಕು, ಸಣ್ಣಗಾಗಬೇಕು:

'ದಿನ ಬೆಳಗ್ಗೆ ಎದ್ದು ತೂಕ ಚೆಕ್ ಮಾಡಿದರೆ 85 ಕೆಜಿ ಇದ್ದು ಯಾವ ಬಟ್ಟೆನೂ ತೂರುತ್ತಿಲ್ಲ ಅಂದರ ತುಂಬಾ ಬೇಸರವಾಗುತ್ತದೆ. ಕಾಲೇಜ್‌ನಲ್ಲಿ ಇದ್ದಾಗ ನಾನು ತುಂಬಾ ದಪ್ಪಗಿದ್ದೆ ಹೇಗಿದ್ದರೂ ದಪ್ಪ ಇರುವೆ ಎಂದು ಹೆಚ್ಚಿಗೆ ತಿನ್ನುತ್ತಿದ್ದೆ. ಸಣ್ಣಗಾಗಿದ್ದರೂ ನಾನು ಪದೇ ಪದೇ ದಪ್ಪವಾಗುತ್ತಿರುವೆ. ಇತ್ತೀಚಿಗೆ ನಾನು ಮತ್ತೆ ದಪ್ಪಗಾಗಿದ್ದೆ. ಒಂದು ಸಲ ಸ್ನೇಹಿತರ ಜೊತೆ ದುಬೈಗೆ ಹೋಗಿದರೆ ಮಧ್ಯಾಹ್ನ ಊಟಕ್ಕೆ ಪಿಜಾ ರಾತ್ರಿ ಊಟಕ್ಕೆ ಜಂಕ್ ಫುಟ್ ಸೇವಿಸುತ್ತಿದ್ದೆ. ಡಯಟ್‌ ಟ್ರ್ಯಾಕ್‌ನಲ್ಲಿ ಇರುವುದು ತುಂಬಾ ಮುಖ್ಯವಾಗುತ್ತದೆ. ಇದ್ದಕ್ಕಿದ್ದಂತೆ ನಾನು ಸಣ್ಣಗಾಗುವುದಕ್ಕೆ ಮನಸ್ಸು ಮಾಡಿದ್ದು ಕರಣ್ ಜೋಹಾರ್‌ನಿಂದ. ಒಂದು ದಿನ ಮನೆಗೆ ಬಂದು ನಿನಗೆ ಎರಡು ಸಿನಿಮಾ ಆಫರ್ ಮಾಡುವೆ ಆದರೆ ನೀನು ಸಣ್ಣಗಾಗಬೇಕು ಎಂದರು. ಡಯಟ್ ಮಾಡಿ ವರ್ಕೌಟ್ ಮಾಡಿ ನಾನು 40 ಕೆಜಿ ತೂಕ ಇಳಿಸಿಕೊಂಡೆ. ಈಗ ನಾನು 56 ಕೆಜಿ ಬಂದು ನಿಂತಿರುವೆ'ಎಂದು ಸಾರಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಶಿವರಾತ್ರಿಗೆ ವಿಶ್ ಮಾಡಿದ ಸಾರಾ ಅಲಿ ಖಾನ್ ಸಖತ್ ಟ್ರೋಲ್; ಬೆಂಬಲಕ್ಕೆ ನಿಂತ ಫ್ಯಾನ್ಸ್

ಇವತ್ತಿಗೂ ನಾನು ಬೆಳಗ್ಗೆ ತಿಂಡಿಗೆ ಚಾಕೋಲೇಟ್ ಬ್ರೌನಿ ತಿನ್ನಬಹುದು. ಏನೇ ತಿಂದರೂ ಎಂಜಾಯ್ ಮಾಡಿಕೊಂಡು ಸೇವಿಸುವೆ.ಫಿಟ್ ಆಗಿರುವುದಕ್ಕೆ ಮೋಟಿವೇಷನ್ ಮುಖ್ಯವಾಗುತ್ತದೆ. ಒಂದು ದಿನವೂ ತಪ್ಪದೆ ವರ್ಕೌಟ್ ಮಾಡುವೆ. ನಾನು ತುಂಬಾ ದಪ್ಪ ಇದ್ದೆ ಯಾವ ಕಾರಣಕ್ಕೆ ಒಳ್ಳೆಯ ಅರೋಗ್ಯ ಸಿಗುತ್ತಿರಲಿಲ್ಲ...60 ಕೆಜಿ ತೂಕ ದಾಟುತ್ತಿದ್ದಂತೆ ಆರೋಗ್ಯ ಸಮಸ್ಯೆ ಶುರುವಾಗಿತ್ತು. ಓವರ್ ವೇಟ್‌ ಇದ್ದಾಗ ಎಚ್ಚರಗೊಳ್ಳಬೇಕು. ಏನಂದ್ರೆ ಅದನ್ನು ತಿನ್ನಬಾರದು ಆಗ ನಮ್ಮ ಹಾರ್ಮೋನ್‌ನಲ್ಲಿ ಬದಲಾವಣೆಗಳು ಇರುತ್ತದೆ. ನೋಡಲು ಮಾತ್ರ ಸಣ್ಣ ಕಾಣಬೇಕು ಎಂದು ತಿನ್ನಬಾರದು ನಮ್ಮ ದೇಹಕ್ಕೆ ನಮ್ಮ ಹಾರ್ಮೋನ್‌ಗೆ ಏನು ಪರ್ಫೆಕ್ಟ್‌ ಅದನ್ನು ಸೇವಿಸಬೇಕು.' ಎಂದು ಸಾರಾ ಹೇಳಿದ್ದಾರೆ.

click me!