ಸುಶಾಂತ್ ಸಿಂಗ್ ಬಗ್ಗೆ ಮೌನ ಮುರಿದ ಸಾರಾ ಖಾನ್; 4 ವರ್ಷಗಳು ಕಳೆದಿದೆ, ನಿನ್ನಿಂದ ಕಲಿತ ಬುದ್ಧಿ ಇದು

Published : Dec 08, 2022, 09:31 AM ISTUpdated : Dec 08, 2022, 09:39 AM IST
ಸುಶಾಂತ್ ಸಿಂಗ್ ಬಗ್ಗೆ ಮೌನ ಮುರಿದ ಸಾರಾ ಖಾನ್;  4 ವರ್ಷಗಳು ಕಳೆದಿದೆ, ನಿನ್ನಿಂದ ಕಲಿತ ಬುದ್ಧಿ ಇದು

ಸಾರಾಂಶ

ಕೆದರ್ನಾಥ್ ಬಿಡುಗಡೆಯಾಗಿ 4 ವರ್ಷ. ಚಿತ್ರರಂಗಕ್ಕೆ ಕಾಲಿಟ್ಟ ಸಾರಾ ಅಲಿ ಖಾನ್ ಸುಶಾಂತ್ ಸಿಂಗ್ ಬಗ್ಗೆ ಬರೆದುಕೊಂಡ ಸಾಲುಗಳಿದು...

2018ರಲ್ಲಿ ಕೆದರ್ನಾಥ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಸೈಫ್ ಅಲಿ ಖಾನ್- ಅಮೃತಾ ಸಿಂಗ್ ಪುತ್ರಿ ಸಾರಾ ಅಲಿ ಖಾನ್ ಪಾದಾರ್ಪಣೆ ಮಾಡಿದ್ದರು. ಸಾರಾಗೆ ಸಿನಿಮಾ ಸೆಟ್‌ನಲ್ಲಿ ಗುಡ್‌ ಕಂಪ್ಯಾನಿಯನ್, ಗುಡ್‌ ಸಪೋರ್ಟರ್, ಗುಡ್‌ ಟೀಚರ್‌ ಆಗಿ ನಿಂತವರು ಸುಶಾಂತ್ ಸಿಂಗ್ ರಾಜಪುತ್‌ ಅಂತೆ. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾರಾ ಬರೆದುಕೊಂಡಿದ್ದಾರೆ. ಸುಶಾಂತ್‌ನ ನಕ್ಷತ್ರ ಎಂದು ಹೊಗಳಿರುವುದಕ್ಕೆ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ.

ಸಾರಾ ಪೋಸ್ಟ್‌:

'4 ವರ್ಷಗಳ ಹಿಂದೆ ನನ್ನ ದೊಡ್ಡ ಕನಸು ನನಸಾದ ದಿನ. ಈ ದಿನಕ್ಕೂ ಆ ಕ್ಷಣವೆಲ್ಲ ಕನಸು ಅನಿಸುತ್ತದೆ, ಮುಂದಕ್ಕೂ ಇದೇ ಭಾವನೆ ಇರುತ್ತದೆ. ಆಗಸ್ಟ್‌ 2017ಕ್ಕೆ ಹಿಂತಿರಗಿ ಶಾಟ್ ಮಾಡಿದ ಪ್ರತಿಯೊಂದು ಸೀನ್‌ಗಳನ್ನು ಫೀಲ್ ಮಾಡಬೇಕು ಎನ್ನುವ ಆಸೆ, ಅವಕಾಶ ಸಿಕ್ಕರೆ ಏನು ಬೇಕಿದ್ದರೂ ಮಾಡಬಲೆ. ಸುಶಾಂತ್‌ ಸಿಂಗ್ ರಾಜಪುತ್‌ಯಿಂದ ಸಂಗೀತ, ಸಿನಿಮಾ, ಪುಸ್ತಕ, ಜೀವನ, ನಟನೆ, ನಕ್ಷತ್ರ, ಆಕಾಶ, ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ನದಿ ಹರಿಯುದ ಸದ್ದು, ಮ್ಯಾಗಿ ಮತ್ತು ಕುರ್ಕುರೆ, ದಿನ ಬೆಳಗ್ಗೆ 4 ಗಂಟೆಗೆ ಎದ್ದು ದಿನ ಆರಂಭಿಸುವುದು ಎಂದೂ ಮರೆಯುವುದಿಲ್ಲ. ಗುರು ಸರ್‌ ನಿರ್ದೇಶನ ಮತ್ತು ಅವರಿಂದ ಪರಿಚಯವಾದ ಖುಷಿ ನನಗಿದೆ. ಮತ್ತೆ ಆ ಕ್ಷಣಗಳು ನನಗೆ ಬೇಕು. ಜೀವನದಲ್ಲಿ ಮರೆಯಲಾಗದ ಕ್ಷಣಗಳನ್ನು ಕ್ರಿಯೇಟ್ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು' ಎಂದು ಸಾರಾ ಬರೆದುಕೊಂಡಿದ್ದಾರೆ. 

ಸುಶಾಂತ್ ಬಗ್ಗೆ:

' ಇಂದು ರಾತ್ರಿ ಚಂದ್ರನು ಹೊಳೆಯುವಂತೆ, ಸುಶಾಂತ್ ಸಿಂಗ್ ಅಲ್ಲಿ ತಮ್ಮ ಇಷ್ಟವಾದ ಚಂದ್ರನ ಪಕ್ಕದಲ್ಲಿ ನಕ್ಷತ್ರವಾಗಿ ಮಿಂಚುತ್ತಿದ್ದಾನೆ. ಕೇದರ್ನಾಥ್‌ದಿಂದ Andromedaವರೆಗೂ ನೀನು ಮಿಂಚಬೇಕು 'ಎಂದಿದ್ದಾರೆ ಸಾರಾ.

ಅಭಿಷೇಕ್ ಕಪೂರ್ ನಿರ್ದೇಶನ ಮಾಡಿರುವ ಕೇದಾರನಾಥ ಸಿನಿಮಾ ಮುಸ್ಲಿಂ ಹುಡುಗ ಮತ್ತು ಹಿಂದು ಹುಡುಗಿ ಪ್ರೇಮಕಥೆ ಹೇಳುತ್ತದೆ. 2013 ರಲ್ಲಿ ಉತ್ತರಾಖಂಡದಲ್ಲಿ ಪ್ರವಾಹದಿಂದ ಅವರ ಪ್ರೀತಿ ಏನೆಲ್ಲಾ ತಿರುವುದು ಪಡೆದುಕೊಳ್ಳುತ್ತದೆ, ಎಷ್ಟೆಲ್ಲಾ ಕಷ್ಟ ಸುಖವಿದೆ ಎಂದು ಅದ್ಭುತವಾಗಿ ತೋರಿಸಿದ್ದಾರೆ. 'ಇಂಥ ಅದ್ಭುತ ಕಥೆಯನ್ನು ಸಿನಿಮಾ ರೂಪದಲ್ಲಿ ಜನರು ಮುಂದೆ ತರಲು ಎನರ್ಜಿ ಬೇಕು. ನನ್ನ ಪ್ರಕಾರ ಜನರಿಗೆ ಕಥೆ ಹೇಳಬೇಕು..ತುಂಬಾ ವಿಭಿನ್ನವಾಗಿ ಹೇಳಬೇಕು. ನನಗೆ ಈ ಅವಕಾಶ ಮಾಡಿಕೊಟ್ಟ ಪ್ರತಿಯೊಂದು ಶಕ್ತಿಯೂ ನನ್ನ ವಂದನೆಗಳು' ಎಂದು ಅಭಿಷೇಕ್ ಕಪೂರ್ ಹೇಳಿದ್ದರು. 

ಬಾಲಿವುಡ್ ನಾಶಮಾಡಲು ಸುಶಾಂತ್ ಅನ್ನೋ 'ಬ್ರಹ್ಮಾಸ್ತ್ರ' ಸಾಕು; ಸಹೋದರಿ ಮೀತು ಸಿಂಗ್ ವ್ಯಂಗ್ಯ

2020ರ ಜೂನ್‌ ತಿಂಗಳಿನಲ್ಲಿ ನಟ ಸುಶಾಂತ್‌ ಸಿಂಗ್ ಅಗಲಿದ್ದರು. ಬಾಂದ್ರಾ ಅಪಾರ್ಟ್ಮೆಂಟ್‌ ಶವವಾಗಿ ಪತ್ತೆಯಾದ ನಟ ಸುಶಾಂತ್‌ ಸಿಂಗ್ ಬಾಲಿವುಡ್‌ನ ಬೆಚ್ಚಿ ಬೀಳಿಸಿತ್ತು. ಬಿ-ಟೌನ್‌ನ ಕರಾಳ ಮುಖಗಳನ್ನು ಹೊರ ತಂದಿತ್ತು. 

ಕೇದಾರನಾಥ್‌ಗೆ ಹೋದ ಸಾರಾ ಅಲಿ ಖಾನ್ ಟ್ರೋಲ್:

ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಇತ್ತೀಚೆಗೆ ಟ್ರಾವೆಲ್ ಗೋಲ್ಸ್ ಕೂಡಾ ಶೇರ್ ಮಾಡಿದ್ದಾರೆ. ಕ್ಯೂಟ್ ಫ್ರೆಂಡ್ಸ್‌ ಒಟ್ಟಿಗೆ ಯಾತ್ರೆ ಕೈಗೊಂಡಿದ್ದರು. ಅನೇಕ ಅಭಿಮಾನಿಗಳು ಸಾರಾ ಮತ್ತು ಜಾನ್ವಿಯನ್ನು ಶ್ಲಾಘಿಸಿದ್ದಾರೆ. ಕೆಲವರು ಅವರು ಹಂಚಿಕೊಂಡ ಫೊಟೋಗಳನ್ನು ನೋಡಿ ಖುಷಿಪಟ್ಟರೆ ಇತರ ಬಳಕೆದಾರರು ಸಾರಾ ಅವರು ಪವಿತ್ರ ದೇಗುಲವಾದ ಕೇದಾರನಾಥಕ್ಕೆ ಭೇಟಿ ನೀಡಿದ್ದಕ್ಕಾಗಿ ಟ್ರೋಲ್ ಮಾಡಿದ್ದಾರೆ. ಒಬ್ಬ ಬಳಕೆದಾರರು ನೀವು ಮುಸ್ಲಿಂ, ಆದ್ದರಿಂದ ನೀವು ಏನು ಮಾಡುತ್ತಿದ್ದೀರಿ ಎಂದು ಬರೆದರೆ, ಇನ್‌ಸ್ಟಾಗ್ರಾಮ್ ಬಳಕೆದಾರರು ನೀವು ಹೇಗೆ ಮುಸ್ಲಿಂ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.ಇಬ್ಬರು ನಟಿಯರು ಪವಿತ್ರ ಸ್ಥಳದಲ್ಲಿ ಪ್ರಾರ್ಥನೆ ಮಾಡುವುದನ್ನು ನೋಡಿದ ಅನೇಕ ಅಭಿಮಾನಿಗಳು ಸಾಕಷ್ಟು ಪ್ರಭಾವಿತರಾಗಿದ್ದಾರೆ. ವಾವ್ ಇದನ್ನು ಸಂಸ್ಕಾರ ಎಂದು ಕರೆಯಲಾಗುತ್ತದೆ. ನೀವಿಬ್ಬರೂ ನಿಜವಾಗಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಜಾನ್ವಿ ಮತ್ತು ಸಾರಾ! ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ!  ಅವರು ಕೇದಾರನಾಥ ಧಾಮನಲ್ಲಿದ್ದಾರೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?