ಓರಗಿತ್ತಿಯರಾಗಲು ರೆಡಿಯಾಗಿರೋ ಸಾರಾ ಅಲಿ ಖಾನ್​, ಜಾಹ್ನವಿ ಕಪೂರ್​ ವರ್ಕ್​ಔಟ್​ಗೆ ಫ್ಯಾನ್ಸ್​ ಫಿದಾ!

By Suvarna News  |  First Published Mar 19, 2024, 12:51 PM IST

ಓರೆಗಿತ್ತಿಯರಾಗಲು ರೆಡಿಯಾಗಿರೋ ಸಾರಾ ಅಲಿ ಖಾನ್​ ಮತ್ತು ಜಾಹ್ನವಿ ಕಪೂರ್​ ವರ್ಕ್​ಔಟ್ ವಿಡಿಯೋ ವೈರಲ್​. ವಿಡಿಯೋಗೆ ಫ್ಯಾನ್ಸ್​ ಫಿದಾ!
 


ಸಾರಾ ಆಲಿ ಖಾನ್ ಮತ್ತು ಜಾಹ್ನವಿ ಕಪೂರ್ ಬಾಲಿವುಡ್​ನ ಹ್ಯಾಪನಿಂಗ್ ಹೀರೋಯಿನ್‌ಗಳು. ಅದಕ್ಕೂ ಹೆಚ್ಚಾಗಿ ಪ್ರತಿಷ್ಠಿತ ಕುಟುಂಬದ ಈ ಇಬ್ಬರೂ ಗೆಳತಿಯರೂ ಹೌದು. ಈ ಹಿಂದೆ ಇವರು  ಜೊತೆಯಾಗಿ ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್ ಶೋದಲ್ಲಿ ಭಾಗವಹಿಸಿ ಹಲ್​ಚಲ್​ ಕೂಡ ಸೃಷ್ಟಿಸಿದವರು.  ಕರಣ್ ಜೋಹರ್​ ಅವರು ಯಾರ ಹೆಸರನ್ನೂ ಹೇಳದೇ ಇಬ್ಬರು ಸಹೋದರರ ನಡುವೆ ನೀವಿಬ್ಬರೂ ಈ ಹಿಂದೆ ಡೇಟಿಂಗ್‌ ಮಾಡ್ತಿದ್ರಿ, ಆ ಡೇಟಿಂಗ್‌ ಬಗ್ಗೆ ಒಂಚೂರು ಇಲ್ಲಿ ಹೇಳ್ತೀರಾ ಎಂದಾಗ ಗೆಳೆತಿಯರು ತಬ್ಬಿಬ್ಬಾಗಿದ್ದರು. ಇಬ್ಬರೂ ಟಾಪಿಕ್‌ ಚೇಂಜ್ ಮಾಡಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅವರ ಈ ರಿಯಾಕ್ಷನ್, ಅವರು ಯಾರ ಜೊತೆಗೆ ಡೇಟ್ ಮಾಡ್ತಿದ್ರು ಅನ್ನೋ ವಿಚಾರವನ್ನು ಈ ಕಾರ್ಯಕ್ರಮ ನೋಡಿದ ಕೆಲವರು ಹುಡುಕಿ ತೆಗೆದಿದ್ದರು. ಅಷ್ಟಕ್ಕೂ ಇವರಿಬ್ಬರು ಮಾಜಿ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಶಿಂಧೆ ಮೊಮ್ಮಕ್ಕಳಾದ ವೀರ್‌ ಪಹಾರಿಯಾ ಮತ್ತು ಶಿಖರ್‌ ಪಹಾರಿಯಾ ಸಹೋದರರ ಜೊತೆ ಡೇಟಿಂಗ್​ನಲ್ಲಿದ್ದಾರೆ ಎಂದೇ ಹೇಳಲಾಗುತ್ತಿದೆ.  ತಾವು ವೀರ್‌ ಪಹಾರಿಯಾ ಜತೆಗೆ ಡೇಟ್‌ ಮಾಡು‌ತ್ತಿದ್ದೆ ಎಂಬ ವಿಚಾರವನ್ನು ಈ ಹಿಂದೆಯೇ ಸಾರಾ ಅಲಿಖಾನ್‌ ಹೇಳಿಕೊಂಡಿದ್ದರು. ನಾನು ಡೇಟ್‌ ಮಾಡಿದ ಏಕೈಕ ವ್ಯಕ್ತಿ ಅದು ವೀರ್.‌ ಅದಾದ ಬಳಿಕ ನನ್ನ ಜೀವನದಲ್ಲಿ ಬೇರಾರು ಇಲ್ಲ. ಇಬ್ಬರು ಸಹಮತಿ ಮೇಲೆಯೇ ಬೇರೆಯಾದೆವು ಎಂದಿದ್ದರು. ಆದರೆ ಜಾಹ್ನವಿ ಮಾತ್ರ ಶಿಖರ್​ ಜೊತೆ ದೇಶ-ವಿದೇಶ ಸುತ್ತುತ್ತಲೇ ಇದ್ದರೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಓರೆಗಿತ್ತಿಯರಾಗಲು ರೆಡಿಯಾಗ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. 

ಇದೀಗ ಈ ಗೆಳತಿಯರು, ಲ್ಯಾಕ್ಮೆ ಫ್ಯಾಷನ್ ವೀಕ್ 2024 ರನ್‌ವೇಯಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ವಾಪಸಾಗಿರುವ ಜಾಹ್ನವಿ ಮತ್ತು ಸಾರಾ,  ಫಿಟ್‌ನೆಸ್ ದಿನಚರಿಯನ್ನು ಶುರುಮಾಡಿಕೊಂಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ.  ಇವರಿಬ್ಬರೂ ತಮ್ಮ ಪ್ರೇರಕ ಫಿಟ್‌ನೆಸ್ ತಜ್ಞ ಮತ್ತು ಸ್ನೇಹಿತರಾದ ನಮ್ರತಾ ಪುರೋಹಿತ್ ಅವರ ಮಾರ್ಗದರ್ಶನದಲ್ಲಿ Pilates ಸ್ಟುಡಿಯೋದಲ್ಲಿ ಫಿಟ್​ನೆಸ್​ನಲ್ಲಿ ತೊಡಗಿರುವ ವಿಡಿಯೋ ವೈರಲ್​ ಆಗಿದೆ. ಇವರಿಬ್ಬರೂ ಟ್ರೇನಿಂಗ್​ ಸಮಯದಲ್ಲಿ,  ಹಲವಾರು ರೀತಿಯ ವರ್ಕ್​ಔಟ್​ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಕ್ರಿಯಾತ್ಮಕ ತರಬೇತಿ ವಿಧಾನವನ್ನು ಅತ್ಯಂತ ಪರಿಣಾಮಕಾರಿ ಮತ್ತು ಸ್ಪಷ್ಟವಾಗಿ ಮಾಡಿರುವುದನ್ನು ಕಂಡು ಅಭಿಮಾನಿಗಳು ಭೇಷ್​ ಭೇಷ್​ ಎನ್ನುತ್ತಿದ್ದಾರೆ.  

Tap to resize

Latest Videos

ಛೀ... ರಣವೀರ್​ ಸಿಂಗ್​ ಹೆಸ್ರು ಹೇಳಿ 'ಶಕ್ತಿಮಾನ್'​ ಹೆಸರಿಗೆ ಧಕ್ಕೆ ತರಬೇಡಿ, ಪಾತ್ರದ ಘನತೆ ತಗ್ಗಿಸಬೇಡಿ ಪ್ಲೀಸ್​...

 ಅಷ್ಟಕ್ಕೂ ಚಿತ್ರತಾರೆಯರು ತಮ್ಮ ಫಿಟ್​ನೆಸ್​​ ಕಡೆಗೆ ಹೆಚ್ಚು ಗಮನ ಕೊಡುವುದು ಇದ್ದೇ ಇರುತ್ತದೆ. ಅದೇ ರೀತಿ ಈ ಇಬ್ಬರೂ ಗೆಳತಿಯರು ಕೂಡ ಸಾಕಷ್ಟು ವರ್ಕ್​ಔಟ್​ ಮಾಡುತ್ತಾರೆ. ಜಾಹ್ನವಿ ಕಪೂರ್​ ಕುರಿತು ಹೇಳುವುದಾದರೆ ಇವರು,  ಹೆಚ್ಚು ಸಮಯವನ್ನು ಜಿಮ್​​ನಲ್ಲಿ ಕಳೆಯುತ್ತಾರೆ. ಜತೆಗೆ ಜಂಕ್ ಫುಡ್​ ತಿನ್ನೋಕೂ ಅವರು ಆದ್ಯತೆ ನೀಡುತ್ತಾರೆ.ಈ ಕುರಿತು ಕೆಲ ತಿಂಗಳ ಹಿಂದೆ ಅವರೇ ಮಾಹಿತಿ ನೀಡಿದ್ದರು. ಕಳೆದ ವರ್ಷ ಬೇಸಿಗೆಯಲ್ಲಿ ತಾವು  ನಾನಾ ರೀತಿಯ ತಿನಿಸುಗಳನ್ನು ತಿನ್ನುತ್ತಾ, ಜಿಮ್ ಮಾಡುತ್ತಾ, ಶೂಟಿಂಗ್​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದರು.  ಈ ಬೇಸಿಗೆಯನ್ನು ಹೇಗೆ ಕಳೆಯುತ್ತಾರೆ ಎನ್ನುವುದನ್ನು ನೋಡಬೇಕಿದೆಯಷ್ಟೇ. ಇದೇ ವೇಳೆ ಶಿಖರ್​ ಪಹಾರಿಯಾ ಜೊತೆ ಟೆಂಪಲ್​ ರನ್​ ಮಾಡುವುದನ್ನೂ ಮಾಡುತ್ತಿದ್ದಾರೆ. ಈಚೆಗೆ ಈ ಜೋಡಿ ಒಟ್ಟಿಗೇ ಪೂಜೆಗೆ ಕುಳಿತಿದ್ದರಿಂದ ಮದ್ವೆಯಾಯಿತು ಎಂದೇ ಸುದ್ದಿಯಾಗಿತ್ತು.

ಇನ್ನು ಸಾರಾ ಅಲಿ ಖಾನ್​ ಅಂತೂ ಹಿಂದೂ  ಧರ್ಮದ ಪಾಲನೆ ಮಾಡುತ್ತಿದ್ದಾರೆ. ಆಗಾಗ್ಗೆ ದೇವಾಲಯಗಳಿಗೆ ಭೇಟಿ ಕೊಟ್ಟು ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗುವುದೂ ಇದೆ. ಕೇದಾರನಾಥ, ಅಮರನಾಥ ಯಾತ್ರೆ ಮಾಡಿ ಬಂದಿದ್ದಾರೆ. ಶಿವಧ್ಯಾನದಲ್ಲಿಯೂ ತೊಡಗಿಸಿಕೊಂಡು ಅದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾಗ ಕೆಲವರು ಸಾಕಷ್ಟು ಟೀಕೆ ಕೂಡ ಮಾಡಿದ್ದರು. ಒಟ್ಟಿನಲ್ಲಿ ಈ ಇಬ್ಬರೂ ಸ್ನೇಹಿತೆಯರು ಸಕತ್​ ಸದ್ದು ಮಾಡುತ್ತಲೇ ಇರುತ್ತಾರೆ. ಎಲ್ಲರಿಗೂ ತಿಳಿರುವಂತೆ ನಟಿ ಜಾಹ್ನವಿ ಶ್ರೀದೇವಿ ಮತ್ತು ಬೋನಿ ಕಪೂರ್​ ಅವರ ಪುತ್ರಿಯಾದರೆ, ಸಾರಾ ಅಲಿ ಖಾನ್​, ಸೈಫ್​ ಅಲಿ ಖಾನ್​ ಮತ್ತು ರೀನಾ ದತ್ತಾ ಅವರ ಪುತ್ರಿ.  

ಬಂಧನದ ಭೀತಿಯಿಂದ ನಟಿ ಜಯಪ್ರದಾ ಸದ್ಯ ನಿರಾಳ: ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂಕೋರ್ಟ್​

click me!