ತ್ರಿಬಲ್ ಆರ್ ಸಿನಿಮಾ ಬಳಿಕ ಶಂಕರ್ ಸಾರಥ್ಯದ ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ನಟಿಸ್ತಿದ್ದಾರೆ. ಜೊತೆಗೆ ಉಪ್ಪೇನಾ ಡೈರೆಕ್ಟರ್ ಬುಚ್ಚಿ ಬಾಬುಗೂ ಕಾಲ್ ಶೀಟ್ ಕೊಟ್ಟಿರುವ ಮೆಗಾ ಪ್ರಿನ್ಸ್ ಈಗ ಸುಕುಮಾರ್ ಹೊಸ ಕಥೆಯಲ್ಲಿ ಮಿಂಚೋದಿಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹೋಳಿ ಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗೇಮ್ ಚೇಂಜರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್, ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಆರ್ ಸಿ 16 ಸಿನಿಮಾಗೆ ಬುಚ್ಚಿ ಬಾಬು ಆಕ್ಷನ್ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಟೇಕಾಫ್ ಗೂ ಮೊದ್ಲೇ ಚೆರ್ರಿಯ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ.
ಮೈತ್ರಿ ಮೂವೀ ಮೇಕರ್ಸ್, ರಾಮ್ ಚರಣ್ ಹಾಗೂ ಪುಷ್ಪ ಡೈರೆಕ್ಟರ್ ಸುಕುಮಾರ್ ಮತ್ತೆ ಒಂದಾಗಿದ್ದಾರೆ. ರಂಗಸ್ಥಳಂ ಮೂಲಕ ಧಮಾಕ ಎಬ್ಬಿಸಿದ್ದ ಈ ತ್ರಿವಳಿ ಕಾಂಬೋದಲ್ಲಿ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ಬಣ್ಣದ ಹಬ್ಬದ ಸಂದರ್ಭದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.
ಸೌಂಡ್ ಮಾಡಲು ಸಜ್ಜಾದ 'ಖಾಲಿ ಡಬ್ಬ',ಹೊಸಬರ ಕನಸಿಗೆ ಸಾಥ್ ಕೊಟ್ಟ ವಿ ನಾಗೇಂದ್ರ ಪ್ರಸಾದ್
ತ್ರಿಬಲ್ ಆರ್ ಸಿನಿಮಾ ಬಳಿಕ ಶಂಕರ್ ಸಾರಥ್ಯದ ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ನಟಿಸ್ತಿದ್ದಾರೆ. ಜೊತೆಗೆ ಉಪ್ಪೇನಾ ಡೈರೆಕ್ಟರ್ ಬುಚ್ಚಿ ಬಾಬುಗೂ ಕಾಲ್ ಶೀಟ್ ಕೊಟ್ಟಿರುವ ಮೆಗಾ ಪ್ರಿನ್ಸ್ ಈಗ ಸುಕುಮಾರ್ ಹೊಸ ಕಥೆಯಲ್ಲಿ ಮಿಂಚೋದಿಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಧೀಮಂತ ನಟಿಯಾಗುವ ಕನಸು ನನಸು ಮಾಡಲು ಬರುತ್ತಿದೆ ಜೀ ಕನ್ನಡದ 'ಮಹಾನಟಿ' ಶೋ!
ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ ಹಣ ಹಾಕುತ್ತಿರುವ ಈ ಸಿನಿಮಾಗೆ ರಾಕ್ ಸ್ಟಾರ್ ದೇವಿ ಪ್ರಸಾದ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಸೂಪರ್ ಹಿಟ್ ಆದ ರಂಗಸ್ಥಳಂ ಚಿತ್ರಕ್ಕೂ ಮ್ಯೂಸಿಕ್ ನೀಡಿದ್ದ ಡಿಎಸ್ ಪಿ ಮತ್ತೆ ಸುಕುಮಾರ್ ಹಾಗೂ ರಾಮ್ ಸಿನಿಮಾ ಮೂಲಕ ಧಮಾಕ ಎಬ್ಬಿಸಲಿದ್ದಾರೆ. ಅಂದಹಾಗೇ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಈ ಚಿತ್ರ ಮೂಡಿಬರಲಿದೆ.
ಮಂಜುನಾಥನ ಸನ್ನಿಧಿಯಲ್ಲಿ ಗಾಡ್ ಪ್ರಾಮಿಸ್ ಸ್ಕ್ರಿಪ್ಟ್ ಪೂಜೆ; ಸೂಚನ್ ಶೆಟ್ಟಿ ಸಿನಿಮಾದಲ್ಲಿ ಚಾನ್ಸ್ ಇದ್ಯಂತೆ!
ಆರ್‌ಆರ್‌ಆರ್ ಸಿನಿಮಾದ ಬಳಿಕ ನಟ ರಾಮ್ ಚರಣ್ ಗ್ರಾಫ್ ಬಹಳಷ್ಟು ಮೇಲೇರಿದೆ. ಈಗ ಅವರು ಕೇವಲ ತೆಲುಗು ಸಿನಿಮಾ ಹೀರೋ ಆಗಿ ಉಳಿದಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ರಾಮ್ ಚರಣ್ ಅವರಿಗೆ ಈಗ ಜಗತ್ತಿನಾದ್ಯಂತ ಅಭಿಮಾನಿ ಬಳಗವಿದೆ.