
ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ತಂಡ ಟ್ವಿಟರ್ ಮೂಲಕ ನಟನಿಗೆ ಕೊರೋನಾ ಸೋಂಕು ತಗುಲಿರುವುದಾಗಿ ತಿಳಿಸಿದ್ದಾರೆ. ಇದು ಎರಡನೇ ಸಲ ಬಾಲಯ್ಯ ಅವರಿಗೆ ಸೋಂಕು ತಗುಲಿರುವ ಕಾರಣ ಕುಟುಂಬಸ್ಥರು ಮತ್ತು ಅಭಿಮಾನಿಗಳು ಆತಂಕದಲ್ಲಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸೋಂಕು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು, ಆದರೆ ಈ ಸಲ ಯಾವುದೇ ರೋಗ ಲಕ್ಷಣ ಇಲ್ಲದ ಕಾರಣ ಮನೆಯಲ್ಲಿ ಐಸೋಲೇಟ್ ಆಗಿದ್ದಾರೆ.
'ನಂದಮೂರಿ ಬಾಲಕೃಷ್ಣ ಅವರಿಗೆ ಕೊರೋನಾ ಪಾಸಿಟಿವ್ ಆಗಿದೆ ಆದರೆ ಯಾವುದೇ ರೋಗ ಲಕ್ಷಣಗಳಿಲ್ಲ. ಸದ್ಯ ಮನೆಯಲ್ಲಿಯೇ ಐಸೋಲೇಟ್ ಆಗಿದ್ದು, ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಎರಡು ದಿನಗಳಲ್ಲಿ ಅವರ ಸಂಪರ್ಕಕ್ಕೆ ಬಂದಿರುವವರು ತಪ್ಪದೆ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ. ಆದಷ್ಟು ಬೇಗ ಗುಣ ಮುಖರಾಗಿ' ಎಂದು ವಂಶಿ ಕಾಕಾ ಟ್ವೀಟ್ ಮಾಡಿದ್ದಾರೆ.
'ಚಿಂತಿಸಬೇಡಿ ಬಾಲಯ್ಯ ಆದಷ್ಟು ಬೇಗ ಗುಣಮುಖರಾಗಿ ಬರುತ್ತೀರಾ.ಯುವಕರಿಗಿಂತ ಡಬಲ್ ಎನರ್ಜಿ ನಿಮಗೆ' ಎಂದು ಒಬ್ಬ ಅಭಿಮಾನಿ ಬರೆದರೆ ಮತ್ತೊಬ್ಬರು 'ನನ್ನ ಮನಸ್ಸಿನಿಂದ ಈ ವಿಚಾರ ಹೊರ ತೆಗೆಯಲು ಆಗುತ್ತಿಲ್ಲ. ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ.' ಎಂದು ಕಾಮೆಂಟ್ ಮಾಡಿದ್ದಾರೆ.
ನಂದಮೂರಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಟಿ ರಾಮರಾವ್ ಅವರ ಪುತ್ರ. 2014ರಲ್ಲಿ ಹಿಂದೂಪುರದಿಂದ ಶಾಸಕರಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ 2019ರಲ್ಲಿ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ನಂದಮೂರಿ ಅವರು ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಅವುಗಳಲ್ಲಿ ಎನ್‌ಟಿಆರ್ ಕಥಾನಾಯಕುಡು (2019), ರೂಲರ್ (2019), ಜೈ ಸಿಂಹ (2018), ಡಿಕ್ಟೇಟರ್ (2016), ಲೆಜೆಂಡ್ (2014) ಮತ್ತು ಸಿಂಹ (2010). ಮುಂಬರುವ ತೆಲುಗಿನ ಆಕ್ಷನ್ ಅಖಂಡದಲ್ಲಿ ಅವರು ಮುಂದೆ ಕಾಣಿಸಿಕೊಳ್ಳಲಿದ್ದಾರೆ, ಅದರ ನಂತರ ಅವರ 107 ನೇ ಚಿತ್ರವು ತಾತ್ಕಾಲಿಕವಾಗಿ NBK107 ಎಂದು ಹೆಸರಿಸಲ್ಪಟ್ಟಿದೆ.
ಮೈತ್ರಿ ಮೂವೀಸ್ ಮೇಕರ್ ಅರ್ಪಿಸುತ್ತಿರುವ NBK107 ಸಿನಿಮಾ ಜೂನ್ 2021 ಆರಂಭವಾಗುತ್ತಿತ್ತು. ಈ ಸಿನಿಮಾದಲ್ಲಿ ನಂದಮೂರಿ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್, ವರಲಕ್ಷ್ಮಿ ಶರತ್‌ಕುಮಾರ್,ಹನಿ ರೋಸ್ ಮತ್ತು ಲಾಲ್ ಪೌಲ್ ಅಭಿನಯಿಸುತ್ತಿದ್ದಾರೆ. ನಮ್ಮ ಕನ್ನಡದ ನಟ ದುನಿಯಾ ವಿಜಯ್ ಕೂಡ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Covid Crisis: ಕರ್ನಾಟಕದಲ್ಲಿ ಒಮಿಕ್ರೋನ್ ಉಪತಳಿ ಪತ್ತೆ
ಕಂದನನ್ನು ಹೊಡೆದು ಎಬ್ಬಿಸಿದ ಬಾಲಯ್ಯ:
ಇತ್ತೀಚೆಗೆ ಹಿಂದೂಪುರಕ್ಕೆ ಬಂದಿದ್ದ ಬಾಲಯ್ಯನನ್ನ ನೋಡಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಯೊಬ್ಬ ಪುಟ್ಟ ಮಗುವನ್ನು ಕರೆದುಕೊಂಡು ಬಂದಿದ್ದ. ಬಾಲಯ್ಯ ಜೊತೆ ಸೆಲ್ಫಿಗಾಗಿ ಓಡಿ ಬಂದು ಬಾಲಯ್ಯ ಪಕ್ಕದಲ್ಲಿ ನಿಂತ. ಭಜದ ಮೇಲೆ ಮಗುವನ್ನು ಮಲಗಿಸಿಕೊಂಡಿದ್ದ.ನಿದ್ರಿಸುತ್ತಿದ್ದ ಪುಟ್ಟ ಕಂದನನ್ನು ಬಾಲಯ್ಯ ಜೋರಾಗಿ ಹೊಡೆದು ಎಬ್ಬಿಸಿ ಕ್ಯಾಮರಾ ನೋಡುವಂತೆ ಹೇಳಿದ್ದಾರೆ. ಬಾಲಯ್ಯನ ಹೊಡೆತಕ್ಕೆ ಬೆಚ್ಚಿದ ಮಗು ನಿದ್ರೆಯಿಂದ ಎದ್ದು ಗಾಬರಿಯಿಂದ ನೋಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕ, ಯುಕೆಯಲ್ಲಿ 2 ಲಕ್ಷ ಕೋವಿಡ್ ಕೇಸ್ ದಾಖಲು!
ಭಾರತ ರತ್ನ ತಂದೆಯ ಉಗುರಿಗೆ ಸಮ:
ಆಸ್ಕರ್ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಯಾರೆಂದೇ ನನಗೆ ಗೊತ್ತಿಲ್ಲ. ಇನ್ನು ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ನಮ್ಮ ತಂದೆಯ ಕಾಲಿನ ಉಗುರಿಗೂ ಸಮ ಎಂದು ಹೇಳುವ ಮೂಲಕ ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ವಿವಾದ ಸೃಷ್ಟಿಸಿದ್ದಾರೆ. ‘ಭಾರತ ರತ್ನ ಪ್ರಶಸ್ತಿಯು ನನ್ನ ತಂದೆ ಎನ್.ಟಿ. ರಾಮರಾವ್ ಅವರ ಕಾಲಿನ ಬೆರಳಿಗೂ ಸಮ ಅಲ್ಲ. ಭಾರತ ರತ್ನವು ನಟ ಹಾಗೂ ಆಂಧ್ರಪ್ರದೇಶ ಸಿಎಂ ಆಗಿದ್ದ ನನ್ನ ತಂದೆಗೆ ಗೌರವ ತಂದುಕೊಡುವುದಿಲ್ಲ. ಬದಲಾಗಿ ನನ್ನ ತಂದೆಯೇ ಭಾರತ ರತ್ನಕ್ಕೆ ಗೌರವ ತಂದುಕೊಡಲಿದ್ದಾರೆ. ಟಾಲಿವುಡ್‌ಗೆ ನನ್ನ ಕುಟುಂಬ ನೀಡಿದ ಕೊಡುಗೆಗೆ ಯಾವ ಪ್ರಶಸ್ತಿಯೂ ಸಮ ಅಲ್ಲ. ನನ್ನ ಕುಟುಂಬ ಅಥವಾ ನನ್ನ ತಂದೆ ಈ ಬಗ್ಗೆ ಬೇಸರ ಪಡುವುದಿಲ್ಲ. ಪ್ರಶಸ್ತಿಗಳೇ ಬೇಸರ ಪಡಬೇಕು’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.