ಸಲ್ಮಾನ್‌ಗೆ ಅಂಕಲ್‌ ಎಂದ ಸಾರಾ; ನಿನ್ನ ಸಿನಿಮಾ ಕತೆ ಮುಗಿತು ಎಂದ ಸಲ್ಲು

Published : Jun 25, 2022, 12:47 PM ISTUpdated : Jun 25, 2022, 01:00 PM IST
ಸಲ್ಮಾನ್‌ಗೆ ಅಂಕಲ್‌ ಎಂದ ಸಾರಾ; ನಿನ್ನ ಸಿನಿಮಾ ಕತೆ ಮುಗಿತು ಎಂದ ಸಲ್ಲು

ಸಾರಾಂಶ

IIFA ಅವಾರ್ಡ್‌ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್‌ರನ್ನು ಆಂಕಲ್ ಎಂದು ಕರೆದ ಸಾರಾ ಅಲಿ ಖಾನ್. ಆಮೇಲೆ ಏನಾಯ್ತು ನೋಡಿ...  

ಬಾಲಿವುಡ್ ಕಿಂಗ್, ಮೋಸ್ಟ್‌ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್‌ ಮತ್ತು ಸೈಫ್‌ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಈ ವರ್ಷದ IIFA ಅವಾರ್ಡ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ. ವೇದಿಕೆ ಮೇಲೆ ಹೊಸ ಪ್ರಾಡೆಕ್ಟ್‌ ಲಾಂಚ್ ಮಾಡಬೇಕು ಎಂದು ಸಾರಾ ಚರ್ಚಿಸುತ್ತಿರುವಾಗ ಸಲ್ಲುನ ಅಂಕಲ್‌ ಎಂದು ಕರೆಯುತ್ತಾರೆ. ಸಲ್ಮಾನ್ ಕೊಟ್ಟ ರಿಯಾಕ್ಷನ್, ಸಾರಾ ಕೊಟ್ಟ ಸಮಜಾಯಿಷಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಸಾರಾ: ಏನ್ ಗೊತ್ತಾ ನಾನು ಕೆಲವೊಂದು ಬ್ರ್ಯಾಂಡ್‌ಗಳನ್ನು ಈ ವೇದಿಕೆ ಮೇಲೆ ಲಾಂಚ್ ಮಾಡಬೇಕು ಎಂದು ತೀರ್ಮಾನ ಮಾಡಿರುವೆ. ಅದು ಸಲ್ಮಾನ್ ಖಾನ್ ಅಂಕಲ್ ಜೊತೆನೇ.

ಸಲ್ಮಾನ್: ನಿನ್ನ ಮುಂಬರುವ ಸಿನಿಮಾಗಳ ಕಥೆ ಮುಗಿಯಿತ್ತು.

ಸಾರಾ: ನನ್ನ ಸಿನಿಮಾಗಳಾ? ಏನ್ ಹೇಳ್ತಿದ್ದೀರಾ?

ಸಲ್ಮಾನ್: ಹೌದು ನಾನು ಹೀಗೆ ಹೇಳಬೇಕು ಏಕೆಂದರೆ ಎಲ್ಲರ ಎದುರು ನೀನು ನನಗೆ ಅಂಕಲ್ ಎಂದು ಕರೆದಿರುವೆ.

ಸಾರಾ: ಆದರೆ ನೀವೇ ಅಂಕಲ್ ಎಂದು ಕರೆಯಬೇಕು ಎಂದಿದ್ದು. ನನ್ನ ತಪ್ಪು ಏನಿದೆ? ಇರ್ಲಿ ಬಿಡಿ

ತಕ್ಷಣವೇ ಹಸಿರು ಬಣ್ಣದಲ್ಲಿರುವ ಜಿಮ್ ಪ್ರೋಟಿನ್ ಪೌಡರ್‌ನ ಸಾರಾ ತಂದು ಸಲ್ಮಾನ್‌ರನ್ನು ರೇಗಿಸುತ್ತಾರೆ. ಇಬ್ಬರೂ ಸೇರಿಕೊಂಡು Tan Tana Tan Tan ಹಾಡಿಗೆ ಡ್ಯಾನ್ಸ್ ಮಾಡುತ್ತಾರೆ. 'ಸಾರಾ ತುಂಬಾ ಕ್ಯೂಟ್ ಆಗಿ ಮಾತನಾಡುತ್ತಾರೆ ಇವರಿಬ್ಬರ ಕಾಂಬಿನೇಷನ್‌ ನೋಡಲು ಕಾಯುತ್ತಿರುವೆ' ಎಂದು ಒಬ್ಬ ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು 'ಎಲ್ಲರೂ ಹಿಂದೆ ಅಂಕಲ್ ಎಂದು ಕರೆಯುತ್ತಾರೆ ಆದರೆ ಸಾರಾ ನೇರವಾಗಿ ಕರೆದು ಸಲ್ಲುಗೆ ಕೋಪ ತರಿಸಿದ್ದಾಳೆ' ಎಂದಿದ್ದಾರೆ.

ಬಾಲಿವುಡ್ ಸುಂದರಿಯರ ಮಸ್ತ್ ಪೋಸ್; ಜಾನ್ವಿ, ಸಾರಾ ಕ್ಯಾಮರಾಗೆ ಸೆರೆಯಾಗಿದ್ದು ಹೀಗೆ

ಜೂನ್ 2ರಿಂದ 4ರ ವರೆಗೂ ಅಬು ದಾಬಿಯಲ್ಲಿ IIFA 2022 ಕಾರ್ಯಕ್ರಮ ನಡೆಯಿತ್ತು. ಜೂನ್ 25ರಂದು ಹಿಂದಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಅವಾರ್ಡ್‌ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ರಿತೇಶ್, ಮನೀಶಾ ಪೌಲ್, ಅಭಿನಷೇಕ್ ಬಚ್ಚನ್, ಟೈಗರ್ ಶಾರ್ಫ್,ಅನನ್ಯಾ ಪಾಂಡೆ, ಸಾರಾ ಖಾನ್, ನೋರಾ ಫಾತೇಹಿ, ನೇಹಾ ಕಕ್ಕರ್, ಹನಿ ಸಿಂಗ್, ಸೇರಿಂದತೆ ಅನೇಕರು ಡ್ಯಾನ್ಸ್‌ ಮತ್ತು ಹಾಡುವ ಮೂಲಕ ಮನೋರಂಜನೆ ನೀಡಿದ್ದಾರೆ.

 

ಖಾಲಿ ಬ್ಯಾಗ್‌ ಹಿಡಿದು ಪೋಸ್‌:

ಕೆಲವು ದಿನಗಳ ಹಿಂದೆ ಸಾರಾ ಜಿಮ್‌ನಿಂದ ಹೊರ ಬರುತ್ತಿರುವಾಗ ಮತ್ತೆ ಪ್ಯಾಪರಾಜಿಗಳಿಗೆ ಕಾಣಿಸಿಕೊಂಡಿದ್ದಾರೆ. ನಿಯಾನ್‌ ಆರೇಂಜ್‌ ಚಡ್ಡಿ, ಲೈಟ್‌ ಬ್ಲೂ ಕ್ರಾಪ್‌ ಟೀ-ಶರ್ಟ್‌ ಧರಿಸಿರುವ ಸಾರಾ, ಸಾರಾ ಎಂದು ಬರೆದಿರುವ ಬ್ಯಾಗ್‌ನ ಕ್ಯಾರಿ ಮಾಡಿದ್ದಾರೆ. ಡಿಸೈನರ್ ಬ್ಯಾಗ್ ಆಗಿರುವ ಕಾರಣ ನೆಟ್ಟಿಗರ ಗಮನ ಸೆಳೆದಿದೆ, ಆದರೆ ಬ್ಯಾಗ್ ಖಾಲಿ ಕಾಣಿಸುತ್ತಿರುವುದಕ್ಕೆ ಟ್ರೋಲ್ ಆಗಿದ್ದಾರೆ. ಯಾವ ಬ್ರ್ಯಾಂಡ್‌ನ ಪ್ರಮೋಟ್ ಮಾಡುತ್ತಿದ್ದೀರಾ? ಅಥವಾ ಕಾಣಿಸದಂತೆ ಏನ್ ಇಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. 

ಎಕ್ಸ್‌ ಬಾಯ್‌ಫ್ರೆಂಡ್‌ ಜೊತೆ ಪೋಸ್‌ ನೀಡಿದ Sara Ali Khan ಟ್ರೋಲ್‌

ಮದುವೆಯಾಗಲು ರೆಡಿಯಂತೆ:

'ನನ್ನ ತಾಯಿ ನನಗೆ ಎಲ್ಲವೂ. ನನ್ನ ತಾಯಿಯಿಂದ ಓಡಿಹೋಗುವ ಹಕ್ಕು ನನಗಿಲ್ಲ' ಎಂದಿದ್ದಾರೆ ನಟಿ.  ಇದಲ್ಲದೆ, ಸಾರಾ ಅವರು ತನ್ನ ತಾಯಿಯೊಂದಿಗೆ ವಾಸಿಸಲು ಸಿದ್ಧರಿರುವ  ವ್ಯಕ್ತಿಯನ್ನು ಮದುವೆಯಾಗುವುದಾಗಿ ಹೇಳಿದರು ಮತ್ತು ನಾನು ನನ್ನ ತಾಯಿಯನ್ನು ಎಂದಿಗೂ ಬಿಡುವುದಿಲ್ಲ ಎಂದು ಅವಳು ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರಭಾಸ್ 'ಮಗು' ಅಂದ್ರಾ ನಿಧಿ ಅಗರ್ವಾಲ್? 'ದಿ ರಾಜಾ ಸಾಬ್' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ನಟಿ ಏನ್ ನೋಡಿದ್ರಂತೆ?
ಕನ್ನಡದ ಈ ಸ್ಟಾರ್ ನಟಿಯರು ಹುಟ್ಟಿದ್ದು ಯಾವ ಜಿಲ್ಲೆಯಲ್ಲಿ? ಯಾವ ಜಾತಿಯಲ್ಲಿ?