Sara Ali Khan: ಅಮರನಾಥ ಯಾತ್ರೆಯಲ್ಲಿ ಹರ್​ ಹರ್​ ಮಹಾದೇವ್ ಎಂದ ಸೈಫ್​ ಪುತ್ರಿ; ಧರ್ಮದ ಕುರಿತು ಚರ್ಚೆ ಶುರು!

By Suvarna News  |  First Published Jul 23, 2023, 5:14 PM IST

ಅಮರನಾಥ ಯಾತ್ರೆ ಕೈಗೊಂಡಿರುವ ನಟಿ ಸಾರಾ ಅಲಿ ಖಾನ್​ ಹರ್​ ಹರ್​ ಮಹಾದೇವ್​ ಹೇಳಿದ್ದು, ಇದೀಗ ಧರ್ಮದ ಕುರಿತು ಸಕತ್​ ಚರ್ಚೆಯಾಗುತ್ತಿದೆ. 
 


ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ (Sara Ali Khan) ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಸಾಹಸಮಯ ಎನ್ನಲಾಗುವ ಈ ಯಾತ್ರೆಯನ್ನು ಸಾರಾ ಅಲಿ ಖಾನ್​ ಕೈಗೊಂಡಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅಪ್ಪ ಮುಸ್ಲಿಂ ಆಗಿದ್ದರೂ ಹಿಂದೂ ಸಂಪ್ರದಾಯವನ್ನು ಪಾಲಿಸುತ್ತಿರುವ ಸಾರಾ ಅಲಿ ಇದಾಗಲೇ ಇದೇ ವಿಷಯಕ್ಕೆ ಒಂದು ವರ್ಗದಿಂದ ಸಕತ್​ ಟ್ರೋಲ್​ ಆಗಿದ್ದೂ ಇದೆ. ಆದರೆ ಯಾವುದೇ ಟ್ರೋಲ್​ಗೆ ಕೇರೇ ಮಾಡದೇ ಆಗಾಗ್ಗೆ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.  ಕೆಲ ದಿನಗಳ ಹಿಂದೆ  ಕೇದಾರನಾಥಕ್ಕೆ ಭೇಟಿ ಕೊಟ್ಟರು.  ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸೌಂಡ್​ ಮಾಡಿತ್ತು. ಇದಾಗಲೇ ಸೈಫ್​ ಅಲಿ ಖಾನ್​ ಪುತ್ರಿ ಎನ್ನುವ ಕಾರಣಕ್ಕೆ ಸ್ಟಾರ್​ ಕಿಡ್​ ಆಗಿ ಸುಲಭದಲ್ಲಿ ಸಿನಿಮಾಗಳಲ್ಲಿ ಅವಕಾಶ ಲಭಿಸಿಕೊಂಡಿದ್ದಾರೆ ಎನ್ನುವ ವಿಚಾರದಲ್ಲಿಯೂ ಆಗಾಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೇಳುತ್ತಿರುವ ನಟಿ ಸಾರಾ ಅವರು ಈಗ ದೇವಸ್ಥಾನದ ವಿಷಯದಲ್ಲಿ ಚರ್ಚೆಯಲ್ಲಿ ಇರುವ ನಟಿ.  ಆದರೆ ಯಾವ ಟ್ರೋಲ್​​ಗೂ ಸಾರಾ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಆದ್ದರಿಂದಲೇ ಆಕೆಯನ್ನು  ರಿಯಲ್​  ಮತ್ತು ರೀಲ್ ಜೀವನದಲ್ಲಿ ತುಂಬಾ ಕೂಲ್ ಎಂದು ಪರಿಗಣಿಸಲಾಗಿದೆ. 
 
ಆದರೆ ಈಗ ತುಂಬಾ ಧೈರ್ಯ, ಸಾಹಸ ಇರುವವರು ಮಾತ್ರ ಹೋಗುವ ಜಾಗ ಎಂದೇ ಅಂದುಕೊಳ್ಳಲಾಗಿರುವ  ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಕೆಲ ದಿನಗಳ ಹಿಂದೆ,  ಭಾರೀ ಭದ್ರತೆಯ ಮಧ್ಯೆ ಈಕೆ  ಅಮರನಾಥ ದರ್ಶನ ಮಾಡಿರುವ ವಿಡಿಯೋ ವೈರಲ್​ ಆಗಿತ್ತು.  ಭದ್ರತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ನಟಿಯನ್ನು ನೋಡಿ ಸಾಕಷ್ಟು ಮಂದಿ ಭೇಷ್​ ಭೇಷ್​ ಎಂದಿದ್ದರು. ಇದರ ಕುರಿತು ಟ್ರೋಲ್​ (Troll) ಮಾಡಿದವರೂ ಇದ್ದಾರೆ.  ಯಾರೇ ಏನೇ ಹೇಳಿದರೂ ಎಲ್ಲಿಗೆ ಹೋಗಬೇಕು, ಯಾವ ದೇವರನ್ನು ಭೇಟಿಯಾಗಬೇಕು ಎನ್ನುವುದು  ನನ್ನಿಷ್ಟ ಎನ್ನುವ ಸಾರಾ ಅಲಿ, ಈಗ ಮತ್ತೊಮ್ಮೆ ಕೆಲವರ ಬಾಯಿಗೆ ಆಹಾರವಾಗಿದ್ದಾರೆ. ಆದರೆ ಇದಕ್ಕೂ ಕೂಡ ಈಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. 

Sara Ali Khan: ಬಿಗಿ ಬಂದೋಬಸ್ತ್​ ನಡುವೆ ಸೈಫ್​ ಅಲಿ ಖಾನ್​ ಪುತ್ರಿಯ ಅಮರನಾಥ ಯಾತ್ರೆ

Tap to resize

Latest Videos

ಇದೀಗ ಸಾರಾ ಅಲಿ ಖಾನ್​, ಸಾವಿರಾರು ಭಕ್ತರ ಜೊತೆಗೆ ತಾವೂ ಒಬ್ಬರಾಗಿ ಅಮರನಾಥ  ಯಾತ್ರೆಯಲ್ಲಿ  ಭಾಗಿಯಾಗಿದ್ದಾರೆ. ಭಂ ಭಂ ಭೋಲೆ ಎನ್ನುವ ಭಕ್ತರ ಜೊತೆಯಲ್ಲಿ ಹೋಗಿರುವ ನಟಿ, ಅಮರನಾಥ ಗುಹೆ ಹಾಗೂ ಭಕ್ತರ ಕುರಿತು ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲಿರುವ ಸಂಪೂರ್ಣ ದರ್ಶನ ಮಾಡಿರುವ ಈಕೆ,  ‘ಹರ ಹರ ಮಹದೇವ’ ಎಂದು  ಜೈಕಾರ ಕೂಗಿದ್ದಾರೆ.  ಈ ಮಾತನ್ನು ಕೇಳಿ ಕೆಲವರು ಕಿಡಿ ಕಾರುತ್ತಿದ್ದರೆ, ಇನ್ನು ಕೆಲವರು ನೀವೂ ಹಿಂದೂ ಧರ್ಮಕ್ಕೆ ಬಂದು ಬಿಡಿ ಎನ್ನುತ್ತಿದ್ದಾರೆ. ಈಕೆಯ ಅಮ್ಮ ಕೂಡ ಹಿಂದೂ ಎನ್ನುವುದನ್ನು ಮರೆಯಬೇಡಿ ಎಂದಿದ್ದಾರೆ.  ಅಸಲಿಗೆ ಸೈಫ್​  ಅಲಿ ಖಾನ್​ (Saif Ali Khan) ಅವರ ಎರಡೂ ಪತ್ನಿಯರು ಹಿಂದೂಗಳೇ. ಮೊದಲನೆಯ ಪತ್ನಿ ಅಮೃತಾ ಸಿಂಗ್​. ಅವರ ಮಗಳು ಸಾರಾ ಅಲಿ ಖಾನ್​. ಸೈಫ್​ ಅವರ ಎರಡನೆಯ ಪತ್ನಿ ಕರೀನಾ ಕಪೂರ್​. ಈ ಜೋಡಿಗೆ ಇಬ್ಬರು ಮಕ್ಕಳು. ಇದೇ ಕಾರಣಕ್ಕೆ ಅಮೃತಾ ಸಿಂಗ್​ ಅವರೂ ಹಿಂದೂವಾಗಿರುವುದನ್ನು ಕೆಲವು ಕಮೆಂಟಿಗರು ನೆನಪಿಸಿದ್ದಾರೆ. ಇನ್ನು ಕೆಲವರು ಹಾಗೆ ನೋಡಿದರೆ ಹೆಚ್ಚಿನ ಮುಸ್ಲಿಂ ಜನರ ಪೂರ್ವಜರು ಹಿಂದೂಗಳೇ ಆಗಿರುತ್ತಾರೆ. ಆದ್ದರಿಂದ ಹಿಂದೂವಂಥ ಪವಿತ್ರ ಧರ್ಮವನ್ನು ನಿಮ್ಮದಾಗಿಸಿಕೊಳ್ಳಿ ಎಂದಿದ್ದಾರೆ. 

ಸಾರಾ ಅಲಿ ಖಾನ್​ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಸಿನಿಮಾದ ಪ್ರಚಾರಕ್ಕಾಗಿ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದ್ದೂ ಇದೆ. ಆದರೆ ಅಮರನಾಥ ಯಾತ್ರೆಗೆ ಹೋದ ಮೇಲೆ ಹಲವರು ಬಾಯಿ ಮುಚ್ಚಿದ್ದಾರೆ.  ಅಂದಹಾಗೆ ವಿಕ್ಕಿ ಕೌಶಲ್​ ಅವರ ಜೊತೆ ನಟಿ ಸಾರಾ ಅಲಿ ಖಾನ್​ ನಟನೆಯ  ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ರಿಲೀಸ್​ ಆಯಿತು. ಈ ಸಿನಿಮಾ ಸಕತ್​ ಹಿಟ್​ ಆಗಿದೆ.  87 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. 

Sara Ali Khan: ಬೀದಿ ಸುತ್ತಿ ಬಟ್ಟೆ ಖರೀದಿಸಿದ ನಟಿ; ವಿಡಿಯೋ ನೋಡಿ ಸೋ ಸಿಂಪಲ್​ ಎಂದ ಫ್ಯಾನ್ಸ್​!
 

click me!