
ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿಯೂ ಸೌಂಡ್ ಮಾಡೋಕೆ ರೆಡಿಯಾಗಿದ್ದಾರೆ. ಇದೀಗ ಪತ್ನಿಗೆ ದುಬಾರಿ ಗಿಫ್ಟ್ ಕೊಡೋ ಮೂಲಕ ಸುದ್ದಿಯಾಗಿದ್ದಾರೆ ಸಂಜಯ್ ದತ್.
ಅಂತಿಂಥಾ ಗಿಫ್ಟ್ ಅಲ್ಲ ಇದು, ಬರೋಬ್ಬರಿ 100 ಕೋಟಿ ಬೆಲೆಯ ಗಿಫ್ಟ್. ಅಚ್ಚರಿಯಾಯ್ತಾ..? ಸಂಜಯ್ ದತ್‌ಗೆ ಇದೇನೂ ದೊಡ್ಡ ಮೊತ್ತ ಅಲ್ಲ ಬಿಡಿ. ಆದ್ರೂ ಅಷ್ಟು ದುಬಾರಿಯಾಗಿ ಕೊಡಿಸಿದ್ದೇನನ್ನು..?
ಕ್ಲೈಮ್ಯಾಕ್ಸ್‌ಗೆ ಬಂದ ಕೆಜಿಎಫ್ 2;ರಾಕಿ ವರ್ಸಸ್ ಅಧೀರ ನಡುವೆ ಜಂಗಿ ಕುಸ್ತಿ!
ಪಾಲಿ ಹಿಲ್ಸ್‌ನಲ್ಲಿ ಇಂಪೀರಿಯಲ್ ಹೈಟ್ಸ್ 4 ಫ್ಲಾಟ್‌ನ್ನು ಪತ್ನಿ ಮಾನ್ಯತಾಗೆ ಗಿಫ್ಟ್ ಮಾಡಿದ್ದಾರೆ ಸಂಜಯ್. 100 ಕೋಟಿ ಬೆಲೆ ಬಾಳೋ ಈ ಭವ್ಯ ಬಂಗಲೆಗಳನ್ನು ಡಿಸೆಂಬರ್‌ನಲ್ಲಿ ಪತ್ನಿಗೆ ಉಡುಗೊರೆಯಾಗಿ ನೀಡಿದ್ದರು. ಇದಾಗಿ ಒಂದೇ ವಾರಕ್ಕೆ ಉಡುಗೊರೆಯನ್ನು ಪತಿಗೆ ಮರಳಿಸಿದ್ದಾರೆ ಮಾನ್ಯತಾ.
ಸರ್ಕಾರದ ಪ್ರಕಾರ ಈ ಕಟ್ಟಡಗಳ ಬೆಲೆ 26 ಕೋಟಿ. ಆದರೆ 100 ಕೋಟಿ ಪಾವತಿಸಲಾಗಿದೆ ಎನ್ನುತ್ತಾರೆ ಬ್ರೋಕರ್‌ಗಳು. ಇದರ ಮಾರ್ಕೆಟ್ ವಾಲ್ಯೂ 100 ಕೋಟಿ ಎಂಬುದು ಬ್ರೋಕರ್‌ಗಳ ಅಭಿಪ್ರಾಯ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.