ಬಾಹುಬಲಿಯ ಕಟ್ಟಪ್ಪ ಪಾತ್ರ ಈ ನಟ ಮಾಡ್ಬೇಕಾಗಿತ್ತು!

By Suvarna NewsFirst Published Jul 12, 2020, 4:49 PM IST
Highlights

ಬಾಹುಬಲಿ ಫಿಲಂಗಳನ್ನು ನೀವು ನೋಡಿರ್ತೀರಿ. ಇದರಲ್ಲಿ ಬಾಹುಬಲಿ, ಶಿವಗಾಮಿ ಪಾತ್ರಗಳಷ್ಟೇ ಪ್ರಮುಖವಾಗಿ ಗಮನ ಸೆಳೆದ ಇನ್ನೊಂದು ಪಾತ್ರವೆಂದರೆ ಕಟ್ಟಪ್ಪ. ಈ ಕಟ್ಟಪ್ಪ ಪಾತ್ರಕ್ಕೆ ಮೊದಲ ಆಯ್ಕೆ ಯಾರಾಗಿದ್ದರು ಗೊತ್ತೆ?

ಬಾಹುಬಲಿ ಫಿಲಂ ಬಂದು ಐದು ವರ್ಷ ಆಗ್ತಿದೆ, ಇಂಥ ಸಂದರ್ಭದಲ್ಲಿ ಬಾಹುಬಲಿಯ ಬಗ್ಗೆ, ಅದರ ಕತೆ ಮತ್ತು ಸ್ಕ್ರೀನ್‌ ಪ್ಲೇ ಬರೆದ ವಿಜಯೇಂದ್ರ ಪ್ರಸಾದ್‌ ಬಗ್ಗೆ, ನಿರ್ದೇಶಕ ರಾಜಮೌಳಿ ಬಗ್ಗೆ, ಪಾತ್ರಗಳ ಬಗ್ಗೆ ನಾನಾ ಕತೆಗಳು ಹೊರಗೆ ಬರ್ತಿವೆ. ಅದರಲ್ಲಿ ಕಟ್ಟಪ್ಪ ಪಾತ್ರದ ಬಗೆಗೆ ಬಹಿರಂಗವಾಗಿರುವ ಸಂಗತಿಯೂ ಒಂದು, ನಿಮಗೆ ಗೊತ್ತಾ? ಕಟ್ಟಪ್ಪ ಪಾತ್ರವನ್ನು ಮಾಡಿದ ಸತ್ಯರಾಜ್‌ ಅದನ್ನು ಅದ್ಭುತವಾಗಿಯೇ ನಿಭಾಯಿಸಿದ್ದಾರೆ. ಆದರೆ ಬಾಹುಬಲಿ ಚಿತ್ರಕ್ಕೆ ಚಿತ್ರಕತೆ ಬರೆಯುವಾಗ ವಿಜಯೇಂದ್ರ ಪ್ರಸಾದ್‌ ಅವರ ಮನಸ್ಸಿನಲ್ಲಿ ಆ ಪಾತ್ರಕ್ಕೆ ಸೂಕ್ತವಾದ ವ್ಯಕ್ತಿ ಎಂದು ಅಂದುಕೊಂಡಿದ್ದು ಬಾಲಿವುಡ್‌ನ ಬೇಡಿಕೆಯ ನಟ ಸಂಜಯ್‌ ದತ್‌ ಅವರನ್ನು. ನಂತರ ಈ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ ಸಂಜಯ್‌ ದತ್‌ ಆಗ ಜೈಲಿನಲ್ಲಿದ್ದರು. ಅವರನ್ನು ನಂಬಿಕೊಂಡ ಹಲವು ಹಿಂದಿ ಫಿಲಂಗಳು ಶೂಟಿಂಗ್‌ ನಡೆಸಲಿಕ್ಕಾಗದೆ ನಷ್ಟ ಅನುಭವಿಸುತ್ತಿದ್ದವು. ಹೀಗಾಗಿ ಅವರನ್ನು ಹಾಕಿಕೊಳ್ಳುವ ಆಸೆಯನ್ನು ಕೈಬಿಟ್ಟು ಸತ್ಯರಾಜ್ ಅವರನ್ನು ಹಾಕಿಕೊಳ್ಳಲಾಯಿತು. ಸತ್ಯರಾಜ್‌ ಅವರು ಆ ಪಾತ್ರಕ್ಕೆ ಜೀವ ತುಂಬಿದರು. 

ಆದರೆ ಇನ್ನೂ ಒಂದು ಸಮಸ್ಯೆ ಉಂಟಾಯಿತು. ಬಾಹುಬಲಿ ಎರಡನೇ ಭಾಗದ ಹೊತ್ತಿಗೆ ಸತ್ಯರಾಜ್‌ ಒಂದು ಎಡವಟ್ಟು ಮಾಡಿಕೊಂಡುಬಿಟ್ಟಿದ್ದರು. ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕನ್ನಡಿಗರ ಸಿಟ್ಟಿಗೆ ತುತ್ತಾಗಿದ್ದರು. ತೆಲುಗು ತಮಿಳಿನ ಚಿತ್ರಗಳಿಗೆ ಕರ್ನಾಟಕದಲ್ಲಿ ಭಾರಿ ಮಾರುಕಟ್ಟೆಯಿದೆ. ಅದರಲ್ಲೂ ಬಾಹುಬಲಿ ಎರಡನೇ ಭಾಗದ ಬಗ್ಗೆ ಭಾರಿ ನಿರೀಕ್ಷೆಯಿತ್ತು. ಕನ್ನಡಿಗರು ಚಿತ್ರವನ್ನು ಬಹಿಷ್ಕರಿಸುವ ಮಾತಾಡಿಬಿಟ್ಟಿದ್ದರು. ಇಲ್ಲಿನ ವಿತರಕರು ಎಲ್ಲ ಬಗೆಯಲ್ಲಿ ಪೆಟ್ಟು ತಿನ್ನುವ ಸಾಧ್ಯತೆಗಳಿದ್ದವು. ಕಡೆಗೂ ಸತ್ಯರಾಜ್ ಕ್ಷಮೆ ಕೇಳಿದ ಬಳಿಕವೇ ಬಾಹುಬಲಿ ರಿಲೀಸ್‌ ಆಯ್ತು. 

ಬಾಹುಬಲಿ ಕತೆ ರೂಪುಗೊಂಡದ್ದೇ ಆಕಸ್ಮಿಕವಾಗಿ. ರಾಜಮೌಳಿ ಪ್ರಭಾಸ್‌ ಅನ್ನು ಹಾಕಿಕೊಂಡು ಒಂದು ಫಿಲಂ ಮಾಡಲು ಬಯಸಿದ್ದರು. ಒಂದು ಕತೆ ಹೇಳುವಂತೆ ತಂದೆಯ (ವಿಜಯೇಂದ್ರ ಪ್ರಸಾದ್‌) ಬಳಿ ಕೇಳಿದರು. ಆಗ ಪ್ರಸಾದ್‌ ತಲೆಯಲ್ಲಿ ಹುಟ್ಟಿಕೊಂಡದ್ದು ಒಬ್ಬ ಖಡ್ಗಧಾರಿಯ ಕತೆ. ಈಆ ಅದ್ಭುತ ಖಡ್ಗಧಾರಿ, ಖಡ್ಗ ಹಿಡಿದರೆ ಆತನನ್ನು ಯಾರೂ ಸೋಲಿಸಲು ಸಾಧ್ಯವಿರಲಿಲ್ಲ. ಒಮ್ಮೆಗೇ ಇನ್ನೂರು ಜನರನ್ನು ಸಲೀಸಾಗಿ ಎದುರಿಸಿ ಸಾಯಬಡಿಯಬಲ್ಲಷ್ಟು ಪ್ರಚಂಡ ಶಕ್ತಿಶಾಲಿಯಾಗಿದ್ದ. ಸಂಜೆಯಾಗುವುದರೊಳಗೆ ಅವನ ಮೈ ರಕ್ತದಿಂದ ತೊಯ್ದಿರುತ್ತಿತ್ತು. ಆದರೆ ಅದರಲ್ಲಿ ಒಂದು ಹನಿಯೂ ಅವನದಲ್ಲ. ಈ ಕತೆಯನ್ನು ಒಬ್ಬ ಮುದುಕ, ಖಡ್ಗವಿದ್ಯೆ ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಹೇಳುತ್ತಾನೆ. ಹಾಗಿದ್ದರೆ ಆತ ಎಲ್ಲಿದ್ದಾನೆ, ಹೇಗಿದ್ದಾನೆ? ಈ ಪ್ರಶ್ನೆಗೆ ಉತ್ತರ- ಅವನು ಈಗಿಲ್ಲ ಸತ್ತಿದ್ದಾನೆ. ಅದು ಹೇಗೆ? ಹೇಗೆಂದರೆ ಅವನ ಅತ್ಯಾಪ್ತನೇ ಖಡ್ಗಿದಿಂದ, ಹಿಂದಿನಿಂದ ಇರಿದು ಕೊಂದ ಎಂಬುದು. ಅತಿ ಪರಿಣಾಮಕಾರಿ ಆಯುಧ ಯಾವುದು ಎಂದರೆ ಹಿಂದಿನಿಂದ ಇರಿಯುವುದು ಎಂಬ ಈ ಪರಿಕಲ್ಪನೆ ಹಾಗೆ ಹುಟ್ಟಿಕೊಂಡಿತು. ನಂತರ ಇದನ್ನು ವಿಸ್ತರಿಸಲಾಯಿತು. 

ಬಾಹುಬಲಿಯ ಬಲ್ಲಾಳದೇವ ರಾಣಾಗೆ ಮದ್ವೆಯಂತೆ, ಹುಡುಗಿ ಯಾರು? 
ಹೀರೋ ಪಾತ್ರವನ್ನು ಸೃಷ್ಟಿಸುವ ಮೊದಲೇ ಬಾಹುಬಲಿ ಎಂಬ ಹೆಸರು ಅವರ ಮನಸ್ಸಿನಲ್ಲಿತ್ತು. ಯಾಕೆಂದರೆ ಆ ಹೆಸರು ಬಾಹುಬಲಕ್ಕೆ ಪ್ರತೀಕವಾಗಿ ಭಾರತೀಯರ ಮನಸ್ಸಿನಲ್ಲಿ ಎಷ್ಟೋ ಕಾಲದಿಂದಲೂ ಇದೆ. ಕರ್ನಾಟಕದಲ್ಲಿ ಮುಖ್ಯವಾಗಿ ಬಾಹುಬಲಿಯ ಪ್ರತಿಮೆಗಳು ಇವೆ. ಹೀಗಾಗಿ ಅದೇ ಹೆಸರು ಕಚ್ಚಿಕೊಂಡಿತು. 

ಶಿವಗಾಮಿ ದೇವಿ ಈ ಪರಿ ಎಣ್ಣೆ ಹೊಡೀತಾರ?
ಇನ್ನು ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬ ಪ್ರಶ್ನೆಯಂತೂ ಇಡೀ ದೇಶದ ಜನರ ಬಾಯಲ್ಲಿ ಆಗ ನಲಿದಾಡುತ್ತಿತ್ತು. ಒಮ್ಮೆ ಪ್ರಸಾದ್‌, ವಿಮಾನ ಪ್ರಯಾಣ ಮಾಡಲು ಹೊರಟವರು, ತಮ್ಮ ಬೋರ್ಡಿಂಗ್‌ ಪಾಸನ್ನು ಸೆಕ್ಯುರಿಟಿ ಗೇಟ್‌ನಲ್ಲಿ ಬಿಟ್ಟು ಬಂದುಬಿಟ್ಟಿದ್ದರಂತೆ. ಅದನ್ನು ತರಲು ವಾಪಸ್‌ ಹೋದಾಗ, ಅಲ್ಲಿದ್ದ ಸೆಕ್ಯುರಿಟಿ ಆಫೀಸರ್‌ ಇವರ ಗುರುತು ಹಿಡಿದ. "ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ? ಹೇಳಿ, ಹೇಳಿದರೆ ಪಾಸ್‌ ಕೊಡ್ತೀನಿ'' ಎಂದು ಲೈಟಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದನಂತೆ! ಹೀಗೆ ವಿಜಯೇಂದ್ರ ಪ್ರಸಾದ್‌ ನೆನಪಿಸಿಕೊಳ್ಳುತ್ತಾರೆ.

ಪ್ರಭಾಸ್‌ ಜೊತೆಯ ರಿಲೇಷನ್‌ಶಿಪ್‌ ಬಗ್ಗೆ ಬಾಯಿ ಬಿಟ್ಟ ಅನುಷ್ಕಾ ಶೆಟ್ಟಿ! 

click me!